ಶ್ರೀಗುರುಶ್ರೀಶವಿಟ್ಠಲದಾಸರ ಶಿಷ್ಯರಾದ ಶ್ರೀಲಕ್ಷ್ಮೀಪತಿವಿಟ್ಠಲ ದಾಸಾರ್ಯ ವಿರಚಿತ
ಶ್ರೀವಿಜಯದಾಸರ ಸ್ತೋತ್ರ ಸುಳಾದಿ
ರಾಗ: ಹಂಸಾನಂದಿ
ಧ್ರುವತಾಳ
ಭಜನೆ ಮಾಡೆಲೊ ಮನವೆ ಭಕುತಿಯಿಂದಲಿ ಸತತ
ವಿಜಯರಾಯರ ಪಾದಪದುಮಂಗಳ
ದ್ವಿಜಕುಲೋತ್ತಮ ಸುರಧೇನು ಸತ್ಕಲ್ಪತರು
ಸುಜನಚಿಂತಾಮಣಿಯು ತಾನೆನಿಸೀ
ತ್ಯಜಿಸಿ ದುರ್ವಿಷಯಗಳ ತತ್ವೋಪದಿಷ್ಟನಾಗಿ
ನಿಜಗುರುಗಳ ಕರುಣವನ್ನೆ ಪಡೆದು
ವೃಜಿನವರ್ಜಿತನಾದ ಹರಿಯ ಸನ್ಮಹಿಮೆಗಳ
ತ್ರಿಜಗದೊಳಗೆ ತುಂಬಿ ತುಳುಕುವಂತೆ
ಯಜಿಸಿ ಪ್ರಾಕೃತದಿಂದ ಎಲ್ಲ ಶಾಸ್ತ್ರಾರ್ಥ ಸಾ –
ಹಜ ಭಕ್ತಿಯಿಂದ ರಚಿಸಿ ಸತ್ಕವನವ
ಋಜುಮಾರ್ಗ ತೋರ್ಪ ಗದ್ಯ ಪದ್ಯ ಪದ ಸುಳಾದಿಗಳ
ಋಣಗಣದರಸಿನ ದಾಸರಾದ
ಪ್ರಜೆಗಳಿಗೆ ಗತಿಸಾಧನವಾಗುವಂತೆ ತೋರಿ
ಕುಜನರ ಸಂಗವನ್ನೇ ದೂರಗೈಸಿ
ಸುಜಗದೊಳಗೆ ಸತ್ಸಂತಾನ ನಿಲಿಸಿ ಸಾ –
ಮಜನಂತೆ ಚರಿಸಿ ಸದ್ಧರ್ಮದಿಂದ
ಅಜನಪಿತನ ಪಾದಾಂಬುಜದಲ್ಲಿ ನಿಲಿಸಿ ಮನ
ಭುಜಗಶಯನನ ಪುರವ ಸಾರಿದರು
ವಿಜಯಸಾರಥಿ ಲಕ್ಷ್ಮೀಪತಿವಿಟ್ಠಲರೇಯನ
ನಿಜದಾಸರೊಲಿಮಿ ಪಡೆಯೆ ವಿಜಯವೀವನು ಹರಿಯು || ೧ ||
ಮಟ್ಟತಾಳ
ಭೂಸುರನೆಂದೆನಿಸಿ ಈ ಸಮೀರ ಮತದಿ
ಭಾಸಿಸಿ ಮಾನವೀದೇಶದೊಳಗೆ ಶ್ರೀನೀ –
ವಾಸನ ಸುತನೆನಿಸಿ ಆ ಸುತುಂಗ ತಡಿ ಆ –
ವಾಸಣುಬದರಿಯಲಿ ಕ್ಲೇಶ ಕಳೆದು ಇದ್ದು
ತೋಷಿಸುತಲಿ ಹರಿಯಾದೇಶದಿಂದ ಮತ್ತೆ
ಕಾಶಿಗೈದು ಗಂಗಾ ಆ ಸರಿತದಿ ಮಿಂದು
ಆ ಸಮೀಪದಲ್ಲಿ ಮೀಸಲಿಂದ ಹರಿಯಾ
ಧ್ಯಾಸದಲಿರುತಿರಲು ಶ್ರೀಶನಾಜ್ಞೆಯಿಂದ
ಆ ಸುರಮುನಿ ಪುರಂದರದಾಸರೂ ಬಂದು
