Composer : Shri Raghupati vittala
ಶ್ರೀ ರಘುಪತಿವಿಟ್ಠಲದಾಸಾರ್ಯರ ಕೃತಿ
ರಾಗ: ಆರಭಿ , ಆದಿತಾಳ
ವಿಜಯರಾಜ ಗುರುರಾಜಾಧಿರಾಜ ಮಹ –
ರಾಜಶಿರೋರತುನ ॥ ಪ ॥
ತ್ಯಜಿಸದೆ ನಿಮ್ಮ ಪದಬುಜವ ಬಿಡೆನೆಂಬೊ
ಸುಜನರ ಪಾಲಿಸಯ್ಯ ॥ ಅ ಪ ॥
ಜ್ಞಾನಭಕುತಿ ಕೊಡು ಗಾನಶೀಲನ ಮಾಡು
ಹೀನಮನವ ಕೆಡಿಸೋ ।
ನಾನೆಂಬೊ ಅಹಂಕಾರವನ್ನೆ ತೊಲಗಿಸೋ
ನಿನ್ನವರವನೆನಿಸೋ ।
ಧೇನಿಸುವಂದದಿ ಹರಿಯ ಪದಬುಜವ
ಮಾನಸದಲಿ ಸರ್ವದಾ ।
ಕಾಣಿಸಿಕೊಡು ನಾನು ಜೀವನು ನಿಜವೆಂಬೊ
ಜ್ಞಾನ ಮನಕೆ ಬರಲಿ ॥ 1 ॥
ಮೌನವಾಗಿರಲಾರು ಹೀನತಿ ನುಡಿಯಲು
ಪ್ರಾಣಪ್ರೇರಕರಿಂದಲಿ ।
ಆನೇನಾಡುವುದೆಲ್ಲ ಆನೆ ಎನ್ನುವೆನೆಲ್ಲ
ಆನೆ ಸ್ವತಂತ್ರನಲ್ಲ ।
ದೀನನಾಗೆರಗಿ ಸಜ್ಜನರ ಪದಾಬ್ಜಕ್ಕೆ
ರೇಣುವಾಗಿ ನಡೆದು ।
ನೀನೇ ಗತಿಯೆಂದು ನಿನ್ನ ಮೊರೆಹೊಕ್ಕೆನೊ
ಕ್ಷೋಣಿಯೊಳಗೆ ಬಳಲಿ ॥ 2 ॥
ನಿಮ್ಮ ಕೊಂಡಾಡುವ ಬುಧರು ಕಾಣಲು ಅವ –
ರೆಮ್ಮಾಪ್ತನೆಂದೆನಲಿ ।
ನಿಮ್ಮ ಪುಣ್ಯದ ಪುತ್ರ ಗೋಪಾಲದಾಸರು
ನಮ್ಮ ರಕ್ಷಕರಾಗಲಿ ।
ಇಮ್ಮಹಿಯೊಳಗೇಸು ಕಾಲವಾದರೂ ಪುಣ್ಯ –
ಸಂಬಂಧ ಕೆಡದಿರಲಿ ।
ಸುಮ್ಮನಸರೀಶ ರಘುಪತಿವಿಠಲ
ನಮ್ಮ ಸ್ವಾಮಿಯಾಗಲಿ ॥ 3 ॥
ವಿಶೇಷಾಂಶ :
ಅನುಪಲ್ಲವಿ :
” ನಿಮ್ಮ ಪದಬುಜವ ಬಿಡೆನೆಂಬೊ ಸುಜನರ ತ್ಯಜಿಸದೆ ಪಾಲಿಸಯ್ಯಾ ! ” ಅಂತ ಅನ್ವಯ ಮಾಡಬೇಕು.
