Krishna mahima suladi – neenitta tanuvo

Composer : Shri Vijayadasaru

Smt.Nandini Sripad

ಶ್ರೀಕೃಷ್ಣ ಮಹಿಮಾ ಸುಳಾದಿ
ರಾಗ: ಶಂಕರಾಭರಣ

ಧ್ರುವತಾಳ

ನೀನಿತ್ತ ತನುವೋ ನೀನಿತ್ತ ಮನವೋ
ನೀನಿತ್ತ ಸದನವೋ ನೀನಿತ್ತ ವನಿತೆ ನಂದನರತಿ ಘನವೋ
ನೀನಿತ್ತ ಚೇತನವೋ ನೀನಿತ್ತ ಮನವೋ
ನೀನಿತ್ತ ಸಕಲೇಂದ್ರಿಗಳ ಅಭಿಮಾನವೋ
ನಾನಾವದು ಬೇಡಿ ನಾನಿಂತು ಬೇಕೆಂದು
ನಾನಿಂತು ಬಿನ್ನೈಸಿ ನಾನಿಂತು ಕೇಳಿದೆನೆ
ನಾನಾನೇಕದಾ ನಾನಾವಸ್ಥಿಯಾ
ನಾನಾವಾ ಬಗೆ ನಾನಾವೆನಿಸಿ
ನೀನಿತ್ತ ಬಾರದೆ ನೀನಿತ್ತ ಪೋಗದು
ನೀನಿತ್ತವಯ್ಯಾ ಕಾವಾನಯ್ಯಾ
ನಾನೆತ್ತ ಪೊಂದಲಿ ನಾನಾ ರಸದಲ್ಲಿ
ನಾನಾಕ ಮಾಯದ ನಾರಾಯಣ
ದಾನವನಾಶಾ ರಂಗ ವಿಜಯವಿಟ್ಠಲ ಸ್ವಾಂಗಾ
ನೀನನಾದಿ ಎಂದು ನಾನಾದೆ ದಾಸಾ || ೧ ||

ಮಟ್ಟತಾಳ

ಆರು ಇಲ್ಲದ ಒಬ್ಬ ಊರಾ ಪರದೇಶಿಯ ವೈದು
ನೀರೊಳಗೆ ಹಾಕಿ ತೀರದಲ್ಲಿ ಇರದೆ
ದೂರದಲ್ಲಿ ನಿಂದು ಮೋರೆ ನೋಡುವರೇನೊ
ಆರಾದರೆ ಏನು ವಾರವಾರಕೆ ತಮ್ಮ
ವಾರಣದ ವಾರ್ತೆ ಹಾರೈಸುವವರಯ್ಯಾ
ಸಾರಿ ಸಾರಿಗೆ ಸಂಸಾರದೊಳಗೆ ಬೀಳೆ
ತ್ಯೆರಿಕೆಯ ಯವನಾಗಿ ದೂರ ನೋಡುತಲಿಪ್ಪ
ಚಾರುತನವೇನೋ ವೀರ ವಿಜಯವಿಟ್ಠ –
ಲಾರು ಮೆಚ್ಚುವರು ಈ ಗಾರುಡದಾಟಕ್ಕೆ
ಭಾರಕ ನೀನೆಲ್ಲಾ ಧಾರುಣಿಯೊಳಗೆಲ್ಲಾ || ೨ ||

ರೂಪಕತಾಳ

ಹಂಗು ಹರಿದ ಮೇಲೆ ಲಿಂಗದ ಪರವೆ ಎ –
ನ್ನಂಗವ ನಿನ್ನಯ ಅಂಘ್ರಿಗೊಪ್ಪಿಸಿದೆ ಈ
ಅಂಗದ ಪರವೇನು ಅಂಗಜಪಿತ ತಿರು –
ವೆಂಗಳನಿಹ ಲಾವಾಂಗವ ಹರಿ ಬಿಡೆ
ಕಂಗೆಡದಲೆ ನಿನ್ನುಂಗುಟ ಬಾಯಲ್ಲಿ
ಹಿಂಗದೆ ಕಚ್ಚಿ ಹೀನಂಗಳ ನೂಕುವೆ
ಹಿಂಗಳದಡೆ ನಿನ್ನ ನಿನ್ನಂಗನಿರಲು ದಿವ –
ಸಂಗಳು ಪೊತ್ತು ಪೆತ್ತದು ಬರಿ ದೇವ
ನಂಗ ವಿಜಯವಿಟ್ಠಲಂಗೈಸುರುವೆನು ಈ
ಅಂಗಿಯ ಬಿಡಿಸೆನ್ನ ಅಂಗೀಕರಿಸಿಕೊಳ್ಳೊ || ೩ ||