ಈ ಸುಮನಸಗುಪದೇಶ ಅಂಕಿತವಿತ್ತು
ವಾಸರೋಸರ ಶ್ರೀನಿವಾಸ ವಿಜಯವಿಟ್ಠ –
ಲೇಶನ ಭಜಿಸೆಂದು ಶಾಸನವ ಮಾಡಿ ಸಂ –
ತೋಷದಿಂದ ಹರಿಯಾ ದಾಸ್ಯವನ್ನೆ ಇತ್ತು –
ಲ್ಹಾಸದಿ ಪೋಗಲು ವಾಸವ ಮೊದಲಾದ
ಆ ಸಮಸ್ತ ಸುರರು ಸೋಸಿಲಿ ಶಿರದೂಗಿ
ಲೇಶ ಕಾಣೆವಿನ್ನು ಈ ಸುಭಾಗ್ಯಕೆನುತಾ
ವಾಸುದೇವನ ಮಹಿಮಿ ವಿಶೇಷಗಳಹುದೆಂದು
ದಾಸವರದ ಲಕ್ಷ್ಮೀಪತಿವಿಟ್ಠಲನಂಘ್ರಿ ಉ –
ಪಾಸಿಸಿದರು ಹರಿದಾಸ್ಯವನ್ನೇ ಪಡೆದು || ೨ ||
ತ್ರಿವಿಡಿತಾಳ
ಧರೆಯೊಳು ಗುರುಗಳು ನರಹರಿ ಮಹಿಮಿಯಾ
ವರ ಶ್ರುತಿ ಸ್ಮೃತಿ ಸಮ್ಮತಿಯಿಂದ ಬದ್ಧವಾದ
ಪರಿಮಿತಾ ಸಪಾದೀರೆರಡು ಲಕ್ಷವನು ವಿ –
ಸ್ತರಿಸಿದ ತಿಳಿದು ಅವರಾಜ್ಞೆಯಿಂದಾ
ಉರವರೀತ ತ್ರಿಪಾದ ಪೂರ್ತಿಗೈಸಿ ಎಲ್ಲವನ್ನು
ಬೆರಸಿ ಐದುಲಕ್ಷವೆಂದೆನಿಸೀ
ಗುರುಶಿಷ್ಯ ಭಾವಾವು ನರರಿಗೆ ಅರುಹಲು
ಪರಿಪೂರ್ಣಗೈದು ಪಾವನನೆನಿಸಿ
ಗುರುವಂತರ್ಗತನಾದ ಹರಿಗೆ ಅರ್ಪಿಸಿ ಭಕ್ತಿ
ಭರಿತನಾಗಿ ಮತ್ತೆ ಇಳಿಯೊಳಗೆ
ದುರುಳಾ ಜನರಿಗೆ ಗೋಚರಿಸದಂದದಲಿ ಸಜ್ಜ –
ನರಿಗೆ ಸನ್ಮಾರ್ಗವನ್ನೆ ತೋರಿ
ಹರಿಯೇ ಸರ್ವೋತ್ತಮಾ ಮರುತ ಜಗದ್ಗುರು
ತರತಮ ಪಂಚಭೇದಗಳು ಸಿದ್ಧಾ
ಸರಸಿಜೋದ್ಭವ ಮುಖ್ಯಾ ಸುರಗಣರೆಲ್ಲ ಕಿಂ –
ಕರರು ಶ್ರೀಹರಿಗೆಂಬಾ ಪರಿ ಅರುಹೀ
ಹಿರಿದಾದಾ ಕವನವು ವಿರಚಿಸಿದ್ಯೋ ಎಲ್ಲಾ
ಧರಿಯಾ ಒಳಗೆ ತುಂಬಿ ತುಳುಕುತಿದಕೋ
ಹರಿದಾಸರೊಳಗಾರು ಸರಿಗಾಣೆ ಸರಿಗಾಣೆ
ನರರೆನ್ನಬಹುದೇನೋ ಸುರರಲ್ಲದೆ
ಕರುಣಸಾಗರ ಲಕ್ಷ್ಮೀಪತಿವಿಟ್ಠಲನ ದಿವ್ಯ –
ಚರಣಗಳರ್ಚಿಸಿದ ಪರಮ ಭಾಗ್ಯವಂತ || ೩ ||
