Composer : Shri Harapanahalli Bheemavva
ಈತನೆ ಪ್ರಹ್ಲಾದನು ಗುರುರಾಯ
ಈತನೆ ಪ್ರಹ್ಲಾದ ಭೂತಳದೊಳು ಮೆರೆವ
ಉತ್ತಮ ಭಕುತಿಗೆ ಎತ್ತಿ ವರವ ಕೊಡುವ ||ಅ.ಪ||
ನಿತ್ಯ ನಿತ್ಯದಲ್ಲಿ ನಿತ್ಯ ವ್ಯಾಪಕನೆಂದು
ನಿತ್ಯ ಶ್ರೀ ಹರಿಯ ಪ್ರಕಾಶ ತೊರುತಿಹನು ||೧||
ಸಡಗರದಲಿ ಬಂದು ಸುಖ ಶಾಸ್ತ್ರ ಕರ ಪಿಡಿದು
ಪೊಡವಿಯೊಳಗೆ ತಾನೆ ಹರಿನಾಮ ರಸ ಕುಡಿದ ||೨||
ಹಸಿವೆ ತೃಷೆಯಿನ್ದ ವರವೀವ ರಾಘವೇಂದ್ರ
ವಸುಧಿಯೊಳಗೆ ಭೀಮೇಶ ಕೃಷ್ಣನ ದಾಸ ||೩||
eetane prahlAdanu gururAya
eetane prahlAda bhUtaLadoLu mereva
uttama bhakutige etti varava koDuva ||a.pa||
nitya nityadalli nitya vyApakaneMdu
nitya shrI hariya prakAsha torutihanu ||1||
saDagaradali baMdu sukha shAstra kara piDidu
poDaviyoLage tAne harinAma rasa kuDida ||2||
hasive tRuSheyinda varavIva rAghavEMdra
vasudhiyoLage bheemEsha kRuShNana dAsa ||3||
Leave a Reply