ಶ್ರೀವಿಜಯದಾಸಾರ್ಯ ವಿರಚಿತ
ಪ್ರಾರ್ಥನಾ ಸುಳಾದಿ
(ಅಪರೋಕ್ಷಜ್ಞಾನಿಗಳಿಗೆ ಶ್ರೀಹರಿಯ
ಅನುಗ್ರಹದಿಂದ ಯಾವ ದೋಷವು ಸೋಂಕಲಾರವು.
ಬಂಧಕವಾದ ಪ್ರಪಂಚವೂ ಅವರಿಗಿಲ್ಲ.
ಭಕ್ತಾಪರಾಧ ಸಹಿಷ್ಣುವೆ, ಇಂಥ
ಅಪರೋಕ್ಷಜ್ಞಾನಿಗಳಾದ ಸಾಧುಸಜ್ಜನರ
ಸಂಗ ಕೊಡುವದೆಂದು ಪ್ರಾರ್ಥನೆ.)
ರಾಗ: ನಾಟಿಕುರಂಜಿ
ಧ್ರುವತಾಳ
ದೋಷ ಎನಗೆ ಉಂಟೆ ಕ್ಷೇಶ ಎನಗೆ ಉಂಟೆ
ನಾಶ ಎನಗೆ ಉಂಟೆ ಮೊರೆ ಹೊಗಲು ನಿನ್ನ
ಆಶೆ ಮಾಡಿದ ಮಾನಿಸನು ಭವಾಂಬುಧಿ
ಈಸುವದರಿದೇನೋ ಕ್ಲೇಶವನೆನಲಾಗಿ
ಸಾಸಿವಿ ಕಾಳ ಲಂಘಿಸಿದಂತಿಪ್ಪದು
ಏಸೇಸು ಜನ್ಮದ ಸಂಸಾರ ಎಂಬುವದು
ಕಾಸುವೀಸಾ ಸಂಪಾದಿಸಿಕೊಂಬೋದಲ್ಲ
ಕಾಸಾವೀಸಿಯಿಂದ ಘಾಸೆ ಬೀಳುವದಲ್ಲ
ಲೇಶವಾದರು ತಾಮಸ ಧಾವತಿ ಇಲ್ಲ
ನೀ ಸಲಹುವದು ಮನಸು ಬಂದಲ್ಲಿ ಯಿಟ್ಟು
ಕ್ಲೇಶನಾಶನ ನಮ್ಮ ವಿಜಯವಿಟ್ಠಲ ತಿಮ್ಮ
ಭೂಷಣ ವಾರ್ತಿ ವಿಶೇಷ ನಿನ್ನದಲ್ಲವೆ || ೧ ||
ಮಟ್ಟತಾಳ
ಪಾಪಾತ್ಮನ ಮಾಡು ಪುಣ್ಯವಂತನ ಮಾಡು
ದೀಪದವನ ಮಾಡು ದೀನ ನರನ ಮಾಡು
ತಾಪಸಿಗನ ಮಾಡು ತಾಪತ್ರಯದಿ ಸಂ –
ತಾಪದಲಿ ನರಕ ಕೂಪದೊಳಗೆ ಪೊಗಿಸು
ಕುಚ್ಛಿತ ಫಲವನುಣಿಸು
ಅಪವರ್ಗದಲಿ ಸಲ್ಲಾಪವನ್ನೆ ಬಡಿಸು
ಮಾಪತಿ ನಿನ್ನಯ ಪಾಲಿಗೆ ಬಂದವನೊ
ನಾ ಪೇಳುವದೇನೋ ಅಪಾರ ಗುಣನಿಧಿ
ಪಾಪರಹಿತ ಪೂರ್ಣ ವಿಜಯವಿಟ್ಠಲರೇಯ
ನೋಪಿ ಸಮಸ್ತವು ನಿನವಲ್ಲವೇನೋ || ೨ ||
ತ್ರಿವಿಡಿತಾಳ
ಮಾನವಾವುದು ಅವಮಾನವಾವುದು ಎನಗೆ
ಜ್ಞಾನವಾವುದು ಅಜ್ಞಾನವಾವುದು ಎನಗೆ
ಸ್ಥಾನವಾವುದು ಎನಗಾ ಸ್ಥಾನಾವಾವುದು ಎನಗೆ
ಹಾನಿ ವೃದ್ಧಿಗಳೇನು ಹೀನಾ ಸನ್ಮಾನೇನು
ಕಾನನವೇನು ಗ್ರಾಮಾನುಗ್ರಾಮಗಳೇನು
ನೀನೊಲಿದು ನಿನ್ನಯ ಧ್ಯಾನವಿತ್ತವರಿಗೆ
ಆನಂದವಾದ ಸಾಧನವಲ್ಲದೆ ಮಿಗಿ –
ಲಾನು ಚಿಂತಿಪದೇನು ಶ್ರೀನಿವಾಸನೆ ಎನಗೆ
ನೀ ನೀಯಾದವನಿಗೆ ಆನೆ ಸಾಲು ಬಂದರೆ
ನಾನದ ನೋಡದೆ ಶ್ವಾನನ ಪರಿಯೆಂಬೆ
ಶ್ರೀನಿಧಿ ವಿಜಯವಿಟ್ಠಲ ಕರುಣಾಂಬುಧಿ
ನೀನಿತ್ತದೆ ಪಥ್ಯ ವಿಷ ಸುಧೆಯಾಗಲಿ || ೩ ||
ಅಟ್ಟತಾಳ
ಕರ್ಮವಾಗಲಿ ಸುಕರ್ಮವಾಗಲಿ ನೀನು
ನಿರ್ಮಾಣವನು ಮಾಡಿ ನಿರ್ಣೈಸಿದಲ್ಲಿಗೆ
ಧರ್ಮವೆ ಎನಗದು ಅನಂತ ಜನ್ಮಕ್ಕೆ
ದುರ್ಮತಿ ಎನಗಿಲ್ಲ ಸುರರಾ ದುರ್ಲಭನೆ
ಧರ್ಮಕೃತೇ ನಾಮ ವಿಜಯವಿಟ್ಠಲರೇಯ
ಚರ್ಮಪಾಲನಾದರೇನೋ ನಿನ್ನವನೋ || ೪ ||
ಆದಿತಾಳ
ಘನ್ನ ಪಾಪವಾದರು ಸತ್ಪುಣ್ಯ ಕಾಣೊ ಎನಗದು
ನಿನ್ನ ಪಾದ ಕಂಡ ಮೇಲೆ ಅನ್ಯಥ ಪ್ರಪಂಚ ಉಂಟೆ
ರನ್ನದೇವ ವಿಜಯವಿಟ್ಠಲ ಇನ್ನು ಸಂಶಯವು ಮಾಡೆ
ಎನ್ನ ಚಿಂತೆ ಅನುದಿನ ನಿನ್ನದಲ್ಲವೇನೊ ರಂಗ || ೫ ||
ಜತೆ
ಅರಸನೊಲಿದವನಿಗೆ ಎಂತಾದರೆ ಏನು
ಸರಸವಾಗಿಪ್ಪುದು ವಿಜಯವಿಟ್ಠಲರೇಯ ||
SrIvijayadAsArya viracita
prArthanA suLAdi
(aparOkShaj~jAnigaLige SrIhariya
anugrahadiMda yAva dOShavu sOMkalAravu.
baMdhakavAda prapaMcavU avarigilla.