ಅಟ್ಟತಾಳ
ವಿಕಸಿತವಾಗಿವರ ಮುಖಕಮಲದಲಿಂದ
ಸಕಲ ಶಾಸ್ತ್ರಾರ್ಥ ಸುಯುಕುತಿಯಿಂದಲಿ ಪೇಳ್ದೆ
ಸುಕೃತ ಬಣ್ಣಿಪರ ಭಾಗ್ಯಕ್ಕೆ ಎಣೆಗಾಣೆನೊ
ಭಕುತಿಲಿ ಪಠಿಸುವ ಶಕುತರಘವು ಗಜ –
ಭುಕುತ ಕಪಿತ್ಥದೋಲ್ ವ್ಯಕುತವಾಗದಲೆ ಪಾ –
ವಕ ಪೊಕ್ಕ ತೂಲದ ನಿಕಟದಂತಾಗೋದು
ಕಕುಲಾತಿಯಿಂದ ಪ್ರಾಕೃತವೆಂದು ಅವಮ –
ನಕೆ ತರದಿಹ ಜನ್ಮಧಿಕುವೆನಿಸುವದವನ
ಅಕಟ ಅವಗೆ ನರಕಪ್ಪುವದೆ ನಮ್ಮ
ಲಕುಮಿಪತಿಯ ಮಹಿಮಿ ಯುಕುತವಾದ ಪ್ರಾ –
ಯುಕುತ ಸಂಸ್ಕೃತವೆಂಬಾಧಿಕವೇನು ತಿಳಿಯೆ ಶ್ರೀ –
ಸುಖಮುನಿ ಇವರ ಸದ್ಭಕುತಿಗೆ ಮೆಚ್ಚಿ ಪ್ರೇ –
ರಕನಾಗಿ ಸತತ ಸಮ್ಮುಖದಿ ತೋರಿಕೊಂಡು
ಯುಕುತಿ ಸದ್ಭಕುತಿ ವೀರಕುತಿ ಇತ್ತದರಿಂದ
ಪ್ರಕಟಿಸಿದಹುದೆಂದು ಸಚಲರು ತಿಳಿವದು
ಮುಕುತೀಶ ಲಕ್ಷ್ಮೀಪತಿವಿಟ್ಠಲನ ನಿಜ –
ಭಕುತರಿಗೆ ಸರಿ ಏನೋ ಮುಕುತಿವಂತರು ತಿಳಿಯೆ || ೪ ||
ಆದಿತಾಳ
ಇವರ ಸ್ಮೃತಿಯೆ ಸ್ನಾನ ಇವರ ಸ್ಮೃತಿಯೆ ಮೌನ
ಇವರ ಸಂಸ್ಮೃತಿಯಿಂದ ದೊರೆವದು ಹರಿಧ್ಯಾನ
ಇವರ ಸದ್ಭಕುತಿಯಿಂದ ಅವನಿಯೊಳಗೆ ಅವ
ದಿವಸದೊಳೊಂದು ಕ್ಷಣ ತವಕದಿಂದಲಿ ಭಜಿಸೆ
ಅವನೇವೆ ಜಗದಿ ಪಾವನನೆಂದು ಕರೆಸುವ
ಇವರ ಕರುಣ ಪಡಿಯೆ ಕವಿಯೆಂದೆನಿಸುವನು
ಪವನನೊಡಿಯ ಲಕ್ಷ್ಮೀಪತಿವಿಟ್ಠಲನು ವೊಲಿದು
ಇವರಿಂದ ತನ್ನ ದಾಸ್ಯ ಅವನಿಯೊಳ್ ಕೊಡಿಸುವ || ೫ ||
ಜತೆ
ವಿಜಯದಾಸರ ಪಾದರಜವ ಸೋಕಿದ ನರನ
ತ್ರಿಜಗದೊಡಿಯ ಲಕ್ಷ್ಮೀಪತಿವಿಟ್ಠಲ ಪೊರೆವನು ||
(ಕ್ರೋಧಿನಾಮ ಸಂವತ್ಸರ , ಮಾಘ ಶುದ್ಧ
ಅಷ್ಟಮಿಯಂದು ಶ್ರೀಗುರುಗಳು ಪ್ರೇರಿಸಿದಂತೆ ಬರೆದದ್ದು.)
