Upadeshada Suladi – Prasannavenkata dasaru

Smt.Nandini Sripad

ಶ್ರೀ ಪ್ರಸನ್ನ ವೆಂಕಟದಾಸಾರ್ಯ ವಿರಚಿತ ಉಪದೇಶದ ಸುಳಾದಿ
( ಪ್ರಪಂಚದಲ್ಲಿ ಹುಟ್ಟಿ ಬಂದ ಮಾನವನಿಗೆ , ಸಂಸಾರ ಬಂಧನದಿಂದ ಪಾರಾಗಿ ಶ್ರೀ ಹರಿಯ ಚರಣವನ್ನು ಹೊಂದುವುದೇ ಪರಮೋಚ್ಛ ಗುರಿ. ಮೋಕ್ಷೋಪಯೋಗಿ ಉಪಾಯಗಳನ್ನು ಬಹು ಮಾರ್ಮಿಕವಾಗಿ ಸಿದ್ಧಾಂತದ
ಬೆಳಕಿನಲ್ಲಿ ಈ ಉಪದೇಶದ ಸುಳಾದಿಯಲ್ಲಿ ತಿಳಿಸಿ ಹೇಳಿದ್ದಾರೆ.)

ರಾಗ: ಪಂತುವರಾಳಿ , ಧ್ರುವತಾಳ

ಹರಿ ತನ್ನ ಏಕಾಂತಿಗಳಿಗೆ ಕೊಡ ವೈಭವವ
ಸಿರಿ ಸಂಪದದೆ ಸೌಖ್ಯದ ಲಂಪಟವ
ಹರಿ ತನ್ನೇಕಾಂತಿಗಳಿಗೆ ಕೊಡ ಅಖಿಳದ
ಅರಸುತನದ ಸೌಭಾಗ್ಯದ ಬಯಕೆಯ
ಕರುಣಾಂಬುಧಿ ತನ್ನ ಶರಣ ಜನರ ಭವ –
ಭಾರಕನೆಂಬೊ ಬಲು ಬಿರುದು ರಕ್ಷಕನಾಗಿ
ಅರಿಭಯದ ಬೆದರಿಕೆ ಮನೋವ್ಯಥಾ ವ್ಯಸನವು
ಬರುವುವೆಂದರಿದು ಶ್ರೀಪ್ರಸನ್ನವೆಂಕಟ ಕೃಷ್ಣ || ೧ ||

ಮಠ್ಯತಾಳ
ಮರೆಯೆ ಹರಿಗಭಿಮುಖರ ಭಾಗ್ಯವೆ ಭಾಗ್ಯ
ಹರಿಗೆ ವಿಮುಖರ ಭಾಗ್ಯ ದೌರ್ಭಾಗ್ಯ
ಹರಿಪ್ರಿಯಜನರ ವೃತ್ತಿ ನಿವೃತ್ತಿ
ಹರಿಪರವಲದ ಯಜ್ಞ ಅವಜ್ಞ
ಹರಿಮುಖ್ಯನೆಂಬೊ ನಿಗಮ ಸುಗಮ
ಹರಿಯಾದರಿಸದ ಆಗಮ ದುರಾಗಮ
ಸಿರಿ ಪ್ರಸನ್ವೆಂಕಟ ಕೃಷ್ಣ ಜೀವರಿಗೆ
ಸರಿಯೆಂದವನು ಇಹಪರಕೆ ಬಾಹಿರನು || ೨ ||

ತ್ರಿಪುಟತಾಳ

ಹರಿಯಂಘ್ರಿಯ ಮೂಲದಾಸತ್ವವ ಹೊಂದಿ
ಪರಮಮಂಗಳ ನಾಮಸ್ಮರಣೆಯನು ಬಿಡದೆ
ಇರಲೆನ್ನ ಮನವು ಇರಲೆನ್ನ ತನುವು
ತರುಣಿ ಪುತ್ರ ಮಿತ್ರಾ ಸರ್ವರಿಂ ಪ್ರಿಯನೆಂದು
ಹರಿಚರಣಾಂಬುದಮೃತಾನುಂಬೊ ಸ್ನೇಹ –
ದಿರಲೆನ್ನ ಮನವು ಇರಲೆನ್ನ ತನುವು
ನಿರುಪಾಧಿಕ ಪ್ರಿಯ ನಿರ್ಮಳ ಶ್ರುತಿಗೇಯ
ನಿರುತ ಪ್ರಸನ್ವೆಂಕಟ ಕೃಷ್ಣ ಸೇವೆಯಲಿರಲಿ || ೩ ||

