Namisuve Sumateendra

Composer : Shri Dheera vittala

By Smt.Shubhalakshmi Rao

ನಮಿಸೂವೆ ನಮಿಸೂವೆ ಸುಮತೀಂದ್ರ ಯತಿಯೇ [ಪ]

ವ್ಯೋಮಕೇಶವಂದ್ಯ ಶ್ಯಾಮಾಂಗ ಸದ್ಗುಣಿಯ ಯಾಮ
ಯಾಮದರ್ಚಿಪ ಪ್ರಮಿತ ವಂದಿತ ಪದಗಳಿಗೆ ||ಅ.ಪ||

ವಿಮತವಾದಿಯ ತರಿದು ಸುಮತಿ ನೀನೆಂದೆನಿಸಿ
ಗುರು ಪೀಠದಲಿ ಮೆರೆದ ಗುರು ಉಪೇಂದ್ರ ವಂದ್ಯನೆ ||೧||

ಭಾವರತ್ನಾದಿ ಪ್ರಭಾವಿ ವ್ಯಾಖ್ಯಾನದಲಿ
ಭಾವಿ ಬೊಮ್ಮನ ತತ್ತ್ವ ಭೂದಿವಿಜರಿಗುಣಿಸೋ ಯತಿಯೇ ||೨||

ಆಶ್ವೇಜ ಕೃಷ್ಣದ ವಾಸರ ದ್ವಾದಶಿಯೊಳು
ಶ್ರೀಶನ ಪದನ ಸೇರ್ದ ದೇಶಿಕೋತ್ತಮ ಪೂಜ್ಯ ||೩||

ಶ್ರೀರಂಗ ಕ್ಷೇತ್ರದಲಿ ಧೀರ ವಿಠ್ಠಲ ರಂಗನ
ಧರಿಸಿ ಅರ್ಚಿಪ ಗುರು ಭಾರತೀಶ ಪ್ರಿಯನೇ ||೪||


namisUve namisUve sumatIMdra yatiyE [pa]

vyOmakESavaMdya SyAmAMga sadguNiya yAma
yAmadarcipa pramita vaMdita padagaLige ||a.pa||

vimatavAdiya taridu sumati nIneMdenisi
guru pIThadali mereda guru upEMdra vaMdyane ||1||

BAvaratnAdi praBAvi vyAKyAnadali
BAvi bommana tattva BUdivijariguNisO yatiyE ||2||

ASvEja kRuShNada vAsara dvAdaSiyoLu
SrISana padana sErda dESikOttama pUjya ||3||

SrIraMga kShEtradali dhIra viThThala raMgana
dharisi arcipa guru BAratISa priyanE ||4||

Leave a Reply

Your email address will not be published. Required fields are marked *

You might also like

error: Content is protected !!