Saraswati Suladi

Composer : Shri Abhinava Pranesha vittala

By Smt.Nandini Sripad , Blore

ಶ್ರೀ ಅಭಿನವ ಪ್ರಾಣೇಶ ವಿಠಲ ದಾಸಾರ್ಯ ಕೃತ
ಶ್ರೀ ಸರಸ್ವತಿದೇವಿಯರ ಸುಳಾದಿ

ರಾಗ: ಸಾರಂಗ

ಧ್ರುವತಾಳ
ಸಿರಿದೇವಿಯರಸನ ಹಿರಿಯ ಸೊಸೆಯೇ ವಾಣಿ |
ಸಿರಿದೇವಿ ಉಳಿದನ್ಯ ನಾರಿ ಶಿರೋಮಣಿ |
ಸರಸಿಜ ಸಂಭವ ಬ್ರಹ್ಮದೇವನ ರಾಣಿ |
ಸ್ಮರಿಪ ಸದ್ಭಕ್ತರ ಸುರಧೇನು ಚಿಂತಾಮಣಿ |
ಶರಣರ ಈಪ್ಸಿತ ಸಲಿಸುವ ಕಲ್ಯಾಣಿ |
ಪರಮ ಸುಂದರ ಶ್ರೇಣಿ ಶುಕವಾಣಿ ಫಣಿವೇಣಿ |

ತಿರೋಹಿತಗತವಾಗದ ವಿಮಲ ಸುಜ್ಞಾನಿ |
ಪರಗತಿ ಸಾಧಕ ಸದ್ವಿದ್ಯಾದಾಯಿನಿ |
ಸರ್ವ ವೇದಾಭಿಮಾನಿ ವೀಣಾಪಾಣಿ |
ಸಿರಿಯರಸ ಅಭಿನವ ಪ್ರಾಣೇಶವಿಠಲನ
ಸ್ಮರಿಪ ಸನ್ಮತಿ ನೀಡು ಸಿರಿ ಶಾರದಾಂಬಾ || ೧ ||

ಮಟ್ಟತಾಳ
ಪುಂಡರೀಕ ನಯನೆ ಪುಂಡರೀಕ ಗಮನೆ |
ಪುಂಡರೀಕ ವಾಣಿ ಪುಂಡರೀಕ ಪಾಣಿ |
ಅಂಡಜ ಶಿಖರಥಳೆ ಅಂಡಜ ಸುತವಹಳೆ |
ಪಂಡರ ಅಭಿನವ ಪ್ರಾಣೇಶವಿಠಲನ |
ಬಂಡುಣಿ ಎನಿಸು ಮದ್ವದನದೊಳು ನೆಲೆಸು || ೨ ||

ತ್ರಿವಿಡಿತಾಳ
ಎರಡನೆ ಯುಗದಲ್ಲಿ ಖರಕ್ರವ್ಯಾದನು |
ಕರಿಕರ್ಣನು ಘೋರ ತಪವಗೈದು |
ಸರಸಿಜ ಸಂಭವನೊಲಿಸಿ ಮೆಚ್ಚಿಸಿ ತಾನು |
ವರವ ಯಾಚಿಪ ಸಮಯದಿ ಅವನ |
ಅರಿಯಾಳು ಮಾಡಿದೆ ಮತಿಭ್ರಂಶಗೈಸಿದೆ |
ನಿರುತ ನಿದ್ರೆಯ ಬೇಡ್ವ ತೆರ ಮಾಡಿದೆ |
ಸುರ ಸಜ್ಜನರಿಗೆಲ್ಲಾ ಹರುಷವ ಬೀರಿದೆ |
ಪರಮ ಸಮರ್ಥಳೆ ಶರಣು ಶರಣು |
ಸುರವಂದ್ಯ ಅಭಿನವ ಪ್ರಾಣೇಶ ವಿಠಲನ |
ಚರಣ ವಾರಿಜ ಭೃಂಗೆ ದೀನ ದಯಾಪಾಂಗೆ || ೩ ||

ಅಟ್ಟತಾಳ
ಧರಿಭಾರ ವಿಳುಹಲು ಶಿರಿಯರಸನು ತಾನು |
ವರ ರಘುರಾಮ ನಾಮದಿ ಧರೆಯೊಳು ಪುಟ್ಟಿ |
ಹರಿ ಪೀಠ ಯುವರಾಜ್ಯವೇರುವ ಸಮಯದಿ |
ಸುರರ ಮೊರೆಯ ಕೇಳಿ ಹರಿ ಇಚ್ಛೆಯರಿತು |
ಮಂಥರಿಗೆ ದುರ್ಮತಿ ಇತ್ತು ಸುರಕಾರ್ಯ ಮಾಡಿದೆ |
ಹರಿ ಸಿರಿ ರಾಮರು ವನವಾಸ ಕೈಕೊಂಡು |
ಖರ ಕ್ರವ್ಯಾದರ ತರಿದು ಪುರಕೆ ಬಂದು |
ಹರಿ ವಿಷ್ಠರೇರಲು ಪರಮಾನಂದವು |
ಸರುವರಿಗಾಗುವ ತೆರ ಮಾಡಿದೆ ತಾಯೇ |
ಕರುಣ ಮಹಾರ್ಣವೇಚಾರಂತೆ ನಮೋ ನಮೋ |
ಕರುಣಾಳು ಅಭಿನವ ಪ್ರಾಣೇಶವಿಠಲನ |
ಚರಣ ದಾಸ್ಯವನಿತ್ತು ಪರಿಪಾಲಿಸಮ್ಮ || ೪ ||

