Composer : Shri Vijaya dasaru
ಬ್ಯಾಸರದೆ ಭಜಿಸಿರೋ ಪುರಂದರ ದಾಸರಾಯರ
ಶ್ರೀಶ ನಿಮ್ಮನು ಉದಾಸೀನ ಮಾಡದೆ
ಪೋಷಿಸುವ ಸಂತೋಷದಿಂದಲಿ ||ಪ||
ಪುರಂದರ ಗಡಾದೊಳಗೆ ಹಿರಿಯ ಸಾಹುಕಾರನೆನಿಸಿ,
ಪರಿಪರಿಯ ಸೌಖ್ಯಗಳನ್ನು ಸುರಿಸುತ್ತ,
ಇರುತಿರಲು ನರಹರಿ ಕರುಣದಿಂದಲಿ
ಬ್ರಾಹ್ಮಣನಾಗುತ್ತ,
ಯಾಚಕರ ತೆರದಲಿ ಹರುಷದಿಂದಂಗಡಿಗೆ
ಹೋಗುತ್ತ, ಯಜಮಾನ ಕಂಡು,
ಜರಿದು ಬ್ರಾಹ್ಮಣನ್ಹೊರಗೆ ಹಾಕಲು
ಮರುದಿವಸ ಮತ್~ ಹೋಗಿ ತಾ ನಿಂತ ||೧||
ಭಾರಿಭಾರಿಗೆ ಮೋರೆ ಹತ್ತಿ ಮೇರೆಯಿಲ್ಲದೆ
ಆರು ತಿಂಗಳ ಬೆನ್ನ ಬೀಳುತ್ತ, ನಾಯಕರು ಕಂಡಿವನಾರ
ಬಿಡುತಾರೆಂದು ಬೈಯುತ್ತ ಬೇಸತ್ತು
ಒಂದು ಹೇರು ರೊಕ್ಕಾ ಮುಂದೆ ಸುರಿಯುತ್ತ
ಇದರೊಳಗೆ ಒಂದುಡ್ಡಾರಿಸಿಕೋ ಎಂದು ಹೇಳಲು
ನಾರಾಯಣ ಬಿಟ್ ಹೋದ ತಾ ನಗುತ||೨||
ಹಿತ್ತಲಾ ಬಾಗಿಲಿಗೆ ಹೋಗಿ ಮತ್ತೆ ಆತನ ಮಡದಿಯ ಬೆನ್ ಹತ್ತಿ
ಬಿದ್ದನು ವಿತ್ತ ತಾರೆನುತ ಮಗನ ಮುಂಜ್ಯೆಂ
ಒಂದ್ಯತಧಿಕದಿಂ ಬಾಯಿ ತೆರೆಯುತ್ತ, ಆ ಸಾಧ್ವಿ ನುಡಿದಳು
ಎತ್ತಣ ದ್ರವ್ಯವು ತನಗೆನುತ, ನಿನ್ನ ಮೂಗಿನ
ಮುತ್ತಿನ ಮೂಗುತಿಯ ಕೊಡು ಎನೆ
ಉತ್ತುಮಳು ತೆಗೆದಿತ್ತಳಾಗ ||೩||
ಜೋಕೆಯಿಂದಾಭರಣ ತಂದು
ಆಕೆ ಗಂಡನ ಕಣ್ಣೆದುರಿಗೆ ಹಾಕಿದನು ತಾ
ಬಾಕಿ ಕೊಡುಯೆನುತ, ಇದು ನಮ್ಮಾಕೆಯದು
ಎಂದಾತ ನುಡಿಯುತ್ತ,
ಅನ್ಯರದು ಯಿಂಥಾದ್ಯಾಕೆ ಯಿರಬಾರದೆಂದು ಯೋಚಿಸುತ,
ಬೆಲೆ ಹೇಳು ಎನಲು,
ನಾಲ್ಕು ನೂರು ಶುಭ್ರ ಕೊಡು ಎಂದ್
ಹಾಕಿ ಹೋದನು ತಿರೂಗಿ ಬಾರದಲೇ ||೪||
ತಿರುಗಿ ಬ್ರಾಹ್ಮಣ ಬಾರದಿರಲು,
ಕರೆದು ತನ್ನ ಹೆಂಡತಿಯ,
ಬರಿಯ ನಾಸಿಕವನ್ನೆ ಕಂಡನು, ಮೂಗುತಿಯು ಎಲ್ಲೆನೆ
ಮುರಿದಿಹುದು ಯೆಂದಾಕೆ ಪೇಳಿದಲು,
ಒಳಗ್ಹೋಗಿ ತರದಿರೆ,
ಅರೆವೆ ನಿನ್ನ ಜೀವವೆಂದನು, ವಿಷಕೊಂಬೆನೆಂದು,
ಕರದಿ ಬಟ್ಟಲ ಧರಿಸಲಾಕ್ಷಣ
ನರಹರೀ , ಮೂಗುತಿಯ ಬಟ್ಟಳೊಳಗೆ ತಾ ಇಟ್ಟಾ ||೫||
ಹರುಷದಿಂದಾಭರಣ ತಂದು,
ಪುರುಷನಾ ಕೈಯೊಳಗೆ ಯಿಡಲು,
ತರಿಸಿ ತನ್ನೊಳಗಿದ್ದ ಪೆಟ್ಟಿಗೆಯಾ, ಅದು ಕಾಣದಿರೆ,
ಬೆರಗಾಗಿ ನೋಡಿದ ತನ್ನ ಮಡದಿಯ, ನಿಜ ಪೇಳುಯೆನೆ,
ಅರಸಿ ಪೇಳ್ದಳು ಕೊಟ್ಟ ಸುದ್ದಿಯಾ, ಅಭಿಮಾನಕಂಜಿ,
ಕರದಿ ಬಟ್ಟಲ ಧರಿಸಲಾಕ್ಷಣ,
ಸಿರಿರಮಣಾ ಕೊಟ್ಟ ಖರೆಯಾ ||೬||
ದೇವ ದೇವ ಎನ್ನ ಮನದ,
