Composer : Shri Lakshmipati vittala on Shri Gurushrisha vittala
ಏಸು ಜನ್ಮದ ಫಲವೋ , ಈ ಗುರು ಕರುಣಾ |
ಏಸು ಜನ್ಮದ ಫಲವೋ || ಪ. ||
ಏಸು ಜನ್ಮದ ಫಲ | ಲೇಸೂ ಸೂರಿ ಗುರು |
ಶ್ರೀಶ ರಾಯರ ಕರುಣಾ |
ಸೂಸಿದ ಸುಖವೆನಗೆ || ಅ.ಪ ||
ಕೇವಲ ದ್ರವವಾರಿ ವತ್ಸ ತನ್ನಯ ನಿಹಾ |
ಗೋವಿನ ಕಾಣದೆ ಪುಡುಕುತಿರೆ |
ಆ ವ್ಯಾಳ್ಯೆ ಸುರಧೇನು ತಾನೆ ಒದಗಿ ಬಂದು |
ಸಾವಧಾನದಿ ಮೊಲಿಯಾನುಣಿಸಿ ಸಂತೈಸಿದಂತೆ || ೧ ||
ಬ್ಯಾಸಿಗಿ ಬಿಸಿಲಿಂದ ಸಂತಪ್ತನಾಗಿ ನಿ |
ಶ್ವಾಸಾವೈದುವ ಸಮಯದಲ್ಲಿ ಮತ್ತೆ |
ಭೂಸುರ ರೂಪದಿ ಕಲ್ಪವೃಕ್ಷವೇ ಬಂದು |
ಲೇಸಾದ ಉದಕ ಪೂರೈಸಿ ನೆಲಳಿತ್ತಂತೆ || ೨ ||
ಪರಮ ದರಿದ್ರನೋರ್ವನು ದೇಶದೇಶವಾ |
ತಿರುಗುತಿರಲು ಚಿಂತಾಮಣಿಯು ತಾನೆ |
ಭರದಿಂದ ಕೈಯಲ್ಲಿವೊದಗಿ ತಾ ಬಂದಂತೆ |
ಸಿರಿ ಲಕ್ಷ್ಮೀಪತಿ ವಿಠಲ ಪರನೆಂದು ಅರುಹಿದ || ೩ ||
Esu janmada PalavO , I guru karuNA |
Esu janmada PalavO || pa. ||
Esu janmada Pala | lEsU sUri guru |
SrISa rAyara karuNA |
sUsida suKavenage || a.pa ||
kEvala dravavAri vatsa tannaya nihA |
gOvina kANade puDukutire |
A vyALye suradhEnu tAne odagi baMdu |
sAvadhAnadi moliyAnuNisi saMtaisidaMte || 1 ||
byAsigi bisiliMda saMtaptanAgi ni |
SvAsAvaiduva samayadalli matte |
BUsura rUpadi kalpavRukShavE baMdu |
lEsAda udaka pUraisi nelaLittaMte || 2 ||
parama daridranOrvanu dESadESavA |
tirugutiralu ciMtAmaNiyu tAne |
BaradiMda kaiyallivodagi tA baMdaMte |
siri lakShmIpati viThala paraneMdu aruhida || 3 ||
Leave a Reply