Satya sankalpa svatantra

Composer : Shri Vyasa vittala

By Smt.Shubhalakshmi Rao

ಸತ್ಯ ಸಂಕಲ್ಪ ಸ್ವತಂತ್ರ ಸರ್ವೇಶ
ಸರ್ವೋತ್ತಮನೆ ಸಾರ್ವಭೌಮಾ [ಪ]

ಭೃತ್ಯರಿಗೆ ಬಂದ ಪರಿಪರಿ ಭಯಗಳನೆ ಕಳೆದು
ನಿತ್ಯದಲಿ ಕಾಯ್ವ ಸ್ವಾಮೀ ಪ್ರೇಮೀ [ಅ.ಪ.]

ಆವ ಜನುಮದ ಫಲವೊ | ಆವ ಕ್ರಿಯೆಗಳಿಂದ
ಆವ ಸಾಧನದ ಬಗೆಯೋ ||
ಆವುದಿಂದಾವುದಕೆ ಘಟನೆಯನು ಮಾಡಿಸುವಿ
ಆವುದು ನಿನ್ನಾಟವೋ ||
ಆವ ಪರಿಯಿಂದಲ್ಲಿ ಜೀವಿಗಳ ಸಲಹುವಿಯೊ
ಆವ ನಿನ್ನಾಧೀನವೋ | ದೇವ ದೇವೇಶ ನಿನ್ನ |
ಭಾವ ಬಲ್ಲವರಾರೊ ಭಾವಜನ ಪಿತ ಕೃಪಾಳೊ | ಕೇಳೋ [೧]

ತ್ರಿಪದ ತೈಜಸ ಪ್ರಾಜ್ಞ ವಿಶ್ವರೂಪಗಳಿಂದ
ಸ್ವಪ್ನ ಕಾಲದಲಿ ನೀನೂ ||
ಸುಪರ್ವಾಣ ದೈತ್ಯರನು ಸೃಜಿಸಿ ಮನೆಯನು ಮಾಡಿ
ಅಪರಿಮಿತ ಕಾರ್ಯಗಳನೂ |
ಸುಫಲ ದುಷ್ಕರ್ಮಗಳ ತೋರಿಸೀ ಜೀವಕ್ಕೆ
ಕ್ಷುಪುತವಾಗಿದ್ದವೆಲ್ಲಾ | ಕೃಪೆಯಿಂದ ತೋರಿ
ಬಂದಾಪತ್ತುಗಳ ಕಳೆವ ಅಪರಿಮಿತ
ಕೃಪಾ ಸಾಗರಾ | ಶೂರಾ [೨]

ಎನ್ನಂಥ ಪಾಪಿಷ್ಠರಿನ್ನಿಲ್ಲ ಧರೆಯೊಳಗೆ
ನಿನ್ನಂಥ ಕರುಣಿಯಿಲ್ಲಾ ||
ಘನ್ನ ಸಂಸಾರದಲಿ ಬವಣೆ
ಬಂದಟ್ಟಿದರು ನಿನ್ನ ಸ್ಮೃತಿಯೊಂದೆ ಇರಲೀ |
ಚೆನ್ನಗುರು ವಿಜಯರಾಯರ
ಪೊಂದಿದವನೆಂದು ಮನ್ನಿಸಿ ಸಲಹಬೇಕೋ |
ಸನ್ನುತಾಂಗಿಯ ರಮಣ
ವ್ಯಾಸವಿಠ್ಠಲ ಮಧ್ವಮುನಿಗೊಲಿದ
ಉಡುಪಿವಾಸಾ | ಶ್ರೀಶಾ [೩]


satya saMkalpa svataMtra sarvESa
sarvOttamane sArvaBaumA [pa]

BRutyarige baMda paripari BayagaLane kaLedu
nityadali kAyva svAmI prEmI [a.pa.]

Ava janumada Palavo | Ava kriyegaLiMda
Ava sAdhanada bageyO ||
AvudiMdAvudake GaTaneyanu mADisuvi
Avudu ninnATavO ||
Ava pariyiMdalli jIvigaLa salahuviyo
Ava ninnAdhInavO | dEva dEvESa ninna |
BAva ballavarAro BAvajana pita kRupALo | kELO [1]

tripada taijasa prAj~ja viSvarUpagaLiMda
svapna kAladali nInU ||
suparvANa daityaranu sRujisi maneyanu mADi
aparimita kAryagaLanU |
suPala duShkarmagaLa tOrisI jIvakke
kShuputavAgiddavellA | kRupeyiMda tOri
baMdApattugaLa kaLeva aparimita
kRupA sAgarA | SUrA [2]

ennaMtha pApiShTharinnilla dhareyoLage
ninnaMtha karuNiyillA ||
Ganna saMsAradali bavaNe
baMdaTTidaru ninna smRutiyoMde iralI |
cennaguru vijayarAyara
poMdidavaneMdu mannisi salahabEkO |
sannutAMgiya ramaNa
vyAsaviThThala madhvamunigolida
uDupivAsA | SrISA [3]

Leave a Reply

Your email address will not be published. Required fields are marked *

You might also like

error: Content is protected !!