Parvati Suladi – Abhinava Pranesha vittala

By Smt.Nandini Sripad ,Blore

ಶ್ರೀ ಅಭಿನವ ಪ್ರಾಣೇಶವಿಠಲ ದಾಸ ವಿರಚಿತ
ಶ್ರೀ ಪಾರ್ವತಿ ದೇವಿ ಸ್ತೋತ್ರ ಸುಳಾದಿ”
ರಾಗ: ರೇವತಿ

ಧ್ರುವತಾಳ
ಉಮಾ ಕಾತ್ಯಾಯನಿ ಪಾರ್ವತಿ ಕಲ್ಯಾಣಿ |
ಬೊಮ್ಮ ಭೃಕುಟಿ ಸಂಭೂತ ದೇವನ ರಾಣಿ |
ಕಮ್ಮಗೊಲನ ಜನನಿ ದಾಕ್ಷಾಯಿಣಿ |
ಸುಮನಸರಿಗೆ ಗತಿ ಕರುಣಾ ಪೂರಿತ ಪಾಂಗೆ |
ಕುಮನಸರಿಗತಿ ವಜ್ರಕಠಿಣಪಾಂಗೆ |
ರಮೆಯರಸನ ಪಾದ ಸುಮನಸ್ವಭೃಂಗೆ |
ಬೊಮ್ಮನ ಅಭಿನವ ಪ್ರಾಣೇಶವಿಠಲನ |
ಸುಮನ ಚರಣಗಳಲ್ಲಿ ಮನವ ಪ್ರೇರಿಸು ತಾಯೆ || ೧ ||

ಮಟ್ಟತಾಳ
ಚಂಡಿದುರ್ಗೆ ಭೂತಗಣ ಸಂಸೇವಿತಳೆ |
ರುಂಡಾಹಿಮಾಲಾಧರ ಹೃನ್ಮಂದಿರಳೆ |
ಉಂಡು ವಿಷವ ನಿನ್ನ ಗಂಡನು ಬಳಲಿ |
ಕೈಕೊಂಡೌಷಧವೆನಗೆ |ಕರುಣದಿ ನೀಡಮ್ಮ |
ಮಂಡೆ ಬಾಗಿ ಬೇಡ್ವೇ |ಕರಗಳ ಜೋಡಿಸುತ |
ಪುಂಡರೀಕನಯನೆ ಪುಂಡರೀಕ ಗಮನೆ |
ಪಂಡರ ಅಭಿನವ ಪ್ರಾಣೇಶವಿಠಲನ |
ಪುಂಡರೀಕ ಚರಣ ಬಂಡುಣಿ ಎನಿಸಮ್ಮ || ೨ ||

ತ್ರಿವಿಡಿತಾಳ
ಅರುಮೊಗನ ಪೆತ್ತ ಚಾರು ಚರಿತ್ರಳೆ |
ವಾರಣಾರಿ ವೃಷಭಶ್ಯಂದನಳೆ |
ಶ್ರೀರಜಪತಿ ರಾಮನಾಮ ಮಂತ್ರವ ಜಪಿಸಿ |
ಸರ್ವ ಮಂಗಳೆಯಾದ ಶರ್ವಾಣಿಯೆ |
ನಾರಿಯರಾಭಿಷ್ಟ ಪೂರೈಸುತವರಿಗೆ |
ವೀರಪತಿವ್ರತೆಧರ್ಮ ಮರ್ಮವ ತೋರಿದ |
ವಾರಿಜನಯನೇ ಮಂಗಳ ಗೌರಿಯೇ |
ಮಾರಮಣ ಅಭಿನವ ಪ್ರಾಣೇಶ ವಿಠಲನ |
ಚಾರು ಚರಣಗಳಲ್ಲಿ ಮನವ ಪ್ರೇರಿಸು ತಾಯಿ || ೩ ||

