Vijayarayara padava nee

Composer : Shri Shyamasundara dasaru

By Smt.Lakshmi

ವಿಜಯರಾಯರ ಪಾದವ ನೀ
ಭಜಿಸಿ ಬದುಕೆಲೊ ಮಾನವ ||ಪ||

ವೃಜಿನವೆಲ್ಲವ ಕಳೆದು ಕರುಣದಿ |
ಅಜನನಯ್ಯನ ತೋರುವ ||ಅ.ಪ.||

ಜಗಕೆ ಹರಿ ಪರನೆಂದು ತಾ ಭುಜ
ಯುಗಗಳೆತ್ತಿ ಸಾರಿದಾ ||
ಭೃಗು ಮುನಿ ಇವರೆಂದು ಭಾವಿಸಿ
ಮಿಗೆ ಸುಭಕ್ತಿಲಿ ಸರ್ವದಾ (೧)

ವರಹಜಾ ತಟದಲ್ಲಿ ಚೀಕಲ |
ಪರವಿ ಗ್ರಾಮದಿ ಜನಿಸಿದ ||
ಪರಿ ಪರಿಯಲನುಭವಿಸಿ ಬಡತನ
ಜರಿದು ಭವ ವೈರಾಗ್ಯ ಧರಿಸಿದ (೨)

ಭಕುತಿ ಪೂರ್ವಕವಾಗಿ ಬಿಡದಲೆ |
ಸಕಲ ಕ್ಷೇತ್ರವ ಚರಿಸಿದಾ ||
ಮುಕುತಿ ಸುಖ ದಾತಾರನಾದ |
ಲಕುಮಿ ರಮಣನ ಸ್ತುತಿಸಿದಾ (೩)

ತಾ ಸುಸ್ವಪ್ನದೊಳೊಂದು ದಿನ ಶ್ರೀ
ವ್ಯಾಸ ಕಾಶಿಗೆ ತೆರಳಿದಾ ||
ವಾಸುದೇವನ ಕಂಡು ನಮಿಸಿ
ಲೇಸು ವರವ ಸ್ವೀಕರಿಸಿದಾ (೪)

ಪುರಂದರಾರ್ಯರ ಕವನಗಳು
ಮೂರೆರಡು ಲಕ್ಷಕೆ ತ್ರಯಪದ
ಕೊರತೆ ಇರಲಿ ಇವರ ಆಜ್ಞೆಯಿಂದಲಿ
ಬರೆದು ತಾ ಪೂರೈಸಿದ (೫)

ಬಾಲೆಯೋರ್ವಳು ಬಂದು ಪ್ರಾರ್ಥಿಸೆ
ಕೇಳುತಾಕೆಯ ಪತಿಯನು |
ಕಾಲ ಪಾಶವ ಬಿಡಿಸಿ ಕರುಣದಿ
ಪಾಲಿಸಿದ ಸುಮಹಾತ್ಮರ (೬)

ಶ್ರೀಮನೋಹರ ಶಾಮಸುಂದರ
ನಾಮ ಮಹಿಮೆಯ ವಿಧ ವಿಧ |
ಭೂಮಿ ಸುಮನಸ ಸ್ತೋಮಕನುದಿನ
ಪ್ರೇಮದಿಂದಲಿ ಬೀರಿದ (೭)


vijayarAyara pAdava nI
Bajisi badukelo mAnava ||pa||

vRujinavellava kaLedu karuNadi |
ajananayyana tOruva ||a.pa.||

jagake hari paraneMdu tA Buja
yugagaLetti sAridA ||
BRugu muni ivareMdu BAvisi
mige suBaktili sarvadA (1)

varahajA taTadalli cIkala |
paravi grAmadi janisida ||
pari pariyalanuBavisi baDatana
jaridu Bava vairAgya dharisida (2)

Bakuti pUrvakavAgi biDadale |
sakala kShEtrava carisidA ||
mukuti suKa dAtAranAda |
lakumi ramaNana stutisidA (3)

tA susvapnadoLoMdu dina SrI
vyAsa kASige teraLidA ||
vAsudEvana kaMDu namisi
lEsu varava svIkarisidA (4)

puraMdarAryara kavanagaLu
mUreraDu lakShake trayapada
korate irali ivara Aj~jeyiMdali
baredu tA pUraisida (5)

bAleyOrvaLu baMdu prArthise
kELutAkeya patiyanu |
kAla pASava biDisi karuNadi
pAlisida sumahAtmara (6)

SrImanOhara SAmasuMdara
nAma mahimeya vidha vidha |
BUmi sumanasa stOmakanudina
prEmadiMdali bIrida (7)

Leave a Reply

Your email address will not be published. Required fields are marked *

You might also like

error: Content is protected !!