ಅಟ್ಟತಾಳ
ನಿಷ್ಠರಿನ್ನೊಲ್ಲರು ನಾಕವಾಸದ ಸುಖ
ಕೊಟ್ಟರಿನ್ನೊಲ್ಲರು ಸಕಲ ಸಂಪದವನು
ಅಷ್ಟಾಂಗ ಯೋಗದ ಪಥಸಿದ್ಧಿಯೊಲ್ಲರು
ಕೃಷ್ಣಪ ಪಾದಬ್ಜ ಮಕರಂದ ಭಕುತರು
ತುಷ್ಠಿಯನೊಲ್ಲರು ಸ್ವರೂಪದ ಅನುಭವಾ –
ನಿಷ್ಟ ಕೋಟಿಗಳನು ದೃಷ್ಟಿಗೆ ತಾರದ
ಶಿಷ್ಟರಿಗಿಷ್ಟಮೂರುತಿ ಪ್ರಸನ್ವೆಂಕಟ
ಕೃಷ್ಣನ ಭಕುತಿಗೆ ಮೋಹಿತ ಮರುಳರು || ೪ ||

ಏಕತಾಳ

ಗರಿ ಉದುಭವಿಸದ ಮರಿ ತಾಯಗರೆದಂತೆ ಕಣ್
ದೆರೆಯದ ಶಿಶು ಜನನಿಯ ಬಯಸುವ ಪರಿ
ಪಿರಿಯನ ಕಾಣದ ರಮಣಿಯ ಮನದಂತೆ
ಸಿರಿರಮಣನ ಆಗಮವನೆ ಬಯಸುತಿಹೆ
ಕರಿವರದ ಪ್ರಸನ್ವೆಂಕಟ ಕೃಷ್ಣನ
ಕರುಣಾಮೃತವನುಂಡು ಸುಖಿಪೆನನುದಿನ || ೫ ||

ಜತೆ
ಸಂಸಾರ ಚಕ್ರದಿಂದ ನಿಜರ ದಾಟಿಪ ಪರಮ
ಹಂಸೇಶ ಪ್ರಸನ್ನವೆಂಕಟ ಕೃಷ್ಣ ನಮೊ ನಮೊ ||


SrI prasanna veMkaTadAsArya viracita upadESada suLAdi
( prapaMcadalli huTTi baMda mAnavanige , saMsAra baMdhanadiMda pArAgi SrI hariya caraNavannu hoMduvudE paramOcCa guri. mOkShOpayOgi upAyagaLannu bahu mArmikavAgi siddhAMtada
beLakinalli I upadESada suLAdiyalli tiLisi hELiddAre.)

rAga: paMtuvarALi , dhruvatALa

hari tanna EkAMtigaLige koDa vaiBavava
siri saMpadade sauKyada laMpaTava
hari tannEkAMtigaLige koDa aKiLada
arasutanada sauBAgyada bayakeya
karuNAMbudhi tanna SaraNa janara Bava –
BArakaneMbo balu birudu rakShakanAgi
ariBayada bedarike manOvyathA vyasanavu
baruvuveMdaridu SrIprasannaveMkaTa kRuShNa || 1 ||

maThyatALa
mareye harigaBimuKara BAgyave BAgya
harige vimuKara BAgya daurBAgya
haripriyajanara vRutti nivRutti
hariparavalada yaj~ja avaj~ja
harimuKyaneMbo nigama sugama
hariyAdarisada Agama durAgama
siri prasanveMkaTa kRuShNa jIvarige
sariyeMdavanu ihaparake bAhiranu || 2 ||

tripuTatALa

hariyaMGriya mUladAsatvava hoMdi
paramamaMgaLa nAmasmaraNeyanu biDade
iralenna manavu iralenna tanuvu
taruNi putra mitrA sarvariM priyaneMdu
haricaraNAMbudamRutAnuMbo snEha –
diralenna manavu iralenna tanuvu
nirupAdhika priya nirmaLa SrutigEya
niruta prasanveMkaTa kRuShNa sEveyalirali || 3 ||

aTTatALa
niShTharinnollaru nAkavAsada suKa
koTTarinnollaru sakala saMpadavanu
aShTAMga yOgada pathasiddhiyollaru
kRuShNapa pAdabja makaraMda Bakutaru
tuShThiyanollaru svarUpada anuBavA –
niShTa kOTigaLanu dRuShTige tArada
SiShTarigiShTamUruti prasanveMkaTa
kRuShNana Bakutige mOhita maruLaru || 4 ||

EkatALa

gari uduBavisada mari tAyagaredaMte kaN
dereyada SiSu jananiya bayasuva pari
piriyana kANada ramaNiya manadaMte
siriramaNana Agamavane bayasutihe
karivarada prasanveMkaTa kRuShNana
karuNAmRutavanuMDu suKipenanudina || 5 ||

jate
saMsAra cakradiMda nijara dATipa parama
haMsESa prasannaveMkaTa kRuShNa namo namo ||

Leave a Reply

Your email address will not be published. Required fields are marked *

You might also like

error: Content is protected !!