Srinivasa Stotra Suladi – Guru Shrisha Vittala

Smt.Nandini Sripad

ಶ್ರೀ ಗುರುಶ್ರೀಶವಿಟ್ಠಲ ದಾಸಾರ್ಯ ವಿರಚಿತ ಶ್ರೀನಿವಾಸನ ಸ್ತೋತ್ರ ಸುಳಾದಿ
ರಾಗ: ಪೂರ್ವಿಕಲ್ಯಾಣಿ
ಧ್ರುವತಾಳ
ಶ್ರೀನಿವಾಸನೆ ನಿನಗೇನು ಬಿನ್ನೈಸಲೋ
ಧೇನಿಸಿದರೆ ಎನಗಾಶ್ಚರ್ಯ ತೋರುತಿದೆ
ಅನಾದಿ ಕಾಲದಿಂದ ಸೃಷ್ಟ್ಯಾದಿ ವ್ಯಾಪಾರ
ನೀನೆ ಮಾಡಿಸುವೆಂದು ಶಾಸ್ತ್ರಸಿದ್ಧ
ಜ್ಞಾನಿಗಳು ಹೀಗೆ ತಿಳಿದು ಪೇಳುವರಯ್ಯಾ
ಈ ನೀತಿ ನೋಡಿದರೆ ಪುಶಿಗಾಣದು
ಹೀನ ಜ್ಞಾನಗಳಿಂದನೇಕ ಭವಣಿ ಬಡುತ
ನಾನಾ ಯೋನಿಗಳಲ್ಲಿ ಸಂಚರಿಸುವ
ಈ ನಡತೆಯ ನೋಡೆದಾರಿಂದಲಾಗುವದು
ಶ್ರೀನಾಥ ನೀನೆ ದಯದಿ ತಿಳಿಸಬೇಕು
ತಾನೆ ಮಾಡುವ ಜೀವನೆಂದು ಯೋಚನೆ ಮಾಡೆ
ಅನಾದಿಯಿಂದ ಶಕ್ತಿಶೂನ್ಯ ಅಲ್ಪಾ
ಕಾಣ ತನ್ನ ಸ್ವರೂಪ ಇನ್ನಾವದು ಬಲ್ಲನೋ
ಜ್ಞಾನಪೂರ್ಣ ಸರ್ವಜ್ಞ ನೀನೇನರಿಯಾ
ಜ್ಞಾನ ಕರ್ಮೇಂದ್ರಿ ಮೊದಲಾದ ತತ್ವಗಳನ್ನೆ
ಮಾನಿಗಳಿವಕೆ ಬ್ರಹ್ಮರುದ್ರೇಂದ್ರರೂ
ನಾನಾ ವ್ಯಾಪಾರವ ಮಾಡಿಸಿ ಇವರಿಂದ
ಹೀನ ಸುಖವು ಉಣಿಸುವರೆಂಬೆನೇ
ಜ್ಞಾನಿಗಳರಸೇ ನಿನ್ನಾಜ್ಞಧಾರಕರವ –
ರೇನು ಮಾಡುವದೆಲ್ಲ ನಿನ್ನ ಸೇವೆ
ಜಾನಕಿ ಪತಿಯೆ ತ್ರಿಗುಣ ಕಾರ್ಯವೆನಲಿಬೇಕು
ಶ್ರೀನಾರಿ ಇವಕಭಿಮಾನಿ ಸ್ವಾಮೀ
ನೀನೆ ಸರ್ವರಿಗೆ ನಿಯಾಮಕನಾಗಿ ಇದ್ದು
ಅನೇಕ ವಿಹಾರ ಮಾಡುತಿಪ್ಪೆ
ನಾನು ನನ್ನದು ಎಂಬೊದೆಲ್ಲಿಂದ ಪುಟ್ಟಿತಯ್ಯಾ
ಈ ನುಡಿ ಬಿಡಿಸಿ ಕಾವೋರನ್ನ ತೋರೋ
ದೀನವತ್ಸಲ ಗುರುಶ್ರೀಶವಿಟ್ಠಲ ನಿನ್ನಾ –
ಧೀನದವನೊ ನಾನು ಆನಂದಮೂರುತಿಯೆ || ೧ ||

