Composer : Shri Kakhandaki dasaru
ಗುರುರಾಯನಾ ಮನಿಯಾ ನಾಯಿ ನಾನು [ಪ]
ಗುರು ಗುರು ಎನುತಲಿ ಇರುವೆ ಬಾಗಿಲದೊಳು |
ಗುರುವಿನೆಂಜಲ ನುಂಡು ಸುಖಿಸುವೆ ನಮ್ಮಯ್ಯ ನಾ [೧]
ಹರಿ ಶರಣರ ಕಂಡು ಗರುವಿಸಿ ಕೆಲಿಯೆನು |
ದುರುಳರ ಬೆನ್ನಟ್ಟಿ ಹೋಗೆನಾ ನಮ್ಮಯ್ಯನಾ [೨]
ಒಡೆಯನ ಮುಂದೆನ್ನಾ ಒಡಲವ ತೋರುವೆ |
ಬಿಡದೆ ಅಂಗಣದೊಳು ಹೊರಳುವೆ ನಮ್ಮಯ್ಯ ನಾ [೩]
ಹರಿನಾಮದಿಂದ ಭೋಂಕರಿಸಿ ವದರುವೆ |
ಬರಗುಡೆ ಹಮ್ಮ ಸ್ವಜಾತಿಯ ನಮ್ಮಯ್ಯ ನಾ [೪]
ತಂದೆ ಮಹಿಪತಿ ಸ್ವಾಮಿ ಬಂದು ಮೈಯ್ಯಾದಡವಿ |
ನಿಂದು ತನ್ನ ಬಿರುದಕ ಹಾಕಿದ ನಮ್ಮಯ್ಯನ [೫]
gururAyanA maniyA nAyi nAnu [pa]
guru guru enutali iruve bAgiladoLu |
guruvineMjala nuMDu suKisuve nammayya nA [1]
hari SaraNara kaMDu garuvisi keliyenu |
duruLara bennaTTi hOgenA nammayyanA [2]
oDeyana muMdennA oDalava tOruve |
biDade aMgaNadoLu horaLuve nammayya nA [3]
harinAmadiMda BOMkarisi vadaruve |
baraguDe hamma svajAtiya nammayya nA [4]
taMde mahipati svAmi baMdu maiyyAdaDavi |
niMdu tanna birudaka hAkida nammayyana [5]
Leave a Reply