Composer : Shri Lakumeesha ankitha
Shri Surendra Tirtha – 1504 – 1575
Ashrama Gurugalu : Sri Raghunandana Teertharu
Ashrama Shishyaru : Sri Vijayeendra Theertharu
Aradhana Tithi : Pushya Shukla Dwadashi
यश्चकारोपवासेन त्रिवारं भूप्रदक्षिणम् ।
तस्मै नमो यतीन्द्राय श्रीसुरेन्द्रतपस्विने ॥
ಯಶ್ಚಕಾರೋಪವಾಸೇನ ತ್ರಿವಾರಂ ಭೂಪ್ರದಕ್ಷಿಣಮ್ |
ತಸ್ಮೈ ನಮೂ ಯತೀಂದ್ರಾಯ ಶ್ರೀಸುರೇಂದ್ರ ತಪಸ್ವಿನ್ ||
ಶ್ರೀ ಸುರೇಂದ್ರರ ಪಾದ ತೋಷದಲಿ ತುತಿಸೆ
ಮತಿ ಮೀಸಲಾಗಲಿ ಎಂದು ಶ್ರೀಶನ್ನ ಬೇಡುವೇನು ||
ಕೋಶ ಧನ ಸ್ತ್ರೀ ಮೋಹ ಆಶಾದಿಗಳ ಕಳದು
ವಾಸುದೇವನ ದಿವ್ಯ ದಾಸಯವನೆ ಕೊಡು ಎಂದು ||ಅ ಪ||
ಶ್ರೀ ರಘುನಂದನರ ಕರ ಪಾರಿಜಾತರಾಗಿ
ಶ್ರೀ ರಘೂವಂಶಾಬ್ಧಿ ಚಂದ್ರನ್ನ ಪೂಜಿಸುತ
ಧಾರುಣಿಯ ಎರಾದೊಂದು ಬಾರಿ ಅನಶನ ವ್ರತದಿ
ಸಾರಿ ದುರ್ವಾದಿಗಲ ಧೀರರೋಡಿಸಿದ ||೧||
ಚಂಡ ತೇಜದಿ ಇವರು ದಂಡಧಾರಿ ಶ್ರೀ
ಕಮಂಡಲವ ಧರಿಸಿ ಕೋದಂಡ ಪಾಣೀಯ ನೆನೆದು
ಭಂಢ ಮತಗಳ ಶಾಸ್ತ್ರ ಕಂಡು ಮುರಿದ ಮಧ್ವರ
ಹಿಂದು ಕೃತಿಗಳ ಪಠಿಸಿ ಪಂಡಿತೋತ್ತಮರಾದ ||೨||
ಮಧುವೈರಿ ಅಜ್ಞೆಯಲಿ ವಿಜಯೀಂದ್ರ ತೀರ್ಥರಿಗೆ
ಮುದದಿಂದ ಪಟ್ಟಗಟ್ಟಿ ವಿಧಿಜನಕ ಲಕುಮೀಶನ
ಪದ ನೆನೆದು ಮುಕ್ಕೋಟಿ ದ್ವಾದಶಿ ದಿನದಂದು
ಮದುರೆ ಪಟ್ಟನದಲಿ ವೃಂದಾವನ ಸೇರ್ದಾ ||೩||
shrI surEMdrara paada tOShadali tutise
mati mIsalAgali eMdu shrIshanna bEDuvEnu ||
kOsha dhana strI mOha AshAdigaLa kaLadu
vAsudEvana divya dAsayavane koDu eMdu ||a pa||
shrI raghunaMdanara kara pArijAtarAgi
shrI raghUvaMshAbdhi chaMdranna pUjisuta
dhAruNiya erAdoMdu bAri anashana vratadi
sAri durvAdigala dheerarODisida ||1||
chaMDa tEjadi ivaru daMDadhAri shrI
kamaMDalava dharisi kOdaMDa pANIya nenedu
bhaMDha matagaLa shAstra kaMDu murida madhvara
hiMdu kRutigaLa paThisi paMDitOttamarAda ||2||
madhuvairi aj~jeyali vijayeeMdra tIrtharige
mudadiMda paTTagaTTi vidhijanaka lakumeeshana
pada nenedu mukkOTi dvAdashi dinadaMdu
madure paTTanadali vRuMdAvana sErdA ||3||
Leave a Reply