ಮಟ್ಟತಾಳ
ಇಂದಿರೇಶನೆ ನಿನ್ನಾನಂದ ಮೂರುತಿಗಳು
ಒಂದರಲ್ಲಿ ಬಿಡದೆ ಸಂದಣಿಸಿಹವಯ್ಯಾ
ಒಂದಾದರು ಕೃತ್ಯದರಿಂದಲಾಗದು ಧೊರಿಯೆ
ಮಂದರೋದ್ಧರ ನಿನ್ನ ಬಂಧಕ ಶಕುತಿಗೆ
ವಂದಿಪೆ ಮೂಜಗದ ತಂದೆ ನಿನ್ನಯ ಪಾದ –
ದ್ವಂದ್ವದಿ ಎನ್ನ ಮನಸು ಪೊಂದಿಸೊ ಕ್ಷಣಬಿಡದೆ
ನಂದ ನಂದನನೆ ಎನ್ನಿಂದಲಾಗುವ ದೋಷ
ಒಂದು ನೋಡದೆ ದಯಾಸಿಂಧು ಎನ್ನ ಹೃದಯ –
ಮಂದಿರದಲಿ ನಿಂತು ಸುಂದರ ಮೂರುತಿಯೆ ಗುರುಶ್ರೀಶವಿಟ್ಠಲ
ಸಂದರುಶನವೀಯೋ ಸರ್ವಸ್ಥಳಗಳಲಿ || ೨ ||

ತ್ರಿವಿಡಿತಾಳ
ಶ್ರೀಶ ಸ್ವಾತಂತ್ರ ನೀನೇಸು ಬಗೆಯಲಿ ನೋಡೆ
ಸಾಸಿವಿಗಳನಿತು ಸಂಶಯವಿಲ್ಲ
ಲೇಸೆ ಎನಗೆ ನೀನು ಏಸು ಜನ್ಮಗಳೀಯ್ಯಾ
ಈಶಾ ಎಂದಿಗೂ ನೀನು ದಾಸ ನಾನೂ
ಈ ಸುಜ್ಞಾನವೆ ಕೊಟ್ಟು , ನೀ ಸಲಹಲಿ ಬೇಕು
ವಾಸುದೇವನೆ ಭಕ್ತ ಪೋಷಕನೆ
ಭಾಸುರ ಮೂರುತಿ ಈ ಸಚರಾಚರ –
ವಾಸ ಸರ್ವದ ಎನ್ನ ಮನಸಿನಲ್ಲೀ
ಬೇಸರದಲೆ ನೀ ಪ್ರಕಾಶನಾಗಿ ವಿಷಯ –
ದಾಸಿ ಬಿಡಿಸೋ ಗುರುಶ್ರೀಶವಿಟ್ಠಲಾ || ೩ ||

ಅಟ್ಟತಾಳ
ಕಂತುಪಿತನೆ ನಿನ್ನಚಿಂತ್ಯಾದ್ಭುತ ಶಕ್ತಿ
ಅಂತುಗಾಣಳೊ ರಮೆ ಎಂತು ಬಲ್ಲೆನೊ ನಾನು
ಜಂತುಗಳೊಳು ನೀಚ ಇಂಥ ಅಲ್ಪನ ಮನ
ನಿಂತಲ್ಲಿ ನಿಲಿಸದೆ ಭ್ರಾಂತನ್ನ ಮಾಡೆನ್ಯ –
ನಂತೆ ನೋಡುವರೆ ಮಹಂತರೊಡಿಯ ಭಗ –
ವಂತ ನಿನ್ನವರವನಂತ ತಿಳಿದು ಸ್ವಾಮಿ
ಸಂತತ ಹರಿ ನಿನ್ನ ಚಿಂತನೆ ಬಿಡನೆನ್ನ
ಅಂತರಂಗದೊಳಿಟ್ಠು ಸಂತರ ಸೇವಿಸಿ –
ರಂತರ ಸೇವಿ ನಿರಂತರಯಿತ್ತು ಸ –
ತ್ಪಂಥವ ತೋರೆನ್ನ ಚಿಂತಿಯ ಬಿಡಿಸಯ್ಯಾ
ಸಂತೋಷ ಮೂರುತಿ ಗುರುಶ್ರೀಶವಿಟ್ಠಲ
ಇಂತು ಪಾಲಿಸೋ ಜಗದಂತರ್ಯಾಮಿ || ೪ ||

ಆದಿತಾಳ
ನೀನೆ ಎನಗೆ ತಾಯಿ ನೀನೆ ಎನಗೆ ತಂದಿ
ನೀನೆ ಎನಗೆ ಬಂಧು ನೀನೆ ಎನಗೆ ಸಖಾ
ನೀನೆ ಎನಗೆ ವಿದ್ಯಾ ನೀನೆ ಎನಗೆ ದ್ರವ್ಯ
ನೀನೆ ಎನಗೆ ಧೊರಿ ನೀನೆ ಎನಗೆ ದಾತಾ
ನೀನೆ ಎನಗೆ ಸರ್ವ ಸಂಪತ್ತು ಕೃಷ್ಣಯ್ಯ
ನೀನೆ ಎನಗೆ ಗುರುಶ್ರೀಶವಿಟ್ಠಲರೇಯ
ನೀನೆ ಸ್ವಾಮಿ ಸರ್ವಾಭೀಷ್ಟದಾಯಕನೋ || ೫ ||

