Vijayarayara Pada

Composer : Shri Mohana dasaru

By Smt.Shubhalakshmi Rao

ವಿಜಯ ರಾಯರ ಪಾದ ನಿಜವಾಗಿ ನಂಬಲು
ಅಜನ ಪಿತ ತಾನೇ ಒಲಿವ ||ಪ||
ದ್ವಿಜಕೇತನನ ಗುಣದ ವ್ರಜವ ಕೊಂಡಾಡುವ
ಸುಜನ ಮಂದಾರನೀತ ಪ್ರಖ್ಯಾತ ||ಅ.ಪ.||

ವಿ” ಎಂದು ನುಡಿಯಲು ವಿಷ್ಣು ದಾಸನಾಗುವನು
ಜ” ಎಂದು ನುಡಿಯಲು ಜನನ ಹಾನಿ,
ಯ” ಎಂದು ಕೊಂಡಾಡೆ ಯಮ ಭಟರು ಓಡುವರು
ರಾಯ” ಎಂದೆನಲು ಹರಿ ಕಾವ ವರವೀವ ||೧||

ಇವರ ಸ್ಮರಣೆಯು ಸ್ನಾನ
ಇವರ ಸ್ಮರಣೆಯು ಧ್ಯಾನ
ಇವರ ಸ್ಮರಣೆಯು ಅಮೃತ ಪಾನ
ಇವರ ಸ್ಮರಣೆಯ ಮಾಡೆ ಯುವತಿಗ್-ಅಕ್ಷಯವಿತ್ತ
ತ್ರಿವಿಕ್ರಮನೆ ಮುಂದೆ ನಿಲುವಾ ನಲಿವಾ ||೨||

ವಾರಾಣಾಸಿ ಯಾತ್ರೆ ಮೂರು ಬಾರಿ ಮಾಡಿ
ಮಾರಪಿತನೊಲುಮೆಯನು ಪಡೆದು
ಮೂರವತಾರದ ಮಧ್ವಮುನಿ ರಾಯರ
ಚಾರು ಚರಣವನು ಭಜಿಪ ಈ ಮುನಿಪ ||೩||

ಪುರಂದರ ದಾಸರ ಪರಮಾನುಗ್ರಹ ಪಾತ್ರ
ಗುರು ವಿಜಯರಾಯನೀತ,
ಸಿರಿವಿಜಯವಿಠಲನ ಶ್ರೀನಿವಾಸಾಚಾರ್ಯರು
ಹರಿಯಾಜ್ಞೆಯಿಂದಲಿ ಕೊಟ್ಟರೊ ದಿಟ್ಟರು ||೪||

ದಾನಧರ್ಮದಿ ಮಹಾ ಔದಾರ್ಯ ಗುಣಶೌರ್ಯ
ಶ್ರೀನಿವಾಸನ ಪ್ರೇಮ ಕುವರ,
ಮಾನವಿ ಸೀಮೆಯ ಚಿಕಲಪರವಿಯವಾಸ
ಮೋಹನ್ನವಿಠ್ಠಲನ್ನ ನಿಜದಾಸ ಉಲ್ಲಾಸ ||೫||


vijaya rAyara pAda nijavAgi naMbalu
ajana pita tAnE oliva ||pa||
dvijakEtanana guNada vrajava koMDADuva
sujana maMdAranIta praKyAta ||a.pa.||

“vi” eMdu nuDiyalu viShNu dAsanAguvanu
“ja” eMdu nuDiyalu janana hAni,
“ya” eMdu koMDADe yama BaTaru ODuvaru
“rAya” eMdenalu hari kAva varavIva ||1||

ivara smaraNeyu snAna
ivara smaraNeyu dhyAna
ivara smaraNeyu amRuta pAna
ivara smaraNeya mADe yuvatig-akShayavitta
trivikramane muMde niluvA nalivA ||2||

vArANAsi yAtre mUru bAri mADi
mArapitanolumeyanu paDedu
mUravatArada madhvamuni rAyara
cAru caraNavanu bhajipa I munipa ||3||

puraMdara dAsara paramAnugraha pAtra
guru vijayarAyanIta,
sirivijayaviThalana SrInivAsAcAryaru
hariyAj~jeyiMdali koTTaro diTTaru ||4||

dAnadharmadi mahA audArya guNaSaurya
SrInivAsana prEma kuvara,
mAnavi sImeya cikalaparaviyavAsa
mOhannaviThThalanna nijadAsa ullAsa ||5||

Leave a Reply

Your email address will not be published. Required fields are marked *

You might also like

error: Content is protected !!