Rathavanerida Raghavendra – Satata margadi

Composer : Shri Gopala dasaru

By Smt.Shubhalakshmi Rao

ರಥವನೇರಿದ ರಾಘವೇಂದ್ರ ಸದ್ಗುಣಸಾಂದ್ರ
ಸತತ ಮಾರ್ಗದಿ ಸಂತತ ಸೇವಿಪರಿಗೆ
ಅತಿ ಹಿತದಲಿ ಮನೋರಥವ ನೀಡುವೆನೆಂದು ||

ಚತುರ ದಿಕ್ಕು ವಿದಿಕ್ಕುಗಳಲ್ಲಿ ಚರಿಪ ಜನರಲ್ಲಿ
ಮಿತಿಯಿಲ್ಲದೆ ಬಂದೋಲೈಸುತಲಿ ವರವ ಬೇಡುತಲಿ
ನುತಿಸುತ ಪರಿಪರಿ ನತರಾಗಿಹರಿಗೆ
ಗತಿ ಪೇಳದೆ ಸರ್ವಥಾ ನಾ ಬಿಡೆನೆಂದು ||೧||

ಅತುಲ ಮಹಿಮನ ದಿನದಲ್ಲಿ ದಿತಿಜ ವಂಶದಲಿ
ಉತಪತ್ತಿಯಾಗಿ ಉಚಿತದಲಿ ಉತ್ತಮ ರೀತಿಯಲ್ಲಿ
ಅತಿಶಯವಿರುತಿರೆ ಪಿತನ ಬಾಧೆಗೆ ಮನ್-
ಮಥ ಪಿತನೊಲಿಸಿದೆ ಜಿತಕರಣದಲಿ ||೨||

ಪ್ರಥಮ ಪ್ರಹ್ಲಾದ ವ್ಯಾಸಮುನಿಯೆ
ಯತಿ ರಾಘವೇಂದ್ರ(೨)
ಗುರು ರಾಘ್ವೇಂದ್ರ ಯತಿ ರಾಘವೇಂದ್ರ
ಪಥಿತೋದ್ಧಾರಿಯೆ ಪಾವನ ಕರಿಯೇ
ಕರಮುಗಿವೆನು ದೊರೆಯೇ
ಕ್ಷಿತಿಯೊಳು ಗೋಪಾಲವಿಠಲನ ಸ್ಮರಿಸುತ
ಪ್ರತಿ ಮಂತ್ರಾಲಯದೊಳು ಅತಿ ಮೆರೆವೆ ||೩||


rathavanErida rAghavEMdra sadguNasAMdra
satata mArgadi saMtata sEviparige
ati hitadali manOrathava nIDuveneMdu ||

chatura dikku vidikkugaLalli caripa janaralli
mitiyillade baMdOlaisutali varava bEDutali
nutisuta paripari natarAgiharige
gati pELade sarvathA nA biDeneMdu ||1||

atula mahimana dinadalli ditija vaMshadali
utapattiyAgi uchitadali uttama reetiyalli
atishayavirutire pitana bAdhege man-
matha pitanoliside jitakaraNadali ||2||

prathama prahlAda vyAsamuniye
yati rAghavEMdra(2)
guru rAghvEMdra yati rAghavEMdra
pathitOddhAriye paavana kariyE
karamugivenu doreyE
kShitiyoLu gOpAlaviThalana smarisuta
prati maMtrAlayadoLu ati mereve ||3||

Leave a Reply

Your email address will not be published. Required fields are marked *

You might also like

error: Content is protected !!