BaktAparAdha sahiShNuve, iMtha
aparOkShaj~jAnigaLAda sAdhusajjanara
saMga koDuvadeMdu prArthane.)
rAga: nATikuraMji
dhruvatALa
dOSha enage uMTe kShESa enage uMTe
nASa enage uMTe more hogalu ninna
ASe mADida mAnisanu BavAMbudhi
IsuvadaridEnO klESavanenalAgi
sAsivi kALa laMGisidaMtippadu
EsEsu janmada saMsAra eMbuvadu
kAsuvIsA saMpAdisikoMbOdalla
kAsAvIsiyiMda GAse bILuvadalla
lESavAdaru tAmasa dhAvati illa
nI salahuvadu manasu baMdalli yiTTu
klESanASana namma vijayaviTThala timma
BUShaNa vArti viSESha ninnadallave || 1 ||
maTTatALa
pApAtmana mADu puNyavaMtana mADu
dIpadavana mADu dIna narana mADu
tApasigana mADu tApatrayadi saM –
tApadali naraka kUpadoLage pogisu
kucCita PalavanuNisu
apavargadali sallApavanne baDisu
mApati ninnaya pAlige baMdavano
nA pELuvadEnO apAra guNanidhi
pAparahita pUrNa vijayaviTThalarEya
nOpi samastavu ninavallavEnO || 2 ||
triviDitALa
mAnavAvudu avamAnavAvudu enage
j~jAnavAvudu aj~jAnavAvudu enage
sthAnavAvudu enagA sthAnAvAvudu enage
hAni vRuddhigaLEnu hInA sanmAnEnu
kAnanavEnu grAmAnugrAmagaLEnu
nInolidu ninnaya dhyAnavittavarige
AnaMdavAda sAdhanavallade migi –
lAnu ciMtipadEnu SrInivAsane enage
nI nIyAdavanige Ane sAlu baMdare
nAnada nODade SvAnana pariyeMbe
SrInidhi vijayaviTThala karuNAMbudhi
nInittade pathya viSha sudheyAgali || 3 ||
aTTatALa
karmavAgali sukarmavAgali nInu
nirmANavanu mADi nirNaisidallige
dharmave enagadu anaMta janmakke
durmati enagilla surarA durlaBane
dharmakRutE nAma vijayaviTThalarEya
carmapAlanAdarEnO ninnavanO || 4 ||
AditALa
Ganna pApavAdaru satpuNya kANo enagadu
ninna pAda kaMDa mEle anyatha prapaMca uMTe
rannadEva vijayaviTThala innu saMSayavu mADe
enna ciMte anudina ninnadallavEno raMga || 5 ||
jate
arasanolidavanige eMtAdare Enu
sarasavAgippudu vijayaviTThalarEya ||
Leave a Reply