Beda bedela

Composer : Shri Pranesha dasaru

By Smt.Shubhalakshmi Rao

ಬೇಡ ಬೇಡೆಲಾ ಕೊಡ ಬೇಡೆಲಾ ಸೀರೆ
ಬೇಡಿದರೆ ದೇವರಾಣೆಲಾ [ಪ]

ಇನ್ನೆರಡು ಗಳಿಗೆಗೆ ನಿನ್ನ ಉಂಬುವ ಹೊತ್ತು |
ಅನ್ನದಕಾಂಕ್ಷೆ ಹುಟ್ಟದೇನಲಾ ||
ಮನ್ನಿಸಿ ಬೇಡಿದರೆ ಉನ್ನತಾಹಂಕಾರ- |
ವನ್ನು ತೋರುವೆ ಇಟ್ಟುಕೊಳ್ಳೆಲಾ [೧]

ವ್ಯಾಳೆವಾಗಲು ಯಮ್ಮನ್ನಾಳುವವರೇ ಬಹರು |
ಹೇಳಿ ನಿನ್ನನೇ ಕೊಲ್ಲಿಸುವೆವೇವಲಾ ||
ಖೂಳಪೂತನಿ ಕೊಂದ ಧಾಳಿ ಬಲ್ಲರವರು |
ಬಾಲಕನೆನ್ನರು ನಿನ್ನಗೆಲಾ [೨]

ಬತ್ತಲರಾಗಿ ಜಲ ವ್ಯರ್ಥ ಸೇರಿದಿರೆಂದು |
ವತ್ತಿ ನಮ್ಮನು ಕೊಲ್ಲರವರೆಲಾ ||
ಹತ್ತೆಂಟು ತಲೆಯಿಂದ ವಸ್ತ್ರರಹಿತ ಸ್ನಾನ |
ನಿತ್ಯನಮ್ಮೊಳು ನಡತೆಲಾ [೩]

ಕರಕರಿಗಾರದೆ ಮೈಮರೆದು ಊರಿಗೆ ಹೋಗಿ |
ಭರದಿಂದೆಶೋದೆಗೆ ದೂರೆವೆಲಾ ||
ತರುಣಿಯರೆಲ್ಲ ಹಿಂದೆ ಮೊರೆಯಿಡೆ ಲಾಲಿಸಿ |
ಒರಳಿಗೆ ಕಟ್ಟಿಸಿದ್ದೆವೆಲಾ [೪]

ಲಲನೆಯರೆಲ್ಲ ಕೂಡಿ ಜಲಬಿಟ್ಟು ಬಂದರೆ |
ಕೊಳುವೆ ನಿನ್ನಯ ಪ್ರಾಣಾ |
ತಿಳಿಯಲೊಗಳಿಸಿ ಸಂಸಾರವ ಸಲುಹುತಿಹರು ನಾವೇ |
ಕಳವೇನೊ ಪ್ರಾಣೇಶ ವಿಠಲ [೫]


bEDa bEDelA koDa bEDelA sIre
bEDidare dEvarANelA [pa]

inneraDu gaLigege ninna uMbuva hottu |
annadakAMkShe huTTadEnalA ||
mannisi bEDidare unnatAhaMkAra- |
vannu tOruve iTTukoLLelA [1]

vyALevAgalu yammannALuvavarE baharu |
hELi ninnanE kollisuvevEvalA ||
KULapUtani koMda dhALi ballaravaru |
bAlakanennaru ninnagelA [2]

battalarAgi jala vyartha sEridireMdu |
vatti nammanu kollaravarelA ||
hatteMTu taleyiMda vastrarahita snAna |
nityanammoLu naDatelA [3]

karakarigArade maimaredu Urige hOgi |
BaradiMdeSOdege dUrevelA ||
taruNiyarella hiMde moreyiDe lAlisi |
oraLige kaTTisiddevelA [4]

lalaneyarella kUDi jalabiTTu baMdare |
koLuve ninnaya prANA |
tiLiyalogaLisi saMsArava saluhutiharu nAvE |
kaLavEno prANESa viThala [5]

Leave a Reply

Your email address will not be published. Required fields are marked *

You might also like

error: Content is protected !!