Bharati Janani Palisu

Composer : Shri Vijayadasaru

By Smt.Shubhalakshmi Rao

ಭಾರತೀ ಜನನಿ ಪಾಲಿಸು ನಿತ್ಯ, ಮಾರುತನ ರಾಣಿ |
ಭಾರಿ ಭಾರಿಗೆ ಎನ್ನ ಭಾರ ನಿನ್ನದೇ ವಾಣೀ ||ಪ||

ಭಕುತಿ ಇಲ್ಲದೇ ಅನುದಿನ |
ಅಕಟನಿಲ್ಲದೆ |
ಸಕಲ ಠಾವಿನಲ್ಲಿ ಅರ್ಭಕನಾಗಿ ತಿರುಗಿ, ಪಾ-
ಪಕೆ ಎರಗಿದೆ ಯಾತಕೆ ಬಾರದವನಾದೆ ||೧||

ಆರನ್ನ ಕಾಣದೆ ನಿನ್ನನು, ನಾ |
ಸಾರಿದೆ ಮಾಣದೆ |
ವಾರ ವಾರಕೆನ್ನ ಉದ್ಧಾರವ ಮಾಳ್ಪುದು |
ಕಾರುಣ್ಯದಿಂದಲಿ ಶೃಂಗಾರವಾರಿಧಿ ಬೇಗ ||೨||

ನುತಿಸಿ ವಂದನೆ ಮಾಡುವೆ ನಿತ್ಯ |
ಕೃತಿಯ ನಂದನೆ |
ಸತತ ವಿಜಯವಿಠ್ಠಲನ ಪದಾಬ್ಜದಿ |
ರತಿ ಆಗುವಂತೆ ಸುಮತಿಯನು ಕರುಣಿಸೇ ||೩||


BAratI janani pAlisu nitya, mArutana rANi |
BAri BArige enna BAra ninnadE vANI ||pa||

Bakuti illadE anudina |
akaTanillade |
sakala ThAvinalli arBakanAgi tirugi, pA-
pake eragide yAtake bAradavanAde ||1||

Aranna kANade ninnanu, nA |
sAride mANade |
vAra vArakenna uddhArava mALpudu |
kAruNyadiMdali SRuMgAravAridhi bEga ||2||

nutisi vaMdane mADuve nitya |
kRutiya naMdane |
satata vijayaviThThalana padAbjadi |
rati AguvaMte sumatiyanu karuNisE ||3||

Leave a Reply

Your email address will not be published. Required fields are marked *

You might also like

error: Content is protected !!