Composer : Shri Guru Indiresha
ಸುಂದರ ಗುರು ರಾಘವೇಂದ್ರಾರ್ಯ-ರೆಂತೆಂಬೋ
ಕರ್ಮಂದಿಗಳರಸನೆ ವಂದಿಸುವೆ [ಪ]
ಬಂದ ಭಕುತರ ಅಘವೃಂದ ಕಳೆವ
ಗುಣಸಾಂದ್ರ ಸನ್ನುತ ಮಹಿಮ
ಎಂದು ನಾ ನಂಬಿದೆ [ಅ.ಪ.]
ಪರಮ ಕರುಣಿ ನಿಜ ಚರಣ
ಭಜಕರ-ನುದ್ಧರಿಸ-ಲನುದಿನ ಪೊರೆವೆನೆಂದೂ |
ಕರವ ಮುಗಿದು ತ್ವರ ಪರಿಯಲಿ ನಿನ್ನಾಲ್ಪರಿಯುವೆ |
ದೈನ್ಯದಿ ಬಾಯ್ ತೆರೆಯುವೆ | ಕರ ಪಿಡಿ ಎಂದು ಕರೆಯುವೆ |
ನಿನ್ನ ಸರಿ ಪೊರೆವಂಥ ದೊರೆಗಳ ಕಾಣೆ ಮದ್ಗುರುವೆ |
ಎನ್ನಂಥ ಪಾಮರ ನರರ ಕಾವುದು ನಿನಗೆ ಅಚ್ಚರಿಯೇ |
ವಿಜಯೀಂದ್ರ ಕರಜರ ವರಕುಮಾರಕನೆನಿಸಿ ಘನ ತರುವೆ |
ವರಯೋಗಿವರ್ಯನೆ |
ನಿರುತ ವೃಂದಾವನದಿ ರಾಜಿಪ |
ಮೆರೆವ ಮಂಗಲ ಚರಿತ ತವ ಪಾದ |
ಸ್ಮರಣೆ ಸಂತತ ನೀಡು ಮರೆಯದೆ
ಹರುಷದಲಿ ನಿರ್ಜರರ ತರುವೆ [೧]
ಘೋರ ದುರಿತವೆಂಬೋ ವಾರಿಧಿಯೊಳಗೀಸ –
ಲಾರೆನುತ ದಯ ಬಾರದೇನೋ |
ಪೋರನೆನುತಲಿ ತಾತ್ಸಾರ ಮಾಡದೆ ದಡ ಸೇರಿಸೋ |
ಬಿನ್ನಪವ ವಿಚಾರಿಸೋ, ಮನ್ನಿಸಿ ಮಾರ್ಗ ತೋರಿಸೋ |
ಮೀರಿರುವ ಕಡು ಕಾಮಾದಿ ಖಳರ ಬೇರುಗಳನಳಿಸೋ |
ನಿನ್ನೊಳು ನಿರಂತರ ಸೂರಿ ಭಕುತರ ದಾರಿಯೊಳು ನಿಲಿಸೋ |
ಮನ್ಮನದಭೀಷ್ಟೆಯ |
ಭೂರಿ ನಮಿಸುವ ಚಾರು ಕಿಟಜಾ |
ತೀರ ನಿಲಯನೆ ಸಾರಿದವರನು
ಪಾರುಗಾಣಿಪನೆಂದು ಡಂಗುರ |
ಸಾರುತಿದೆ ಯತಿ ವೀರ ಸಲಿಸೋ [೨]
ಏಸೇಸು ಜನುಮದಿ ಕ್ಲೇಶಗಳನುಭವಿಸಿ
ಘಾಸಿಗೊಳಿಸಿ ಮನ ಬೇಸರಾದೆ |
ಹೇಸಿ ವಿಷಯಂಗಳ ಲೇಸು ತಿಳಿಯದೆ ಮರೆ ಮೋಸದಿ |
ದುಷ್ಟರ ಸಹವಾಸದಿ, ಚರಿಸಿದೆ ಮಂದಹಾಸದಿ |
ಸಂತೈಸು ರವಿ ಸಂ-ಕಾಶ ಜನ ವಿದ್ವಾಂಸ ಸಾದರದಿ |
ಕಾಷಾಯ ವಸನ ಭೂಷಿತಾಂಗನೆ ವ್ಯಾಸಮುನಿ ಭರದಿ |
ಗಜರಾಜ ಪುರದಾಧೀಶ ಮುಖರಿಗೆ ತೋಷ ನೀ ಬೆರೆದಿ |
ಈ ಸಮಯ ನುತಿಸುವೆ |
ಆ ಸಮೀರ ಮತಾಭಿ ಚಂದಿರ |
ಶ್ರೀಶ ಗುರು ಇಂದಿರೇಶ ನಂಘ್ರಿಯ |
ದಾಸ ಭವ ಭಯ ರಾಶಿ ತರಿದು |
ಉದಾಸೀನದೇ ಪೋಷಿಸೆಮ್ಮನು [೩]
suMdara guru rAGavEMdrArya-reMteMbO
karmaMdigaLarasane vaMdisuve [pa]
baMda Bakutara aGavRuMda kaLeva
guNasAMdra sannuta mahima
eMdu nA naMbide [a.pa.]
parama karuNi nija caraNa
Bajakara-nuddharisa-lanudina poreveneMdU |
karava mugidu tvara pariyali ninnAlpariyuve |
dainyadi bAy tereyuve | kara piDi eMdu kareyuve |
ninna sari porevaMtha doregaLa kANe madguruve |
ennaMtha pAmara narara kAvudu ninage accariyE |
vijayIMdra karajara varakumArakanenisi Gana taruve |
varayOgivaryane |
niruta vRuMdAvanadi rAjipa |
mereva maMgala carita tava pAda |
smaraNe saMtata nIDu mareyade
haruShadali nirjarara taruve [1]
GOra duritaveMbO vAridhiyoLagIsa –
lArenuta daya bAradEnO |
pOranenutali tAtsAra mADade daDa sErisO |
binnapava vicArisO, mannisi mArga tOrisO |
mIriruva kaDu kAmAdi KaLara bErugaLanaLisO |
ninnoLu niraMtara sUri Bakutara dAriyoLu nilisO |
manmanadaBIShTeya |
BUri namisuva cAru kiTajA |
tIra nilayane sAridavaranu
pArugANipaneMdu DaMgura |
sArutide yati vIra salisO [2]
EsEsu janumadi klESagaLanuBavisi
GAsigoLisi mana bEsarAde |
hEsi viShayaMgaLa lEsu tiLiyade mare mOsadi |
duShTara sahavAsadi, cariside maMdahAsadi |
saMtaisu ravi saM-kASa jana vidvAMsa sAdaradi |
kAShAya vasana BUShitAMgane vyAsamuni Baradi |
gajarAja puradAdhISa muKarige tOSha nI beredi |
I samaya nutisuve |
A samIra matABi caMdira |
SrISa guru iMdirESa naMghriya |
dAsa Bava Baya rASi taridu |
udAsInadE pOShisemmanu [3]
Leave a Reply