ಆದಿತಾಳ
ಹರಿಸರ್ವೋತ್ತಮನೆಂಬ ಸ್ಥಿರಜ್ಞಾನವಿರಲಮ್ಮ |
ಮರುತ ಜೀವೋತ್ತಮನೆಂಬ ಬುಧ್ಧಿಯಿರಲಮ್ಮ |
ಹರ ತಾರಕ ಗುರುವೆಂಬ ಮತಿಯಿರಲಮ್ಮ |
ಗುರು ಮಧ್ವಮತದಲ್ಲಿ ಧೃಢ ಭಕ್ತಿಯಿರಲಮ್ಮ |
ಸಿರಿಯರಸ ಅಭಿನವ ಪ್ರಾಣೇಶವಿಠಲನ |
ಹಿರಿಯ ಸೊಸೆಯೇ ನಿನ್ನ ಕರುಣವಿರಲಮ್ಮ || ೫ ||

ಜತೆ
ವೇದಗಮ್ಯ ಅಭಿನವ ಪ್ರಾಣೇಶವಿಠಲನ |
ಪಾದ ಧ್ಯಾನವನಿತ್ತು ಮೋದ ಕೊಡು ನಿತ್ಯ || ೬ ||


SrI aBinava prANESa viThala dAsArya kRuta
SrI sarasvatidEviyara suLAdi

rAga: sAraMga

dhruvatALa
siridEviyarasana hiriya soseyE vANi |
siridEvi uLidanya nAri SirOmaNi |
sarasija saMBava brahmadEvana rANi |
smaripa sadBaktara suradhEnu ciMtAmaNi |
SaraNara Ipsita salisuva kalyANi |
parama suMdara SrENi SukavANi PaNivENi |

tirOhitagatavAgada vimala suj~jAni |
paragati sAdhaka sadvidyAdAyini |
sarva vEdABimAni vINApANi |
siriyarasa aBinava prANESaviThalana
smaripa sanmati nIDu siri SAradAMbA || 1 ||

maTTatALa
puMDarIka nayane puMDarIka gamane |
puMDarIka vANi puMDarIka pANi |
aMDaja SiKarathaLe aMDaja sutavahaLe |
paMDara aBinava prANESaviThalana |
baMDuNi enisu madvadanadoLu nelesu || 2 ||

triviDitALa
eraDane yugadalli KarakravyAdanu |
karikarNanu GOra tapavagaidu |
sarasija saMBavanolisi meccisi tAnu |
varava yAcipa samayadi avana |
ariyALu mADide matiBraMSagaiside |
niruta nidreya bEDva tera mADide |
sura sajjanarigellA haruShava bIride |
parama samarthaLe SaraNu SaraNu |
suravaMdya aBinava prANESa viThalana |
caraNa vArija BRuMge dIna dayApAMge || 3 ||

aTTatALa
dhariBAra viLuhalu Siriyarasanu tAnu |
vara raGurAma nAmadi dhareyoLu puTTi |
hari pITha yuvarAjyavEruva samayadi |
surara moreya kELi hari icCeyaritu |
maMtharige durmati ittu surakArya mADide |
hari siri rAmaru vanavAsa kaikoMDu |
Kara kravyAdara taridu purake baMdu |
hari viShTharEralu paramAnaMdavu |
saruvarigAguva tera mADide tAyE |
karuNa mahArNavEcAraMte namO namO |
karuNALu aBinava prANESaviThalana |
caraNa dAsyavanittu paripAlisamma || 4 ||

AditALa
harisarvOttamaneMba sthiraj~jAnaviralamma |
maruta jIvOttamaneMba budhdhiyiralamma |
hara tAraka guruveMba matiyiralamma |
guru madhvamatadalli dhRuDha Baktiyiralamma |
siriyarasa aBinava prANESaviThalana |
hiriya soseyE ninna karuNaviralamma || 5 ||

jate
vEdagamya aBinava prANESaviThalana |
pAda dhyAnavanittu mOda koDu nitya || 6 ||

Leave a Reply

Your email address will not be published. Required fields are marked *

You might also like

error: Content is protected !!