Pavadisu paramatmane

Composer : Shri Purandara dasaru

By Smt.Shubhalakshmi Rao

ಪವಡಿಸು ಪರಮಾತ್ಮನೆ ಸ್ವಾಮಿ
ಭವರೋಗ ವೈದ್ಯನೆ ಭಕ್ತರ ಪ್ರಿಯನೆ ||ಪ||

ಕುಂದಣದಿ ರಚಿಸಿದ ಸೆಜ್ಜೆಯ ಮನೆಯಲಿ
ಇಂದ್ರನೀಲ ಮಣಿ ಮಂಟಪದಿ ||
ಚಂದ್ರಕಾಂತಿಯ ಠಾಣದೀವಿಗೆ ಹೊಳೆಯಲು
ಸಿಂಧು ಶಯನ ಆನಂದದಿಂದಲಿ [೧]

ತೂಗುಮಂಚದಿ ಹಂಸತೂಲದ ಹಾಸಿಗೆ
ನಾಗಸಂಪಿಗೆಯ ಹೂವಿನ ಒರಗು ||
ಸಾಗರಸುತೆಯ ಸಮ್ಮೇಳದಲಿ ನಿಜ
ಭೋಗವ ಪಡುತ ಓಲಾಡುತಿರು [೨]

ಸದ್ದಡಗಿತು ಗಡಿಯಾರ ಸಾರಿತು ಬೇಗ
ಮುದ್ರೆಗಳಾಗಿವೆ ಬಾಗಿಲಿಗೆ ||
ತಿದ್ದಿದ ಧವಳ ಶಂಖಗಳ ನಾದದಿಂದ
ಪದ್ಮನಾಭ ಶ್ರೀ ಪುರಂದರವಿಠಲ [೩]


pavaDisu paramAtmane svAmi
BavarOga vaidyane Baktara priyane ||pa||

kuMdaNadi racisida sejjeya maneyali
iMdranIla maNi maMTapadi ||
caMdrakAMtiya ThANadIvige hoLeyalu
siMdhu Sayana AnaMdadiMdali [1]

tUgumaMcadi haMsatUlada hAsige
nAgasaMpigeya hUvina oragu ||
sAgarasuteya sammELadali nija
BOgava paDuta OlADutiru [2]

saddaDagitu gaDiyAra sAritu bEga
mudregaLAgive bAgilige ||
tiddida dhavaLa SaMKagaLa nAdadiMda
padmanABa SrI puraMdaraviThala [3]

Leave a Reply

Your email address will not be published. Required fields are marked *

You might also like

error: Content is protected !!