ಜತೆ
ಈರೇಳು ಲೋಕಕ್ಕೆ ಕಾರಣ ನೀನಯ್ಯಾ
ಪಾರುಗಾಣಿಸೊ ಎನ್ನ ಗುರುಶ್ರೀಶವಿಟ್ಠಲ ||


SrI guruSrISaviTThala dAsArya viracita SrInivAsana stOtra suLAdi
rAga: pUrvikalyANi
dhruvatALa
SrInivAsane ninagEnu binnaisalO
dhEnisidare enagAScarya tOrutide
anAdi kAladiMda sRuShTyAdi vyApAra
nIne mADisuveMdu SAstrasiddha
j~jAnigaLu hIge tiLidu pELuvarayyA
I nIti nODidare puSigANadu
hIna j~jAnagaLiMdanEka BavaNi baDuta
nAnA yOnigaLalli saMcarisuva
I naDateya nODedAriMdalAguvadu
SrInAtha nIne dayadi tiLisabEku
tAne mADuva jIvaneMdu yOcane mADe
anAdiyiMda SaktiSUnya alpA
kANa tanna svarUpa innAvadu ballanO
j~jAnapUrNa sarvaj~ja nInEnariyA
j~jAna karmEMdri modalAda tatvagaLanne
mAnigaLivake brahmarudrEMdrarU
nAnA vyApArava mADisi ivariMda
hIna suKavu uNisuvareMbenE
j~jAnigaLarasE ninnAj~jadhArakarava –
rEnu mADuvadella ninna sEve
jAnaki patiye triguNa kAryavenalibEku
SrInAri ivakaBimAni svAmI
nIne sarvarige niyAmakanAgi iddu
anEka vihAra mADutippe
nAnu nannadu eMbodelliMda puTTitayyA
I nuDi biDisi kAvOranna tOrO
dInavatsala guruSrISaviTThala ninnA –
dhInadavano nAnu AnaMdamUrutiye || 1 ||

maTTatALa
iMdirESane ninnAnaMda mUrutigaLu
oMdaralli biDade saMdaNisihavayyA
oMdAdaru kRutyadariMdalAgadu dhoriye
maMdarOddhara ninna baMdhaka Sakutige
vaMdipe mUjagada taMde ninnaya pAda –
dvaMdvadi enna manasu poMdiso kShaNabiDade
naMda naMdanane enniMdalAguva dOSha
oMdu nODade dayAsiMdhu enna hRudaya –
maMdiradali niMtu suMdara mUrutiye guruSrISaviTThala
saMdaruSanavIyO sarvasthaLagaLali || 2 ||

triviDitALa
SrISa svAtaMtra nInEsu bageyali nODe
sAsivigaLanitu saMSayavilla
lEse enage nInu Esu janmagaLIyyA
ISA eMdigU nInu dAsa nAnU
I suj~jAnave koTTu , nI salahali bEku
vAsudEvane Bakta pOShakane
BAsura mUruti I sacarAcara –
vAsa sarvada enna manasinallI
bEsaradale nI prakASanAgi viShaya –
dAsi biDisO guruSrISaviTThalA || 3 ||

aTTatALa
kaMtupitane ninnaciMtyAdButa Sakti
aMtugANaLo rame eMtu balleno nAnu
jaMtugaLoLu nIca iMtha alpana mana
niMtalli nilisade BrAMtanna mADenya –
naMte nODuvare mahaMtaroDiya Baga –
vaMta ninnavaravanaMta tiLidu svAmi
saMtata hari ninna ciMtane biDanenna
aMtaraMgadoLiTThu saMtara sEvisi –
raMtara sEvi niraMtarayittu sa –
tpaMthava tOrenna ciMtiya biDisayyA
saMtOSha mUruti guruSrISaviTThala
iMtu pAlisO jagadaMtaryAmi || 4 ||

AditALa
nIne enage tAyi nIne enage taMdi
nIne enage baMdhu nIne enage saKA
nIne enage vidyA nIne enage dravya
nIne enage dhori nIne enage dAtA
nIne enage sarva saMpattu kRuShNayya
nIne enage guruSrISaviTThalarEya
nIne svAmi sarvABIShTadAyakanO || 5 ||

jate
IrELu lOkakke kAraNa nInayyA
pArugANiso enna guruSrISaviTThala ||

Leave a Reply

Your email address will not be published. Required fields are marked *

You might also like

error: Content is protected !!