Harisarvottamatva Suladi – Prasannavenkata dasaru

By Smt.Nandini Sripad , Blore

ಶ್ರೀ ಪ್ರಸನ್ನವೆಂಕಟ ದಾಸಾರ್ಯ ವಿರಚಿತ ಹರಿಸರ್ವೋತ್ತಮತ್ವ ಸುಳಾದಿ
( ಈ ಸುಳಾದಿಯಲ್ಲಿ ದಾಸಾರ್ಯರು ಹರಿಸರ್ವೋತ್ತಮ ಸಿದ್ಧಾಂತವನ್ನು ಸಾರಿದ್ದಾರೆ. ಲೋಕದಲ್ಲಿ ಶ್ರೀಹರಿ ಸರ್ವೋತ್ತಮ ಎಂದು ಉಪಾಸಿಸುವರೇ ನಿಜವಾಗಿ ವಂದ್ಯರು , ಉಪೇಕ್ಷಿಸುವವರು ನಿಂದ್ಯರು. ಶ್ರೀಹರಿಯು ಅನಂತನಾಮಿ , ಅಪ್ರಾಕೃತ , ತ್ರಿಗುಣಾತೀತ , ಅವನ ಗುಣಗಳು ಅನಂತ ಅಗಣಿತ ಎಂದು ಹೇಳುವ ಮೂಲಕ ಶಾಸ್ತ್ರದ ಮಥಿತಾರ್ಥವನ್ನೇ ಇಲ್ಲಿ ವಿಶದೀಕರಿಸಿದ್ದಾರೆ. )
ರಾಗ: ಹಿಂದೋಳ
ಧ್ರುವತಾಳ
ಹರಿಸರ್ವೋತ್ತಮ ಹರಿಪರಬ್ರಹ್ಮ
ಹರಿಸಮರಾರಿಲ್ಲ ಹಿರಿಯರುಂಟೆಲ್ಲಿ
ಹರಿ ಪಟ್ಟಗಟ್ಟಿದಮರರು ವಂದಿತರು
ಹರಿಯನಾದರಿದಸುರರು ನಿಂದಿತರು
ಹರಿಯೊಲಿದಿರುವರ್ಭಕರೆ ಕೀರ್ತಿಯುತರು
ಹರಿಯನರ್ಚಿಸದ ವೃದ್ಧರೆ ಬಹಿಷ್ಕೃತರು
ಹರಿಯವೇನ ನಾಮವು ಅರೂಪ ಗುಣದೂರ ಶ್ರೀ –
ಹರಿ ಪ್ರಸನ್ವೆಂಕಟ ವರದ ಉದಾರ || ೧ ||

ಮಠ್ಯತಾಳ
ಅಯ್ಯನ ನಾಮವೆಂದರೆ ಅನಂತ ನಾಮವು
ಸ್ವನಾಮವಿಲ್ಲ ಹೀಗಲ್ಲ
ಅರೂಪವೆಂದರೆ ಪ್ರಾಕೃತರೂಪ
ಸ್ವರೂಪವಿಲ್ಲ ಹೀಗಲ್ಲ
ಗುಣರಹಿತೆಂಬುದು ತ್ರಿಗುಣಾತೀತಾ
ಗಣಿತ ಗುಣಗಳಿಲ್ಲ ಹೀಗಲ್ಲ
ನಿರ್ಗುಣ ಅರೂಪನಾಮನೆಂಬರು
ಸ್ವರ್ಗಜವರದ ಪ್ರಸನ್ವೆಂಕಟೇಶಗೆ ನಾಮವೆಂಬುದು ಹಾಗಲ್ಲ || ೨ ||

ತ್ರಿಪುಟತಾಳ
ನಾಮವೀಪರಿ ನಾಮ
ನರರಿಗುತ್ತಮರು ನೃಪರು ಮುನಿಸುರರು ತ –
ನ್ಮರುತ್ತೆರೆದೆರೆದಿರುವ ನಾಮ
ಎರಡು ಸಾಸಿರ ರಸನರು ಮೃಡಗರುಡರು
ಸ್ವರೂಪಾನುಸಾರ ನಿತ್ಯ ಸ್ಮರಿಪ ಶ್ರೀನಾಮ
ಎರಡೀರೆವದನನೀರೆರಡು ಶ್ರುತಿಯ ನಾಮ
ಸಿರಿಯಳುಚ್ಚರಿಸುವನಂತ ನಾಮ
ಪ್ರಸನ್ನವೆಂಕಟ ವರದನುದರದಿಡಿ
ಕಿರಿದಿದ್ದಾರರಿಯದ ಗುಹ್ಯನಾಮ || ೩ ||

