Teralidaru Vijayarayaru

Composer : Shri Jagannatha dasaru

By Smt.Shubhalakshmi Rao

ತೆರಳಿದರು ವಿಜಯರಾಯರು ವಿಜಯ ವಿಠಲನ
ಪುರದೊಳಗೆ ಪರಮ ಭಕ್ತರ ಕಾಣಬೇಕೆನುತ ||ಪ||

ಯುವ ಸಂವತ್ಸರದ ಕಾರ್ತಿಕ ಶುದ್ಧ ದಶಮಿ ವಿಭಕ
ರವು ಗುರುವಾರ ಪ್ರಥಮ ಯಾಮದೀ
ಪವನಾಂತರಾತ್ಮಕ ಶ್ರೀ ಹರಿಯ ದರ್ಶನೋ
ತ್ಸವ ಸಂಪಾದಿಸುವ ಬಹು ಲವಲವಿಕೆಯಿಂದ ||೧||

ಧರಣಿಯೊಳು ಬಾಸ್ಕರ ಕ್ಷೇತ್ರವೆನಿಸುವ ಚಿಪ್ಪ
ಗಿರಿಯೆಂಬ ಗ್ರಾಮದಿ ವಿಬುಧರ ಮುಖದಿ
ವರ ಭಾಗವತ ಬ್ರಹ್ಮಸೂತ್ರ ಭಾರತ ಗೀತ
ಮರುತ ಶಾಸ್ತ್ರಾರ್ಥ ಗ್ರಂಥಗಳನಾಲಿಸುತಾ ||೨||

ಸುಖತೀರ್ಥ ಮುನಿಯ ಮನಕನುಕೂಲ ಸಚ್ಛಾಸ್ತ್ರ
ನಿಕರಗಳ ಕವನ ರೂಪದಲಿ ರಚಿಸಿ
ಭಕುತರಿಗೆ ಸನ್ಮಾರ್ಗ ತೋರಿ ಸಂತೋಷದಲಿ
ವಿಖನಸಾರ್ಚಿತ ಜಗನ್ನಾಥ ವಿಠಲನ ಪದಕೆ ||೩||


teraLidaru vijayarAyaru vijaya viThalana
puradoLage parama Baktara kANabEkenuta ||pa||

yuva saMvatsarada kArtika Suddha daSami viBaka
ravu guruvAra prathama yAmadI
pavanAMtarAtmaka SrI hariya darSanO
tsava saMpAdisuva bahu lavalavikeyiMda ||1||

dharaNiyoLu bAskara kShEtravenisuva cippa
giriyeMba grAmadi vibudhara muKadi
vara BAgavata brahmasUtra BArata gIta
maruta SAstrArtha graMthagaLanAlisutA ||2||

suKatIrtha muniya manakanukUla sacCAstra
nikaragaLa kavana rUpadali racisi
Bakutarige sanmArga tOri saMtOShadali
viKanasArcita jagannAtha viThalana padake ||3||

Leave a Reply

Your email address will not be published. Required fields are marked *

You might also like

error: Content is protected !!