ಝಂಪೆತಾಳ

ಬಿಂದು ಮೊದಲು ಅವ್ಯಾಕೃತಕಾಶ ಪರಿಯಂತ
ಒಂದು ಸ್ಥಳವೆನ್ನದಲೆ ವ್ಯಾಪ್ತನಾಗಿ
ಎಂದೆಂದಿಗೆ ಇಲ್ಲವೆಂದು ಎನ್ನಯ ಮುಂದೆ
ಬಂದು ನಿಂದಿರಲಾಪ್ಯಾ ಇಂದಿರಾರಮಣಾ
ಮಂದಮತಿಯ ಕೈಯ್ಯಾ ಇಂದ ನಿಂದಿಸಿ ಕೊಳದೆ
ಪೊಂದಿ ಬಾಂಧವನಾಗಿ ದೋಷಂಗಳ ಪಾಶಾ
ಬಂಧನವೆ ಪರಿಹರಿಸು ಒಂದೆ ದೈವವೆ ಶರ –
ಣೆಂದೆನೊ ವಿಜಯವಿಟ್ಠಲಾ ನಂದಕಿ ನಾಮಾ || ೪ ||

ತ್ರಿವಿಡಿತಾಳ

ನೀ ಕಲ್ಪಿಸದವು ನೀ ಕಡೆ ನೋಟಾ
ನೀ ಕರುಣದಿಂದ ನೀ ಕಾಯದಿರಲು
ನಾ ಕಾಣೆನವನಿಯೊಳು ನಾಕಾದಿ ಬಲದೊಳು
ನಾ ಕಂಡೇನಂದು ಪಿನಾಕಿಯ ಕಾಯ್ದದ್ದು
ಈ ಕಾಮೇಂದ್ರಿಯಗಳು ಎನ್ನ ಕಾಯದೊಳಗಿದ್ದ –
ರಾ ಕೂಡಿ ಇರಲಿ ವಿವೇಕದಲಿ ನಿತ್ಯ
ನಾ ಕೈಯಾ ಮುಗಿದು ಈ ವಾಕು ಬೇಡುವೆ ವಿ –
ವೇಕ ನಾಮಾ ನಮ್ಮ ವಿಜಯವಿಟ್ಠಲರೇಯಾ
ನೀ ಕಡೆ ಮಾಡದೆ ಸಾಕು ದಯದಿಂದ || ೫ ||

ಅಟ್ಟತಾಳ

ಹೃಷಯಂಗಳಿಗೆ ನೀನರಸನಾದ ಕಾರಣ
ಹೃಷಿಕೇಶನೆಂದು ದಿವ್ಯ ಪೆಸರು ಪೆಸರಿತಯ್ಯ
ಘಸಣೆ ಮಾಡುವ ಮುನ್ನ ಸಮ ಹೃಷಿಕಾದಿಗಳು
ಅಸುವಿಂಗೆ ಸುತ್ತಿ ಉಬ್ಬಸವ ಬಡುಸುತಿರೆ
ಅಸುರಾರಿ ವೇಗ ಹಾರಿಸದಿದ್ದರೆ ನಿನಗೆ
ಹೃಷಿಕೇಶನೆಂಬೊ ಮಹಾ ಪೆಸರು ಪುಶಿಯಾಗದೆ
ಉಸಿರಿದವೆಲ್ಲಿ ಮೋಹಾ ಬಸುರೊಳಗಿದ್ದರೇನು
ಕೇಶಘ್ನಿ ವಿಜಯವಿಟ್ಠಲೊಶವಾಗಿ ನಿನ್ನವನೆನಿಸು || ೬ ||

ಆದಿತಾಳ

ಬದುಕಲಾರೆನೆಂದು ಇದರೊಳಗೊಂದಾದರು
ಬದಿಗೆ ಬಂದು ಎನಗೆ ಒದಗಲಿ ಎಂದೆನೇ
ಉದುಭವಿಸುವಾಗ ಚದುರಮತಿಯಲಿದ್ದೆ
ಬೆದರಿಸುವರಿದರ ಅದುಭೂತವರಿಯನು
ತುದಿಗಾದರು ಒಳಿತು ಹೀನದಲಿ ಒಮ್ಮೆ ನಿನ್ನ
ಉದರದೊಳಗೆ ನಿದ್ರೆ ಪದರದೆ ಗೈವೆನೋ
ಇದಕೆ ಸಂಶಯ ಸಲ್ಲಾ ವಿಜಯವಿಟ್ಠಲ ವಿರಜಾ
ಎದೆಗುದೆ ಎನಗಿಲ್ಲಾ ಯಾದವ ಶಿರಿನಲ್ಲಾ || ೭ ||

