Prarthana suladi 66 – Vijayadasaru

Smt.Nandini Sripad

ಶ್ರೀವಿಜಯದಾಸಾರ್ಯ ವಿರಚಿತ
ಪ್ರಾರ್ಥನಾ ಸುಳಾದಿ – ೬೬
(ಭವರೋಗ ವೈದ್ಯನಾದ ಶ್ರೀ ಹರಿಯೇ,
ಭವರೋಗ ಪರಿಹರಿಸಿ ಎನ್ನ ಯೋಗ್ಯತೆಯರಿತ ನೀನು

ಎನ್ನ ಭಕ್ತರಂತೆ ಪರಿಪಾಲಿಸುವದೆಂದು ಪ್ರಾರ್ಥನೆ.)
ರಾಗ: ಶಂಕರಾಭರಣ

ಝಂಪಿತಾಳ

ಭವರೋಗ ಪರಿಹರಿಸೊ ಭವರೋಗದ ವೈದ್ಯ
ಭವಣೆ ಬಡಲಾರೆನೊ ಭವದೊಳಗೆ
ಭವದಿಂದ ಬಂದು ಸಂಭವನಾದೆ ನಾನಾಕ
ಭವನದೊಳಗೆ ಉದುಭವನಾಗುತ
ಭವಲಿಪ್ತರಾದ ಗುಂಭವನು ನೋಡಿದರೆ ಶು –
ಭವನು ಕಾಣಿನೊ ವೈಭವದರಸೆ
ಭವತಾಪಕೆ ನಾಭವನು ಪೋಗಲು ಸುಖಾನು –
ಭವನು ಮಾಳ್ಪವರಾರು ಭವಸುರರೊಳು
ಭವ ವಿರಹಿತಕಾಯ ವಿಜಯವಿಟ್ಠಲ ದುರ್ಲ-
ಭವವನು ಮಾಡದಲೆ ಲಾಭವನೆನಿಸಿ ತೋರೋ || ೧ ||

ಮಟ್ಟತಾಳ

ಕಾಲಕರ್ಮ ಕಾಮ ಸ್ವಭಾವದಲ್ಲಿಂದ
ಮೇಲಾಗಿ ನೆಸಗಿದರು ಪೋಗದು ಭವರೋಗ
ಫಾಲದಲಿ ಬರೆದ ಬರೆದ ಲಿಖಿತಗಳು
ಶ್ರೀಲೋಲನೆ ನಿನ್ನ ಪಾದಾರ್ಚನೆ ಮಾಡೆ
ಮೂಲ ದುರ್ಲಿಪಿಗಳು ಜನುಮ ಜನುಮ ಭವ
ಮಾಲಿಕೆಗಳು ನಿವಾರಣವಾಗವೇನು
ಕಾಲಾದಿ ನಾಮಕನೆ ವಿಜಯವಿಟ್ಠಲ ನಿನ್ನ
ಆಳಾಗದಲೇವೆ ಆವ ಸಾಧನವಿಲ್ಲ || ೨ ||

ತ್ರಿವಿಡಿತಾಳ

ವರ ಪ್ರಲ್ಹಾದ ನಾರದ ಮುನಿ ಶುಕ ಪರಾ –
ಶರನು ರುಕುಮಾಂಗದ ಗಂಗಾತನಯಾ
ನರ ಪುಂಡರೀಕ ಶೌನಕನಂಬರೀಷನು
ತರುಳ ಧ್ರುವನು ವಿದುರ ವಿಭೀಷಣಾ –
ದ್ಯರು ನಿನ್ನ ಪಾದವ ನೆರೆನಂಬಿ ಭಜಿಸಿ ದು –
ಸ್ತರವಾದ ಭವಾಂಬುಧಿ ಉತ್ತರಿಸಿದರು
ಕರಿರಾಜವರದ ಶ್ರೀವಿಜಯವಿಟ್ಠಲ ನಿನ್ನ
ಕರೆದಾರಲ್ಲದೆ ಭಾಗ್ಯ ಸುರಿದವರಾರಯ್ಯ || ೩ ||

ಅಟ್ಟತಾಳ

ಆವ ಭಕುತ ನಿನಗಾವ ವಸ್ತವನಿತ್ತ
ಆವ ಭಕುತ ನಿನಗಾವ ಪುರವನಿತ್ತ
ಆವ ಭಕುತ ನಿನಗಾವ ವಸನವನಿತ್ತ
ಆವ ಭಕುತ ನಿನಗಾವಲ್ಲಿ ಉಣಸಿದ
ಆವ ಭಕುತ ನಿನಗಾವೆಡೆ ಸಲಹಿದ
ಆವಾವರಾದರು ಆವಾದಿತ್ತದು ಕಾಣೆ
ದೇವ ಎನಗೆ ಕರುಣಾವಲೋಕನದಿಂದ
ಸೇವೆಯ ಕೈಕೊಂಡು ಪಾವನ್ನ ಮಾಡುವದು
ಮಾವಮರ್ದನ ರಂಗ ವಿಜಯವಿಟ್ಠಲರೇಯ
ಗೋವಿಂದನೆಂದೆಂಬೊ ಜೀವಾಳ ಭಕ್ತರಿಗೆ || ೪ ||