ಶ್ರೀವಿಜಯದಾಸಾರ್ಯರ ಶಿಷ್ಯರಾದ ಶ್ರೀವೇಣುಗೋಪಾಲವಿಠಲದಾಸರಿಗೂ (ಶ್ರೀಪಂಗನಾಮ ತಿಮ್ಮಣ್ಣಯ್ಯನವರು) ಮತ್ತು ಶ್ರೀವೇಣುಗೋಪಾಲವಿಠಲದಾಸರಿಂದ ಅಂಕಿತಪಡೆದ ಶ್ರೀವ್ಯಾಸವಿಠಲದಾಸರಿಂದ (ಶ್ರೀ ಕಲ್ಲೂರು ಸುಬ್ಬಣ್ಣಾಚಾರ್ಯರಿಂದ) ಅಂಕಿತೋಪದೇಶ ಪಡೆದ ರಘುಪತಿವಿಠಲಾಂಕಿತ ತಿಮ್ಮಣ್ಣದಾಸರಿಗೂ ಒಂದೇ ನಾಮಧೇಯ ‘ ತಿಮ್ಮಣ್ಣ ‘ ಎಂದು. ಇವರ ವೈರಾಗ್ಯಭಾಗ್ಯಕ್ಕೆ ಮೆಚ್ಚಿ ‘ ವೈರಾಗ್ಯಶಾಲಿ ತಿಮ್ಮಣ್ಣ ‘ ಎಂದು ಶ್ರೀವಿಜಯದಾಸಾರ್ಯರು ಸಂಭೋದನೆ ಮಾಡುತ್ತಿದ್ದರಂತೆ. ಇವರಿಗೆ ತಮ್ಮ ಗುರುಬಾಂಧವರಾದ ಶ್ರೀಗೋಪಾಲದಾಸರಾಯರಲ್ಲಿಯೂ ಪರಮಭಕ್ತಿ. ಆದ್ದರಿಂದ ‘ ನಿಮ್ಮ ಪುಣ್ಯದ ಪುತ್ರ ಗೋಪಾಲದಾಸರು ನಮ್ಮ ರಕ್ಷಕರಾಗಲಿ ‘ ಎಂಬ ವರವನ್ನು ಶ್ರೀವಿಜಯದಾಸರಾಯರಲ್ಲಿ ಯಾಚಿಸಿದ್ದಾರೆ !
ವಿವರಣೆ :
ಹರಿದಾಸರತ್ನಂ ಶ್ರೀಗೋಪಾಲದಾಸರು
SrI raGupativiTThaladAsAryara kRuti
rAga: AraBi , AditALa
vijayarAja gururAjAdhirAja maha –
rAjaSirOratuna || pa ||
tyajisade nimma padabujava biDeneMbo
sujanara pAlisayya || a.pa ||
j~jAnaBakuti koDu gAnaSIlana mADu
hInamanava keDisO |
nAneMbo ahaMkAravanne tolagisO
ninnavaravanenisO |
dhEnisuvaMdadi hariya padabujava
mAnasadali sarvadA |
kANisikoDu nAnu jIvanu nijaveMbo
j~jAna manake barali || 1 ||
maunavAgiralAru hInati nuDiyalu
prANaprErakariMdali |
AnEnADuvudella Ane ennuvenella
Ane svataMtranalla |
dInanAgeragi sajjanara padAbjakke
rENuvAgi naDedu |
nInE gatiyeMdu ninna morehokkeno
kShONiyoLage baLali || 2 ||
nimma koMDADuva budharu kANalu ava –
remmAptaneMdenali |
nimma puNyada putra gOpAladAsaru
namma rakShakarAgali |
immahiyoLagEsu kAlavAdarU puNya –
saMbaMdha keDadirali |
summanasarISa raGupativiThala
namma svAmiyAgali || 3 ||
viSEShAMSa :
anupallavi :
” nimma padabujava biDeneMbo sujanara tyajisade pAlisayyA ! ” aMta anvaya mADabEku.
SrIvijayadAsAryara SiShyarAda SrIvENugOpAlaviThaladAsarigU (SrIpaMganAma timmaNNayyanavaru) mattu SrIvENugOpAlaviThaladAsariMda aMkitapaDeda SrIvyAsaviThaladAsariMda (SrI kallUru subbaNNAcAryariMda) aMkitOpadESa paDeda raGupativiThalAMkita timmaNNadAsarigU oMdE nAmadhEya ‘ timmaNNa ‘ eMdu. ivara vairAgyaBAgyakke mecci ‘ vairAgyaSAli timmaNNa ‘ eMdu SrIvijayadAsAryaru saMBOdane mADuttiddaraMte. ivarige tamma gurubAMdhavarAda SrIgOpAladAsarAyaralliyU paramaBakti. AddariMda ‘ nimma puNyada putra gOpAladAsaru namma rakShakarAgali ‘ eMba varavannu SrIvijayadAsarAyaralli yAcisiddAre !
vivaraNe :
haridAsaratnaM SrIgOpAladAsaru
Leave a Reply