ಭಾವವನ್ನು ತಿಳಿಯೊದಕ್ಕೆ, ವೃದ್ಧ ಬ್ರಾಹ್ಮಣನಾಗಿ
ಬಂದಿದ್ದ, ಪರಿಪಕ್ವ ದೆಶೆಯೀಂನ್ನಾವ
ಕಾಲಕ್ ಆಗಬೇಕೆನುತ,
ವೈರಾಗ್ಯಭಾವದಿ ಜೀವಿಸಿಕೊಂಡಿರುವುದೇ ಛಂದ,
ಹೀಗೆಂದು ಮನೆ ಧನ,
ಕೋವಿದರ ಕರೆದಿತ್ತು ಹರುಷದಿ,
ಕಾವನಯ್ಯನ ದಾಸನಾದ ||೭||
ಲಕ್ಷ್ಮಿಪತಿಯ ಪಾದದಲ್ಲಿ
ಲಕ್ಷ್ಯವಿಟ್ಟು ವ್ಯಾಸರಾಯರ
ಶಿಕ್ಷೆಯಿಂದಂಕಿತವ ಕೊಳ್ಳುತ್ತ,
ಪದ ಕೊರತೆ ಐದು ಲಕ್ಷಪದ ಸುಳಾದಿ ಹೇಳುತ್ತ,
ಪ್ರತಿದಿವಸದಲ್ಲಿ ಪಕ್ಷಿವಾಹನ ನಾಟ್ಯವಾಡುತ,
ಅಪರೋಕ್ಷ ಪುಟ್ಟಲು,
ಮೋಕ್ಷ ಸ್ಥಾನಕ್ಕೆ ಕರೆದೊಯ್ದು
ಅಧೋಕ್ಷಜ ಸಂರಕ್ಷಿಸಿದ ||೮||
ಘೊರ ನರಕದಲ್ಲಿ ಬಿದ್ದಾ
ಪಾರ ಜನರು ಚೀರುತಿರಲು,
ಉದ್ಧಾರ ಮಾಡಿದ ನಾರದಾರು ಇವರು, ಅವ
ತಾರ ಮಾಡಿ ಮತ್ತೆ ಧಾರುಣಿಯೊಳು ಬಂದರು,
ನಾರಾಯಣನೆ ಸರ್ವೋತ್ತಮನು ಎಂದು ಸಾರಿದರು
ಹೀಗೆಂದು ತಿಳಿಯಲು,
ಮಾರ ಜನಕ ವಿಜಯವಿಠ್ಠಲ
ಆರಿಗಾದರು ಒಲಿವ ಕಾಣಿರೊ ||೯||
byAsarade BajisirO puraMdara dAsarAyara
SrISa nimmanu udAsIna mADade
pOShisuva saMtOShadiMdali ||pa||
puraMdara gaDAdoLage hiriya sAhukAranenisi,
paripariya sauKyagaLannu surisutta,
irutiralu narahari karuNadiMdali
brAhmaNanAgutta,
yAchakara teradali haruShadiMdaMgaDige
hOgutta, yajamAna kaMDu,
jaridu brAhmaNanhorage hAkalu
marudivasa mat~ hOgi tA niMta ||1||
BAriBArige mOre hatti mEreyillade
Aru tiMgaLa benna bILutta, nAyakaru kaMDivanAra
biDutAreMdu baiyutta bEsattu
oMdu hEru rokkA muMde suriyutta
idaroLage oMduDDArisikO eMdu hELalu
nArAyaNa biT hOda tA naguta||2||
hittalA bAgilige hOgi matte Atana maDadiya ben hatti
biddanu vitta tArenuta magana muMjyeM
oMdyatadhikadiM bAyi tereyutta, A sAdhvi nuDidaLu
ettaNa dravyavu tanagenuta, ninna mUgina
muttina mUgutiya koDu ene
uttumaLu tegedittaLAga ||3||
jOkeyiMdAbharaNa taMdu