ರೂಪಕತಾಳ
ಒಂದು ಬ್ರಹ್ಮಾಂಡ ತುಂಬೋ ದೇವ ರೂಪ ಮ –
ತ್ತೊಂದು ರೂಪದ ರೋಮರಂಧ್ರದೊಳಜಾಂಡ
ಒಂದಲ್ಲ ನೂರಲ್ಲ ಹೊಂದಿದುವನಂತವು
ಒಂದೊಂದಜಾಂಡದೊಳಗ್ಹೊರಗ ಪರಿಪೂರ್ಣ
ಅಂದು ಏಕಾರ್ಣವದೊಳೊಂದು ವಟಪತ್ರದಿ ಆ
ನಂದನರಸಿಯ ಮೊಲೆಯನೊಂದು ಚಪ್ಪರಿದುಂಡು
ಒಂದರೊಳು ಕರವಿಟ್ಟ ಪ್ರಸನ್ವೆಂಕಟ ರೂಪ || ೪ ||

ಝಂಪೆತಾಳ
ಕರ ಚರಣ ನಖ ಕೇಶ ಶಿರ ಚಕ್ಷು ಶ್ರವಣಾದಿ
ಸರ್ವಾವಯವಗಳಿಂದ ಸರ್ವರೂಪಗಳಿಂದ
ಸಿರಿಯರಸ ಸ್ವಗತ ಭೇದವಿದೂರ ಹೀ –
ಗರಿಯದೆ ಐದು ಭೇದವಸತ್ಯವೆಂಬ ಪಾ –
ಮರಗೇವೆ ನಿತ್ಯಾಂಧ ನರಕವೆ ಸ್ಥಿರವಯ್ಯ
ಸಿರಿ ಪ್ರಸನ್ನವೆಂಕಟ ವರದಾನಂತಾಭಿದಾ –
ವರ ಬಿಂಬೋತ್ತಮನಾಗಿ ಪೊರೆವ ಪ್ರತಿಬಿಂಬ
ಸಿರಿ ಅರಸ ಭೇದವಿದೂರ || ೫ ||

ಜತೆ
ಹರಿಯವೇನ ನಾಮವು ಅರೂಪ ಗುಣದೂರ ಶ್ರೀ –
ಹರಿ ಪ್ರಸನ್ವೆಂಕಟ ವರದ ಉದಾರ ||


SrI prasannaveMkaTa dAsArya viracita harisarvOttamatva suLAdi
( I suLAdiyalli dAsAryaru harisarvOttama siddhAMtavannu sAriddAre. lOkadalli SrIhari sarvOttama eMdu upAsisuvarE nijavAgi vaMdyaru , upEkShisuvavaru niMdyaru. SrIhariyu anaMtanAmi , aprAkRuta , triguNAtIta , avana guNagaLu anaMta agaNita eMdu hELuva mUlaka SAstrada mathitArthavannE illi viSadIkarisiddAre. )
rAga: hiMdOLa
dhruvatALa
harisarvOttama hariparabrahma
harisamarArilla hiriyaruMTelli
hari paTTagaTTidamararu vaMditaru
hariyanAdaridasuraru niMditaru
hariyolidiruvarBakare kIrtiyutaru
hariyanarcisada vRuddhare bahiShkRutaru
hariyavEna nAmavu arUpa guNadUra SrI –
hari prasanveMkaTa varada udAra || 1 ||

maThyatALa
ayyana nAmaveMdare anaMta nAmavu
svanAmavilla hIgalla
arUpaveMdare prAkRutarUpa
svarUpavilla hIgalla
guNarahiteMbudu triguNAtItA
gaNita guNagaLilla hIgalla
nirguNa arUpanAmaneMbaru
svargajavarada prasanveMkaTESage nAmaveMbudu hAgalla || 2 ||

tripuTatALa
nAmavIpari nAma
narariguttamaru nRuparu munisuraru ta –
nmarutterederediruva nAma
eraDu sAsira rasanaru mRuDagaruDaru
svarUpAnusAra nitya smaripa SrInAma
eraDIrevadananIreraDu Srutiya nAma
siriyaLuccarisuvanaMta nAma
prasannaveMkaTa varadanudaradiDi
kirididdArariyada guhyanAma || 3 ||

rUpakatALa
oMdu brahmAMDa tuMbO dEva rUpa ma –
ttoMdu rUpada rOmaraMdhradoLajAMDa
oMdalla nUralla hoMdiduvanaMtavu
oMdoMdajAMDadoLag~horaga paripUrNa
aMdu EkArNavadoLoMdu vaTapatradi A
naMdanarasiya moleyanoMdu cappariduMDu
oMdaroLu karaviTTa prasanveMkaTa rUpa || 4 ||

JaMpetALa
kara caraNa naKa kESa Sira cakShu SravaNAdi
sarvAvayavagaLiMda sarvarUpagaLiMda
siriyarasa svagata BEdavidUra hI –
gariyade aidu BEdavasatyaveMba pA –
maragEve nityAMdha narakave sthiravayya
siri prasannaveMkaTa varadAnaMtABidA –
vara biMbOttamanAgi poreva pratibiMba
siri arasa BEdavidUra || 5 ||

jate
hariyavEna nAmavu arUpa guNadUra SrI –
hari prasanveMkaTa varada udAra ||

Leave a Reply

Your email address will not be published. Required fields are marked *

You might also like

error: Content is protected !!