Composer : Shri Shrida vittala
ಗೋಪಿ ಕೇಳ್ ನಿನ್ನ ಮಗ ಜಾರ
ಇವ ಚೋರ ಸುಕುಮಾರ || ಪ ||
ಮುದದಿ ಮುಕುಂದ ಸದನಕ ಬಂದಾ,
ದಧಿಯ ಮೀಸಲು ಬೆಣ್ಣೆ ತಿಂದ,
ನಿನ್ನಾ ಕಂದಾ, ಆನಂದಾ [ಅ.ಪ]
ಮಾರನ ಪಿತ ತಾ ಮನೆಯೊಳು ಪೊಕ್ಕ
ಹಿಡಿಯ ಹೋದರೆ ಆವ ಸಿಕ್ಕ,
ನೋಡಿ ನಕ್ಕ ಭಾರಿ ಠಕ್ಕ || ೧ ||
ಹರೆಯದ ಪೋರಿ ಜರದ ಕಣ್ಗೋರಿ,
ಭರದಿಂದ ಸೀರೆಯ ಸೆಳೆದಾ,
ಕರವ ಪಿಡಿದಾ ಮಾನ ಕಳೆದಾ || ೨ ||
ಬಹಳ ದಿನವಾಯ್ತು ಹೇಳುವುದ್ಹ್ಯಾಂಗೆ
ಮಹಿಪಾಲನ ಮನಸ್ಸೊಮ್ಮೆ ಹಾಗೆ,
ಒಮ್ಮೆ ಹೀಗೆ, ಹೇಳುವುದ್ಹ್ಯಾಂಗೆ || ೩ ||
ರಾಧೆಯ ಮನದ ಮೋದ ಮುಕುಂದ
ಶ್ರೀದವಿಠಲನಾಟ ಚೆಂದ,
ನಯನಾನಂದ, ಆನಂದ || ೪ ||
gOpi kEL ninna maga jAra
iva cOra sukumAra || pa ||
mudadi mukuMda sadanaka baMdA,
dadhiya mIsalu beNNe tiMda,
ninnA kaMdA, AnaMdA [a.pa]
mArana pita tA maneyoLu pokka
hiDiya hOdare Ava sikka,
nODi nakka BAri Thakka || 1 ||
hareyada pOri jarada kaNgOri,
BaradiMda sIreya seLedA,
karava piDidA mAna kaLedA || 2 ||
bahaLa dinavAytu hELuvud~hyAMge
mahipAlana manassomme hAge,
omme hIge, hELuvud~hyAMge || 3 ||
rAdheya manada mOda mukuMda
SrIdaviThalanATa ceMda,
nayanAnaMda, AnaMda || 4 ||
Leave a Reply