ಅಟ್ಟತಾಳ
ಹರಿಸರ್ವೋತ್ತಮನೆಂಬ ಸ್ಥಿರವಾದ ಜ್ಞಾನವ |
ಕರುಣಿಸು ಕರುಣಿಸು ಶೆರಗೊಡ್ಡಿ ಬೇಡುವೆ |
ದುರುಳ ದಾನವರಂತೆ ಪರಮೇಶ ಶಿವನೆಂದು |
ಪೆರಧರ ಪರನೆಂದು ನುಡಿಸದಿರೆಂದೆಂದು |
ಸಿರಿಯರಸನ ಪೆದ್ದ ಪರಿಚರ್ಯವನು ಕೊಡು |
ಮರುಳೊಂದು ಬಯಸೇನು ಖೇಶ ಷಣ್ಮುಖ ಮಾತೆ |
ಸಿರಿವರ ಅಭಿನವ ಪ್ರಾಣೇಶ ವಿಠಲನ |
ಚರಣವಿರಜ ಭೃಂಗೆ ದೀನ ದಯಪಾಂಗೆ || ೪ ||

ಅದಿತಾಳ
ಭಾಸುರ ಚರಿತಳೆ ಭೂಸುರ ವಿನುತಳೆ |
ಸಾಸಿರ ನಾಮನ ತೋಷದಿ ಭಜಿಪಳೆ |
ವಾಸವಾದಿ ದಿವಿಜೇಶ ಗಣಾರ್ಚಿತೆ |
ದಾಶರಥಿ ಹರಿ ವಾಸುದೇವ ಪದ |
ಸಾಸಿರ ಪತ್ರದಿ ಧೃಢ ಭಕುತಿಯ ಕೊಡು |
ಮೇಷ ಅಭಿನವ ಪ್ರಾಣೇಶ ವಿಠಲನ |
ದಾಸ್ಯತನವಿತ್ತು ಪೋಷಿಸುವದೆಮ್ಮಾ || ೫ ||

ಜತೆ
ಅಜನಾಮ ಅಭಿನವ ಪ್ರಾಣೇಶ ವಿಠಲನ |
ನಿಜ ದಾಸನೆಂದೆನಿಸು ಸುಜನ ಪೋಷಕಳೆ || ೬ ||


SrI aBinava prANESaviThala dAsa viracita
SrI pArvati dEvi stOtra suLAdi”
rAga: rEvati

dhruvatALa
umA kAtyAyani pArvati kalyANi |
bomma BRukuTi saMBUta dEvana rANi |
kammagolana janani dAkShAyiNi |
sumanasarige gati karuNA pUrita pAMge |
kumanasarigati vajrakaThiNapAMge |
rameyarasana pAda sumanasvaBRuMge |
bommana aBinava prANESaviThalana |
sumana caraNagaLalli manava prErisu tAye || 1 ||

maTTatALa
caMDidurge BUtagaNa saMsEvitaLe |
ruMDAhimAlAdhara hRunmaMdiraLe |
uMDu viShava ninna gaMDanu baLali |
kaikoMDauShadhavenage |karuNadi nIDamma |
maMDe bAgi bEDvE |karagaLa jODisuta |
puMDarIkanayane puMDarIka gamane |
paMDara aBinava prANESaviThalana |
puMDarIka caraNa baMDuNi enisamma || 2 ||

triviDitALa
arumogana petta cAru caritraLe |
vAraNAri vRuShaBaSyaMdanaLe |
SrIrajapati rAmanAma maMtrava japisi |
sarva maMgaLeyAda SarvANiye |
nAriyarABiShTa pUraisutavarige |
vIrapativratedharma marmava tOrida |
vArijanayanE maMgaLa gauriyE |
mAramaNa aBinava prANESa viThalana |
cAru caraNagaLalli manava prErisu tAyi || 3 ||

aTTatALa
harisarvOttamaneMba sthiravAda j~jAnava |
karuNisu karuNisu SeragoDDi bEDuve |
duruLa dAnavaraMte paramESa SivaneMdu |
peradhara paraneMdu nuDisadireMdeMdu |
siriyarasana pedda paricaryavanu koDu |
maruLoMdu bayasEnu KESa ShaNmuKa mAte |
sirivara aBinava prANESa viThalana |
caraNaviraja BRuMge dIna dayapAMge || 4 ||

aditALa
BAsura caritaLe BUsura vinutaLe |
sAsira nAmana tOShadi BajipaLe |
vAsavAdi divijESa gaNArcite |
dASarathi hari vAsudEva pada |
sAsira patradi dhRuDha Bakutiya koDu |
mESha aBinava prANESa viThalana |
dAsyatanavittu pOShisuvademmA || 5 ||

jate
ajanAma aBinava prANESa viThalana |
nija dAsaneMdenisu sujana pOShakaLe || 6 ||

Leave a Reply

Your email address will not be published. Required fields are marked *

You might also like

error: Content is protected !!