Sharanu benakane

Composer : Shri Purandara dasaru

Kum.Srinidhi Ravi

ಶರಣು ಬೆನಕನೆ ಕನಕರೂಪನೆ
ಕಾಮಿನಿ ಸಂಗದೂರನೇ,
ಶರಣು ಸಾಂಬನ ಪ್ರೀತಿ ಪುತ್ರನೆ,
ಶರಣು ಜನರಿಗೆ ಮಿತ್ರನೆ ||ಪ||

ಏಕದಂತನೆ ಲೋಕ ಖ್ಯಾತನೆ
ಏಕವಾಕ್ಯ ಪ್ರವೀಣನೇ,
ಏಕವಿಂಶತಿ ಪತ್ರ ಪೂಜಿತಾನೇಕ
ವಿಘ್ನ ವಿನಾಯಕ ||೧||

ಲಂಬಕರ್ಣನೆ ನಾಸಿಕಾಧರನೆ
ಗಾಂಭೀರ್ಯಯುತ ಗುಣಸಾರನೇ
ಕಂಬುಕಂಧರ ಇಂದು ಮೌಳಿಜ
ಚಂದನ-ಚರ್ಚಿತಾಂಗನೇ ||೨||

ಚತುರ್ಬಾಹು ಚರಣ ತೊಡಲನೆ
ಚತುರ ಆಯುಧ ಧಾರನೇ
ಮತಿಯವಂತನೆ ಮಲಿನ ಜಲಿತನೆ
ಅತಿಯ ಮಧುರಾ ಹಾರನೇ ||೩||

ವಕ್ರತುಂಡನೆ ಮಹಾಕಾಯನೆ
ಅರ್ಕ ಕೋಟಿ ಪ್ರದೀಪನೇ
ಚಕ್ರಧರ ಹರ ಬ್ರಹ್ಮ ಪೂಜಿತ
ರಕ್ತ ವಸ್ತ್ರಾ ಧಾರನೇ ||೪||

ಮೂಷಿಕಾಸನ ಶೇಷಭೂಷಣ
ಅಶೇಷ ವಿಘ್ನವಿನಾಯಕ
ದಾಸ ಪುರಂದರವಿಠ್ಠಲೇಶನ
ಈಶಗುಣಗಳ ಪೊಗಳುವೆ ||೫||


SaraNu benakane kanakarUpane
kAmini saMgadUranE,
SaraNu sAMbana prIti putrane,
SaraNu janarige mitrane ||pa||

EkadaMtane lOka KyAtane
EkavAkya pravINanE,
EkaviMSati patra pUjitAnEka
viGna vinAyaka ||1||

laMbakarNane nAsikAdharane
gAMBIryayuta guNasAranE
kaMbukaMdhara iMdu mauLija
caMdana-carcitAMganE ||2||

caturbAhu caraNa toDalane
catura Ayudha dhAranE
matiyavaMtane malina jalitane
atiya madhurA hAranE ||3||

vakratuMDane mahAkAyane
arka kOTi pradIpanE
cakradhara hara brahma pUjita
rakta vastrA dhAranE ||4||

mUShikAsana SEShaBUShaNa
aSESha viGnavinAyaka
dAsa puraMdaraviThThalESana
ISaguNagaLa pogaLuve ||5||

Leave a Reply

Your email address will not be published. Required fields are marked *

You might also like

error: Content is protected !!