Ake gaMDana kaNNedurige hAkidanu tA
bAki koDuyenuta, idu nammAkeyadu
eMdAta nuDiyutta,
anyaradu yiMthAdyAke yirabAradeMdu yOchisuta,
bele hELu enalu,
nAlku nUru SuBra koDu eMd
hAki hOdanu tirUgi bAradalE ||4||
tirugi brAhmaNa bAradiralu,
karedu tanna heMDatiya,
bariya nAsikavanne kaMDanu, mUgutiyu ellene
muridihudu yeMdAke pELidalu,
oLag~hOgi taradire,
areve ninna jIvaveMdanu, viShakoMbeneMdu,
karadi baTTala dharisalAkShaNa
naraharI , mUgutiya baTTaLoLage tA iTTA ||5||
haruShadiMdAbharaNa taMdu,
puruShanA kaiyoLage yiDalu,
tarisi tannoLagidda peTTigeyA, adu kANadire,
beragAgi nODida tanna maDadiya, nija pELuyene,
arasi pELdaLu koTTa suddiyA, aBimAnakaMji,
karadi baTTala dharisalAkShaNa,
siriramaNA koTTa KareyA ||6||
dEva dEva enna manada,
BAvavannu tiLiyodakke, vRuddha brAhmaNanAgi
baMdidda, paripakva desheyIMnnAva
kAlak AgabEkenuta,
vairAgyaBAvadi jIvisikoMDiruvudE CaMda,
hIgeMdu mane dhana,
kOvidara karedittu haruShadi,
kAvanayyana dAsanAda ||7||
lakShmipatiya pAdadalli
lakShyaviTTu vyAsarAyara
SikSheyiMdaMkitava koLLutta,
pada korate aidu lakShapada suLAdi hELutta,
pratidivasadalli pakShivAhana nATyavADuta,
aparOkSha puTTalu,
mOkSha sthAnakke karedoydu
adhOkShaja saMrakShisida ||8||
Gora narakadalli biddA
pAra janaru cIrutiralu,
uddhAra mADida nAradAru ivaru, ava
tAra mADi matte dhAruNiyoLu baMdaru,
nArAyaNane sarvOttamanu eMdu sAridaru
hIgeMdu tiLiyalu,
mAra janaka vijayaviThThala
ArigAdaru oliva kANiro ||9||
Leave a Reply