ಆದಿತಾಳ

ನಾರದ ಮನದಲ್ಲಿ ಅಕ್ರೂರನ್ನ ಮಾಡುವದು
ಪಾರಾಶರಾಮಕ್ಕೆ ವಿದೂರನೆಂದೆನಿಸೋದು
ಘೋರ ಕರ್ಮದ ತತಿಗೆ ತೋರು ವಿಭೀಷಣನಂತೆ
ವಾರವಾರದಲ್ಲಿ ಪಂಚ ಕ್ರೂರರಿಗೆ ಭೀಷ್ಮನೆನಿಸು
ಆ ರುಕುಮಾಂಗದ ವಿಟ್ಟಿಸಾರಿಗೆ ಎನ್ನ ಹೃದಯ
ವಾರುಣ ಪುಂಡರೀಕ ಸೇರಿ ಶುಕನಂತೆ ಪೊಳೆದು
ಮೂರುತಿಯ ಕಾಣಿಸುತ್ತ ಚಾರು ಪ್ರಹ್ಲಾದನಂತೆ ಮಾಡೊ
ಭಾರಿ ದೈವವಂಬರೀಷ ಕಾರುಣ್ಯದಲ್ಲಿ ನಿನ್ನ
ಆರಾಧಿಸುವ ನಿನಗೆ ಮಾರಿ ಮೃತ್ಯು ಭವದ ಭೀತಿ
ದೂರವಲ್ಲದೆ ಸಾರೆವುಂಟೆ
ವಾರಿಧಿಶಯನ ನಮ್ಮ ವಿಜಯವಿಟ್ಠಲ ನಿನಗೆ
ಆರಾದರೂ ನಿತ್ಯವಾರಡಿಯಿಲ್ಲದವರು || ೫ ||

ಜತೆ

ಅವರವರರಿತು ಕಾಯುವ ವಿಜಯವಿಟ್ಠಲ
ಅವನೀಶಾ ಎನ್ನರಿತು ಪೊರೆದು ಪಾವನ ಮಾಡೊ ||


SrIvijayadAsArya viracita
prArthanA suLAdi – 66
(BavarOga vaidyanAda SrI hariyE,
BavarOga pariharisi enna yOgyateyarita nInu enna

BaktaraMte paripAlisuvadeMdu prArthane.)
rAga: SaMkarABaraNa

JaMpitALa

BavarOga parihariso BavarOgada vaidya
BavaNe baDalAreno BavadoLage
BavadiMda baMdu saMBavanAde nAnAka
BavanadoLage uduBavanAguta
BavaliptarAda guMBavanu nODidare Su –
Bavanu kANino vaiBavadarase
BavatApake nABavanu pOgalu suKAnu –
Bavanu mALpavarAru BavasuraroLu
Bava virahitakAya vijayaviTThala durla-
Bavavanu mADadale lABavanenisi tOrO || 1 ||

maTTatALa

kAlakarma kAma svaBAvadalliMda
mElAgi nesagidaru pOgadu BavarOga
PAladali bareda bareda liKitagaLu
SrIlOlane ninna pAdArcane mADe
mUla durlipigaLu januma januma Bava
mAlikegaLu nivAraNavAgavEnu
kAlAdi nAmakane vijayaviTThala ninna
ALAgadalEve Ava sAdhanavilla || 2 ||

triviDitALa

vara pralhAda nArada muni Suka parA –
Saranu rukumAMgada gaMgAtanayA
nara puMDarIka SaunakanaMbarIShanu
taruLa dhruvanu vidura viBIShaNA –
dyaru ninna pAdava nerenaMbi Bajisi du –
staravAda BavAMbudhi uttarisidaru
karirAjavarada SrIvijayaviTThala ninna
karedArallade BAgya suridavarArayya || 3 ||

aTTatALa

Ava Bakuta ninagAva vastavanitta
Ava Bakuta ninagAva puravanitta
Ava Bakuta ninagAva vasanavanitta
Ava Bakuta ninagAvalli uNasida
Ava Bakuta ninagAveDe salahida
AvAvarAdaru AvAdittadu kANe
dEva enage karuNAvalOkanadiMda
sEveya kaikoMDu pAvanna mADuvadu
mAvamardana raMga vijayaviTThalarEya
gOviMdaneMdeMbo jIvALa Baktarige || 4 ||

AditALa

nArada manadalli akrUranna mADuvadu
pArASarAmakke vidUraneMdenisOdu
GOra karmada tatige tOru viBIShaNanaMte
vAravAradalli paMca krUrarige BIShmanenisu
A rukumAMgada viTTisArige enna hRudaya
vAruNa puMDarIka sEri SukanaMte poLedu
mUrutiya kANisutta cAru prahlAdanaMte mADo
BAri daivavaMbarISha kAruNyadalli ninna
ArAdhisuva ninage mAri mRutyu Bavada BIti
dUravallade sArevuMTe
vAridhiSayana namma vijayaviTThala ninage
ArAdarU nityavAraDiyilladavaru || 5 ||

jate

avaravararitu kAyuva vijayaviTThala
avanISA ennaritu poredu pAvana mADo ||

Leave a Reply

Your email address will not be published. Required fields are marked *

You might also like

error: Content is protected !!