Composer : Shrida Narahari vittala
ರಾಘವೇಂದ್ರ ಪಾಲಿಸಯ್ಯ, ಪಾಲಿಸಯ್ಯ
ಯೋಗಿಚಂದ್ರ ಲಾಲಿಸಯ್ಯ |
ಅಘ ನಾಶಕ ಮಂತ್ರಾಲಯ ನಿಲಯ, ನಿಲಯ
ಭೋಗಿ ಶಯನನ ಧ್ಯಾನ, ಭಾಘಿರತಿ ಸ್ನಾನ
ಯಾಗವು ಯೋಗವು ಮಾಡಿ ನಾ ಕಾಣೆನಯ್ಯ ||ಅ.ಪ.||
ತುಂಗಾ ತರಂಗಿಣಿಯಲಿ ಮಿಂದು ಮಡಿಯಲಿ ನಿಂದು
ಅಂಗನೇ ಪುರುಷರು ಸಿಂಧು ವಂದಿಸುತ
ಬಂಗು ಬತ್ತಿದ ಮುಖ ಅಂಗ ಹೀನರ ಶೋಕ
ಹಿಂಗಿಸಿ ನಗೆಸುವ ಮಾಂಗಳ ಮಹಿಮ ||೧||
ವೃಂದಾರ ಕೇಂದ್ರನುತ ಆನಂದ ತೀರ್ಥ
ಪ್ರಣೀತ ಗ್ರಂತಾರ್ಥ ಪರಿಮಳ ಗಂಧ ಬರಿಸುತ
ವಂದಾರು ಜನಸುರ ಮಂದಾರವೆನಿಸಿ
ಆನಂದ ಮಂದಿರಸುತ ಬೃಂದಾವನ ಸ್ತಿಲ ||೨||
ವೇದ ಪುರಾಣ ಶಾಸ್ತ್ರಾಧಾರ ತೋರಿಸಿ
ಭೇದ ಸಾಧಿಸಿ ಮಾಯವಾದಿಗಳನು ಜೆಯಿಸಿ
ಬಾದರಾಯಣ ಪೂರ್ಣಬೋಧರ ಮೆಚ್ಚಿಸಿ
ಶ್ರೀದ ನರ-ಹರಿ ವಿಠ್ಠಲನ ಪ್ರಸಾದ
ಪೊಂದಿದ ಗುರು ||೩||
rAghavEMdra pAlisayya, pAlisayya
yOgichaMdra lAlisayya |
agha nAshaka maMtrAlaya nilaya, nilaya
bhOgi shayanana dhyAna, bhAghirati snAna
yAgavu yOgavu mADi nA kANenayya ||a.pa.||
tuMgA taraMgiNiyali miMdu maDiyali niMdu
aMganE puruSharu siMdhu vaMdisuta
baMgu battida mukha aMga hInara shOka
hiMgisi nagesuva mAMgaLa mahima ||1||
vRuMdAra kEMdranuta AnaMda tIrtha
praNIta graMtArtha parimaLa gaMdha barisuta
vaMdAru janasura maMdAravenisi
AnaMda maMdirasuta bRuMdAvana stila ||2||
vEda purANa shAstrAdhAra tOrisi
bhEda sAdhisi mAyavAdigaLanu jeyisi
bAdarAyaNa pUrNabOdhara meccisi
shrIda nara-hari viThThalana prasAda
poMdida guru ||3||
Leave a Reply