Composer : Shri Purandara dasaru
ರಾಗ: ತೋಡಿ ಮಿಶ್ರಛಾಪುತಾಳ
ಒಂದೇ ಮನದಲಿ ಭಜಿಸು ವಾಗ್ದೇವಿಯಾ ॥ ಪ ॥
ಇಂದುಮತಿ ಕೊಡುವಳು ಶ್ರೀಹರಿಯ ಧ್ಯಾನದೊಳು ॥ ಅ ಪ ॥
ಹಿಂದೆ ಪ್ರಹ್ಲಾದನು ಕಮಲಜನ ಸತಿಗೆರಗಿ ।
ಬಂದು ಆರಂಭಿಸಲು ಹರಿ ವಿಶ್ವಮಯನೆಂದು ॥
ಬಂದ ವಿಘ್ನವ ಕಳೆದು ಭಾವಶುದ್ಧಿಯನಿತ್ತು ।
ಹೊಂದಿಸಿದಳಾ ಶ್ರೀಹರಿಯ ಚರಣವನು ॥ 1 ॥
ಅಂದು ದಶಮುಖನನುಜನು ವಂದಿಸದೆ ವಾಣಿಯನು ।
ಬಂದು ತಪವನುಗೈಯೆ ಬಹುಕಾಲಕೆ ॥
ಅಂದದಿಂ ಅಜ ಮೆಚ್ಚಿ ವರವಧಿಕ ಬೇಡೆನಲು ।
ಬಂದು ಜಿಹ್ವೆಯಲಿ ನಿದ್ರೆಯನು ಬೇಡಿಸಿದಳು ॥ 2 ॥
ಅರಿತು ಭಜಿಸಲು ಬಿಡದೆ ಅಜನರಸಿಯ ನಿತ್ಯ ।
ಉರುತರವಾದ ವಾಕ್ಬುದ್ಧಿಯನಿತ್ತು ॥
ನಿರುತ ಶ್ರೀಪುರಂದರವಿಠಲನ ಸೇವೆಯೊಳು ।
ಪರತತ್ವದ ಕಥಾಮೃತವನುಣಿಸುವಳು ॥ 3 ॥
SrI puraMdaradAsara kRuti
rAga: tODi miSraCAputALa
oMdE manadali Bajisu vAgdEviyA || pa ||
iMdumati koDuvaLu SrIhariya dhyAnadoLu || a pa ||
hiMde prahlAdanu kamalajana satigeragi |
baMdu AraMBisalu hari viSvamayaneMdu ||
baMda viGnava kaLedu BAvaSuddhiyanittu |
hoMdisidaLA SrIhariya caraNavanu || 1 ||
aMdu daSamuKananujanu vaMdisade vANiyanu |
baMdu tapavanugaiye bahukAlake ||
aMdadiM aja mecci varavadhika bEDenalu |
baMdu jihveyali nidreyanu bEDisidaLu || 2 ||
aritu Bajisalu biDade ajanarasiya nitya |
urutaravAda vAkbuddhiyanittu ||
niruta SrIpuraMdaraviThalana sEveyoLu |
paratatvada kathAmRutavanuNisuvaLu || 3 ||
Leave a Reply