SrIguruSrISaviTThaladAsara SiShyarAda SrIlakShmIpativiTThala dAsArya viracita
SrIvijayadAsara stOtra suLAdi
rAga: haMsAnaMdi
dhruvatALa
Bajane mADelo manave BakutiyiMdali satata
vijayarAyara pAdapadumaMgaLa
dvijakulOttama suradhEnu satkalpataru
sujanaciMtAmaNiyu tAnenisI
tyajisi durviShayagaLa tatvOpadiShTanAgi
nijagurugaLa karuNavanne paDedu
vRujinavarjitanAda hariya sanmahimegaLa
trijagadoLage tuMbi tuLukuvaMte
yajisi prAkRutadiMda ella SAstrArtha sA –
haja BaktiyiMda racisi satkavanava
RujumArga tOrpa gadya padya pada suLAdigaLa
RuNagaNadarasina dAsarAda
prajegaLige gatisAdhanavAguvaMte tOri
kujanara saMgavannE dUragaisi
sujagadoLage satsaMtAna nilisi sA –
majanaMte carisi saddharmadiMda
ajanapitana pAdAMbujadalli nilisi mana
BujagaSayanana purava sAridaru
vijayasArathi lakShmIpativiTThalarEyana
nijadAsarolimi paDeye vijayavIvanu hariyu || 1 ||
maTTatALa
BUsuraneMdenisi I samIra matadi
BAsisi mAnavIdESadoLage SrInI –
vAsana sutanenisi A sutuMga taDi A –
vAsaNubadariyali klESa kaLedu iddu
tOShisutali hariyAdESadiMda matte
kASigaidu gaMgA A saritadi miMdu
A samIpadalli mIsaliMda hariyA
dhyAsadalirutiralu SrISanAj~jeyiMda
A suramuni puraMdaradAsarU baMdu
I sumanasagupadESa aMkitavittu
vAsarOsara SrInivAsa vijayaviTTha –
lESana BajiseMdu SAsanava mADi saM –
tOShadiMda hariyA dAsyavanne ittu –
lhAsadi pOgalu vAsava modalAda
A samasta suraru sOsili SiradUgi
lESa kANevinnu I suBAgyakenutA
vAsudEvana mahimi viSEShagaLahudeMdu
dAsavarada lakShmIpativiTThalanaMGri u –
pAsisidaru haridAsyavannE paDedu || 2 ||
triviDitALa
dhareyoLu gurugaLu narahari mahimiyA
vara Sruti smRuti sammatiyiMda baddhavAda
parimitA sapAdIreraDu lakShavanu vi –
starisida tiLidu avarAj~jeyiMdA
uravarIta tripAda pUrtigaisi ellavannu
berasi aidulakShaveMdenisI
guruSiShya BAvAvu nararige aruhalu
paripUrNagaidu pAvananenisi
guruvaMtargatanAda harige arpisi Bakti
BaritanAgi matte iLiyoLage
duruLA janarige gOcarisadaMdadali sajja –
narige sanmArgavanne tOri
hariyE sarvOttamA maruta jagadguru
taratama paMcaBEdagaLu siddhA
sarasijOdBava muKyA suragaNarella kiM –
kararu SrIharigeMbA pari aruhI
hiridAdA kavanavu viracisidyO ellA
dhariyA oLage tuMbi tuLukutidakO
haridAsaroLagAru sarigANe sarigANe
nararennabahudEnO surarallade
karuNasAgara lakShmIpativiTThalana divya –
caraNagaLarcisida parama BAgyavaMta || 3 ||
aTTatALa
vikasitavAgivara muKakamaladaliMda
sakala SAstrArtha suyukutiyiMdali pELde
sukRuta baNNipara BAgyakke eNegANeno
Bakutili paThisuva SakutaraGavu gaja –
Bukuta kapitthadOl vyakutavAgadale pA –
vaka pokka tUlada nikaTadaMtAgOdu
kakulAtiyiMda prAkRutaveMdu avama –
nake taradiha janmadhikuvenisuvadavana
akaTa avage narakappuvade namma
lakumipatiya mahimi yukutavAda prA –
yukuta saMskRutaveMbAdhikavEnu tiLiye SrI –
suKamuni ivara sadBakutige mecci prE –
rakanAgi satata sammuKadi tOrikoMDu
yukuti sadBakuti vIrakuti ittadariMda
prakaTisidahudeMdu sacalaru tiLivadu
mukutISa lakShmIpativiTThalana nija –
Bakutarige sari EnO mukutivaMtaru tiLiye || 4 ||
AditALa
ivara smRutiye snAna ivara smRutiye mauna
ivara saMsmRutiyiMda dorevadu haridhyAna
ivara sadBakutiyiMda avaniyoLage ava
divasadoLoMdu kShaNa tavakadiMdali Bajise
avanEve jagadi pAvananeMdu karesuva
ivara karuNa paDiye kaviyeMdenisuvanu
pavananoDiya lakShmIpativiTThalanu volidu
ivariMda tanna dAsya avaniyoL koDisuva || 5 ||
jate
vijayadAsara pAdarajava sOkida narana
trijagadoDiya lakShmIpativiTThala porevanu ||
(krOdhinAma saMvatsara , mAGa Suddha
aShTamiyaMdu SrIgurugaLu prErisidaMte baredaddu.)
Leave a Reply