Composer : Shri Jagannatha dasaru
ರತುನ ದೊರಕಿತಲ್ಲ ಎನಗೊಂದು-
ರತುನ ದೊರಕಿತಲ್ಲ ||ಪ||
ರತುನ ದೊರಕಿತು ಎನ್ನ ಜನುಮ ಪ-
ವಿತ್ರವಾಯಿತು ಇಂದಿನಾ ದಿನ
ಯತನಗೈಯುತ ಬರುತಲಿರೆ, ಪ್ರ-
ಯತನ ಮಾಡದೆ ವಿಜಯರಾಯರೆಂಬೊ ||ಅ.ಪ||
ಜ್ಞಾನವೆಂಬೋ ಪುತ್ಥಳಿ ಕಂಬಿಯಲ್ಲಿ
ಅಣಿಮುತ್ತಿನ ಭಕ್ತಿಲಿ, ಸುಕೃತಮಾಲಾ
ನಾನಾ ವಿಧಂಗಳಲಿ, ಯೋಚಿಸುತಿರೆ |
ಪ್ರಾಣಪದಕವೆಂಬ ಮಾಲೆನು-
ಮಾನವಿಲ್ಲದೆ ಕೊರಳಿಗ್ಹಾಕುತ
ಗಾನದಿಂದಲಿ ಕುಣಿದು ಪಾಡುತ
ದೀನ ಜನರುದ್ಧಾರ ಗಯ್ಯುವ ||೧||
ಪಥದಿ ನಾ ಬರುತಿರಲು,
ಥಳಥಳವೆಂದು
ಅತಿಕಾಂತಿಯು ಕಾಣಲು ಬೆರಗಾಗುತ್ತ,
ಅತಿಚೋದ್ಯವ ಕಾಣಲು, ಸೇವಿಸುತಿರೆ |
ಸತತ ಕರಪಿಡಿದಾದರಿಸಿ ಮನೋ
ರಥವ ಪೂರೈಸುತಲಿ ಸ-
ನ್ಮತಿಯ ಪಾಲಿಸಿ ಮೋಕ್ಷ ಪಥವನೆ
ಅತಿಶಯದಿ ತೋರುತಲಿ ಮೆರೆಯುವ ||೨||
ಶೋಧಿಸಿ ಗ್ರಂಥಗಳ ಸುಳಾದಿಯ
ಮೋದದಿಂದಲಿ ಬಹಳ, ಕವಿತಾ ಮಾಡಿ
ಸಾಧುಜನಕೆ ಸಕಲ, ಆನಂದವನಿತ್ತು |
ವಾದಿ ಜನರನು ಗೆದ್ದು ವಾದದಿ
ಮಾಧವ ಜಗನ್ನಾಥವಿಠಲನ
ಪಾದಕಮಲಕೆ ಮಧುಪನಂದದಿ
ಸಾದರದಿ ತೋರುತಲಿ ಮೆರೆಯುವ ||೩||
ratuna dorakitalla enagoMdu-
ratuna dorakitalla ||pa||
ratuna dorakitu enna januma pa-
vitravAyitu iMdinA dina
yatanagaiyuta barutalire, pra-
yatana mADade vijayarAyareMbo ||a.pa||
j~jAnaveMbO putthaLi kaMbiyalli
aNimuttina Baktili, sukRutamAlA
nAnA vidhaMgaLali, yOchisutire |
prANapadakaveMba mAlenu-
mAnavillade koraLig~hAkuta
gAnadiMdali kuNidu pADuta
dIna janaruddhAra gayyuva ||1||
pathadi nA barutiralu,
thaLathaLaveMdu
atikAMtiyu kANalu beragAgutta,
aticOdyava kANalu, sEvisutire |
satata karapiDidAdarisi manO
rathava pUraisutali sa-
nmatiya pAlisi mOkSha pathavane
atiSayadi tOrutali mereyuva ||2||
SOdhisi graMthagaLa suLAdiya
mOdadiMdali bahaLa, kavitA mADi
sAdhujanake sakala, AnaMdavanittu |
vAdi janaranu geddu vAdadi
mAdhava jagannAthaviThalana
pAdakamalake madhupanaMdadi
sAdaradi tOrutali mereyuva ||3||
Leave a Reply