Composer : Shri Prasanna Srinivasa dasaru
ಪಾಹಿ ಶ್ರೀ ನರಸಿಂಹ ಪ್ರಿಯ –
ಶನೈಶ್ಚರನೆ ನಮೋ ಸಂತತ |
ಪಾಹಿ ನಮೋ ಗ್ರಹರಾಜಶೌರಿ –
ಮಹೇಶ್ವರನೇ ಕೃಪಾಕರ || ಪ ||
ಪೃಥ್ವೀ ತತ್ತ್ವಾಭಿಮಾನಿಯೇ ನಮೋ –
ಕರ್ಮಪನು ಎಂಬ ಪುಷ್ಕರನು |
ಮತ್ತು ಅಜಾನಜರು ಋಷಿ –
ಗಂಧರ್ವ ಮಹಾ ಸಮುದಾಯಕೆ ||
ಮೇದಿನಿ ರಾಜರು ಮನುಷ್ಯರೂ –
ಸರ್ವರಿಗೂ ಗುರು ಈಶ್ವರ |
ನೀ ದಯದಿ ಹರಿದಾಸರನ್ನ –
ಸಲಹುತಿಯೋ ಶರಣೆಂಬೆ || ೧ ||
ಸೂರ್ಯ ಛಾಯಾ ಸೂನು –
ಕಾಲ ರೂಪಿ ಮಹಾ ಗ್ರಹ ನಮೋ |
ಕಾಯೋ ಜಟಿಲನೇ ವಜ್ರ ರೋಮನೆ –
ದಾನವರಿಗೆ ಭಯಂಕರ ||
ತ್ರಯಂಬಕ ನಾರದರಿಗುಪದೇಶ –
ಕೊಂಡಾಡಿದ ನಿನ್ನನ್ನು |
ಖ್ಯಾತ ರಘುವಂಶೋತ್ಥ ಅತಿ | ವಿ |
ಖ್ಯಾತ ದಶರಥ ಕೀರ್ತಿತ || ೨ ||
ಜ್ಞಾನ ಚಕ್ಷುರ್ನಮಸ್ತೇಸ್ತು –
ಕಶ್ಯಪಾತ್ಮಜ ಸೂನವೇ |
ತುಷ್ಟೋದದಾಸಿ ವೈರಾಜ್ಯ೦ –
ರುಷ್ಟೋ ಹರಸಿ ತಕ್ಷಣಾತ್ ||
ನಿನ್ನನ್ನು ದಶರಥನು ಸ್ತುತಿಸಿ –
ನಮಿಸೆ ವರಗಳನಿತ್ತು ನೀ |
ಕ್ಷೋಣಿ ಜನ ಸಂರಕ್ಷಣೆಗೆ ಬಗೆ –
ಪಾದ್ಮ ಉಕ್ತದಿ ಅರುಹಿದಿ || ೩ ||
ಗಂಗಾ ಮಹಿಮ ರಕ್ಷೋ ಭುವನ –
ಪ್ರಸ್ಥಾನೋಕ್ತವು ತ್ವತ್ ಕೃತ |
ತುಂಗ ಮಹಿಮ ಶ್ರೀ ಲಕ್ಷ್ಮೀ –
ಭೂಮಾ ನಾರಸಿಂಹನ ಸ್ತೋತ್ರವು ||
ರಾಘವ ಕೃತ ತ್ವತ್ ಕೃತ ಈ –
ನುಡಿಗಳ್ ಪಠಿಸಿ ಕೇಳ್ವರ್ಗೆ |
ಶೋಕನೀಗಿ ಇಷ್ಟ ಲಭಿಸುವುದು –
ನೃಹರಿ ಪ್ರಿಯ ನೀ ಒದುಗುವಿ || ೪ ||
ವರಹುಹಾಸನನ ತಾತ –
ಪ್ರಸನ್ನ ಶ್ರೀನಿವಾಸ ನೃಕೇಸರಿ |
ಘನ್ನ ದಯದಿ ಪ್ರಸನ್ನನಾಗಿ –
ಒಲಿಯೆ ಸಾಧನವಾಗುವ ||
ಜ್ಞಾನ ಭಕ್ತಿ ವೈರಾಗ್ಯ ಸಂಪತ್ –
ಆಯುರಾರೋಗ್ಯ ಇತ್ತು ನೀ |
ಎನ್ನ ತಪ್ಪುಗಳ ಮನ್ನಿಸಿ –
ಎನ್ನ ಪಾಹಿ ಸತತ ಶನೈಶ್ಚರ || ೫ ||
pAhi SrI narasiMha priya –
SanaiScarane namO saMtata |
pAhi namO graharAjaSauri –
mahESvaranE kRupAkara || pa ||
pRuthvI tattvABimAniyE namO –
karmapanu eMba puShkaranu |
mattu ajAnajaru RuShi –
gaMdharva mahA samudAyake ||
mEdini rAjaru manuShyarU –
sarvarigU guru ISvara |
nI dayadi haridAsaranna –
salahutiyO SaraNeMbe || 1 ||
sUrya CAyA sUnu –
kAla rUpi mahA graha namO |
kAyO jaTilanE vajra rOmane –
dAnavarige BayaMkara ||
trayaMbaka nAradarigupadESa –
koMDADida ninnannu |
KyAta raGuvaMSOttha ati | vi |
KyAta daSaratha kIrtita || 2 ||
j~jAna cakShurnamastEstu –
kaSyapAtmaja sUnavE |
tuShTOdadAsi vairAjya0 –
ruShTO harasi takShaNAt ||
ninnannu daSarathanu stutisi –
namise varagaLanittu nI |
kShONi jana saMrakShaNege bage –
pAdma uktadi aruhidi || 3 ||
gaMgA mahima rakShO Buvana –
prasthAnOktavu tvat kRuta |
tuMga mahima SrI lakShmI –
BUmA nArasiMhana stOtravu ||
rAGava kRuta tvat kRuta I –
nuDigaL paThisi kELvarge |
SOkanIgi iShTa laBisuvudu –
nRuhari priya nI oduguvi || 4 ||
varahuhAsanana tAta –
prasanna SrInivAsa nRukEsari |
Ganna dayadi prasannanAgi –
oliye sAdhanavAguva ||
j~jAna Bakti vairAgya saMpat –
AyurArOgya ittu nI |
enna tappugaLa mannisi –
enna pAhi satata SanaiScara || 5 ||
Leave a Reply