Composer : Shri Purandara dasaru
ಹುಚ್ಚು ಹಿಡಿಯಿತೊ – ಎನಗೆ ಹುಚ್ಚು ಹಿಡಿಯಿತೊ [ಪ]
ಅಚ್ಯುತನ ನಾಮವೆಂಬ ಮೆಚ್ಚು ಮದ್ದು ತಲೆಗೆ ಏರಿ [ಅ.ಪ]
ವಾಸುದೇವನೆಂಬ ನಾಮ ವದನದಲ್ಲಿ ಒದರುವೆ – ಮಾಯ
ಪಾಶವೆಂಬ ಬಲೆಯ ಹರಿದು ಹರಿದು ಬಿಸುಡುವೆ ||
ಕೇಶವನ ಹೂವ ಎನ್ನ ಮುಡಿಗೆ ಮುಡಿಸುವೆ – ಭವದ
ಕ್ಲೇಶವೆಂಬ ಗೋಡೆಯನ್ನು ಕೆದರಿಕೆದರಿ ಬಿಸುಡುವಂಥ [೧]
ಕೃಷ್ಣನಂಘ್ರಿ ಕಮಲಗಳಲಿ ನಲಿದು ನಲಿದು ಬೀಳುವೆ – ಭವ
ಕಷ್ಟವೆಂಬ ಕುಂಭಗಳನು ಒಡೆದು ಒಡೆದು ಹಾಕುವೆ ||
ನಿಷ್ಠರನ್ನು ಕಂಡರವರ ಹಿಂದೆ ಹಿಂದೆ ತಿರುಗುವೆ
ಭ್ರಷ್ಟ ಮನುಜರನ್ನು ಕಂಡು ಕಲ್ಲು ಕಲ್ಲಿಲಿಕ್ಕುವಂಥ [೨]
ಮಂದಮತಿಗಳನು ಕಂಡರೆ ಮೂಕನಾಗುವೆ – ಹರಿಯ
ನಿಂದೆ ಮಡುವವರ ಮೇಲೆ ಮಣ್ಣ ಚೆಲ್ಲುವೆ ||
ಮಂದರಾದ್ರಿಧರನ ದಿನದೊಳನಶನನಾಗುವೆ
ಎನ್ನತಂದೆ ಪುರಂದರವಿಠಲನ ಪೊಗಳಿ ಪಾಡಿ ಆಡುವಂಥ [೩]
huccu hiDiyito – enage huccu hiDiyito [pa]
acyutana nAmaveMba meccu maddu talege Eri [a.pa]
vAsudEvaneMba nAma vadanadalli odaruve – mAya
pASaveMba baleya haridu haridu bisuDuve ||
kESavana hUva enna muDige muDisuve – Bavada
klESaveMba gODeyannu kedarikedari bisuDuvaMtha [1]
kRuShNanaMGri kamalagaLali nalidu nalidu bILuve – Bava
kaShTaveMba kuMBagaLanu oDedu oDedu hAkuve ||
niShTharannu kaMDaravara hiMde hiMde tiruguve
BraShTa manujarannu kaMDu kallu kallilikkuvaMtha [2]
maMdamatigaLanu kaMDare mUkanAguve – hariya
niMde maDuvavara mEle maNNa celluve ||
maMdarAdridharana dinadoLanaSananAguve
ennataMde puraMdaraviThalana pogaLi pADi ADuvaMtha [3]
Leave a Reply