Palisamma Muddu Sharade

Composer : Shri Purandara dasaru

By Smt.Shubhalakshmi Rao

ಪಾಲಿಸಮ್ಮ ಮುದ್ದು ಶಾರದೆ |
ಎನ್ನ ನಾಲಿಗೆ ಮೇಲೆ ನಿಲ್ಲ ಬಾರದೆ ||
ಲೋಲಲೋಚನೆ ತಾಯಿ ನಿರುತ ನಂಬಿದೆ ನಿನ್ನ ||ಅ.ಪ||

ಅಕ್ಷರಕ್ಷರ ವಿವೇಕವ |
ನಿನ್ನ ಕುಕ್ಷಿಯೊಳೀರೇಳು ಲೋಕವ ||
ಸಾಕ್ಷತ್ ರೂಪದಿಂದ ಒಲಿದು ರಕ್ಷಿಸು ತಾಯೇ ||೧||

ಶೃಂಗಾರಪುರ ನೆಲೆ ವಾಸಿನೀ ದೇವೀ |
ಸಂಗೀತ ಗಾನ ವಿಲಾಸಿನಿ ||
ಮಂಗಳೆ ಗಾತ್ರಳೆ ಭಳಿರೆ ಬ್ರಹ್ಮನ ರಾಣಿ ||೨||

ಸರ್ವಾಲಂಕಾರ ದಯಾ ಮೂರುತಿ ನಿನ್ನ
ಚರಣವ ಸ್ತುತಿಸುವೆ ಕೀರುತಿ |
ಗುರುಮೂರ್ತಿ ಪುರಂದರವಿಠಲನ್ನ ಸ್ತುತಿಸುವೆ ||೩||


pAlisamma muddu SArade |
enna nAlige mEle nilla bArade ||
lOlalOcane tAyi niruta naMbide ninna ||a.pa||

akSharakShara vivEkava |
ninna kukShiyoLIrELu lOkava ||
sAkShat rUpadiMda olidu rakShisu tAyE ||1||

SRuMgArapura nele vAsinI dEvI |
saMgIta gAna vilAsini ||
maMgaLe gAtraLe BaLire brahmana rANi ||2||

sarvAlaMkAra dayA mUruti ninna
caraNava stutisuve kIruti |
gurumUrti puraMdaraviThalanna stutisuve ||3||

Leave a Reply

Your email address will not be published. Required fields are marked *

You might also like

error: Content is protected !!