ಜತೆ

ಸ್ವಾರವಿತ್ತಮ ಸಂವರ ನಿನ್ನ ಸದನವು
ಸರಿ ಬಂದಲ್ಲಿಡು ಧಾತಾ ವಿಜಯವಿಟ್ಠಲರೇಯಾ ||


SrIkRuShNa mahimA suLAdi
rAga: SaMkarABaraNa

dhruvatALa

nInitta tanuvO nInitta manavO
nInitta sadanavO nInitta vanite
naMdanarati GanavO
nInitta cEtanavO nInitta manavO
nInitta sakalEMdrigaLa aBimAnavO
nAnAvadu bEDi nAniMtu bEkeMdu
nAniMtu binnaisi nAniMtu kELidene
nAnAnEkadA nAnAvasthiyA
nAnAvA bage nAnAvenisi
nInitta bArade nInitta pOgadu
nInittavayyA kAvAnayyA
nAnetta poMdali nAnA rasadalli
nAnAka mAyada nArAyaNa
dAnavanASA raMga vijayaviTThala svAMgA
nInanAdi eMdu nAnAde dAsA || 1 ||

maTTatALa

Aru illada obba UrA paradESiya vaidu
nIroLage hAki tIradalli irade
dUradalli niMdu mOre nODuvarEno
ArAdare Enu vAravArake tamma
vAraNada vArte hAraisuvavarayyA
sAri sArige saMsAradoLage bILe
tyerikeya yavanAgi dUra nODutalippa
cArutanavEnO vIra vijayaviTTha –
lAru meccuvaru I gAruDadATakke
BAraka nInellA dhAruNiyoLagellA || 2 ||

rUpakatALa

haMgu harida mEle liMgada parave e –
nnaMgava ninnaya aMGrigoppiside I
aMgada paravEnu aMgajapita tiru –
veMgaLaniha lAvAMgava hari biDe
kaMgeDadale ninnuMguTa bAyalli
hiMgade kacci hInaMgaLa nUkuve
hiMgaLadaDe ninna ninnaMganiralu diva –
saMgaLu pottu pettadu bari dEva
naMga vijayaviTThalaMgaisuruvenu I
aMgiya biDisenna aMgIkarisikoLLo || 3 ||

JaMpetALa

biMdu modalu avyAkRutakASa pariyaMta
oMdu sthaLavennadale vyAptanAgi
eMdeMdige illaveMdu ennaya muMde
baMdu niMdiralApyA iMdirAramaNA
maMdamatiya kaiyyA iMda niMdisi koLade
poMdi bAMdhavanAgi dOShaMgaLa pASA
baMdhanave pariharisu oMde daivave Sara –
NeMdeno vijayaviTThalA naMdaki nAmA || 4 ||

triviDitALa

nI kalpisadavu nI kaDe nOTA
nI karuNadiMda nI kAyadiralu
nA kANenavaniyoLu nAkAdi baladoLu
nA kaMDEnaMdu pinAkiya kAydaddu
I kAmEMdriyagaLu enna kAyadoLagidda –
rA kUDi irali vivEkadali nitya
nA kaiyA mugidu I vAku bEDuve vi –
vEka nAmA namma vijayaviTThalarEyA
nI kaDe mADade sAku dayadiMda || 5 ||

aTTatALa

hRuShayaMgaLige nInarasanAda kAraNa
hRuShikESaneMdu divya pesaru pesaritayya
GasaNe mADuva munna sama hRuShikAdigaLu
asuviMge sutti ubbasava baDusutire
asurAri vEga hArisadiddare ninage
hRuShikESaneMbo mahA pesaru puSiyAgade
usiridavelli mOhA basuroLagiddarEnu
kESaGni vijayaviTThaloSavAgi ninnavanenisu || 6 ||

AditALa

badukalAreneMdu idaroLagoMdAdaru
badige baMdu enage odagali eMdenE
uduBavisuvAga caduramatiyalidde
bedarisuvaridara aduBUtavariyanu
tudigAdaru oLitu hInadali omme ninna
udaradoLage nidre padarade gaivenO
idake saMSaya sallA vijayaviTThala virajA
edegude enagillA yAdava SirinallA || 7 ||

jate

svAravittama saMvara ninna sadanavu
sari baMdalliDu dhAtA vijayaviTThalarEyA ||

Leave a Reply

Your email address will not be published. Required fields are marked *

You might also like

error: Content is protected !!