Neenyako ninna hangyako

Composer : Shri Purandara dasaru

By Smt.Shubhalakshmi Rao

ಹರಿ ನಿನ್ನ ಸ್ಮರಣೆಯ ಸ್ಮರಿಸಲು
ದುರಿತ ಪೀಡಿಪುದುಂಟೆ
ಅರಿತು ಭಜಿಪರಿಗೆಲ್ಲ ಕೈವಲ್ಯಜೋಕೆ
ಕರುಣವರಿತು ತನ್ನ ಮಗನ ಕೂಗಿದವಗೆ
ಮರಣಕಾಲದಿ ಒದಗಿದೆ ಶ್ರೀಪುರಂದರವಿಠಲ ||

ನೀನ್ಯಾಕೊ ನಿನ್ನ ಹಂಗ್ಯಾಕೋ , ನಿನ್ನ
ನಾಮದ ಬಲವೊಂದಿದ್ದರೆ ಸಾಕೋ [ಪ]

ಮಕರಿಗೆ ಸಿಕ್ಕಿ ಮೊರೆಯಿಡುತಿರುವಾಗ
ಆದಿ ಮೂಲ ಎಂಬ ನಾಮವೆ ಕಾಯ್ತೋ
ಪ್ರಹ್ಲಾದನ ಪಿತ ಬಾಧಿಸುತಿರುವಾಗ
ನರಹರಿಯೆಂಬ ನಾಮವೆ ಕಾಯ್ತೋ (೧)

ಬಾಲೆಯ ಸಭೆಯಲಿ ಸೀರೆಯ ಸೆಳೆವಾಗ
ಕೃಷ್ಣ ಕೃಷ್ಣ ಎಂಬ ನಾಮವೆ ಕಾಯ್ತೋ
ಯಮನ ದೂತರು ಬಂದು ಅಜಾಮಿಳನೆಳೆವಾಗ
ನಾರಾಯಣ ಎಂಬ ನಾಮವೆ ಕಾಯ್ತೋ (೨)

ಆ ಮರ ಈ ಮರ ಧ್ಯಾನಿಸುತಿರುವಾಗ
ರಾಮ ರಾಮ ಎಂಬ ನಾಮವೆ ಕಾಯ್ತೋ
ಹಸುಳೆ ಆ ಧ್ರುವರಾಯ ಅಡವಿಗೆ ಪೋಪಾಗ
ವಾಸುದೇವನೆಂಬ ನಾಮವೆ ಕಾಯ್ತೋ (೩)

ನಿನ್ನ ನಾಮಕೆ ಸರಿಗಾಣೆನು ಜಗದೊಳು
ಘನ್ನ ಮಹಿಮ ಸಿರಿ ಪುರಂದರ ವಿಠಲ (೪)


hari ninna smaraNeya smarisalu
durita pIDipuduMTe
aritu Bajiparigella kaivalyajOke
karuNavaritu tanna magana kUgidavage
maraNakAladi odagide SrIpuraMdaraviThala ||

nInyAko ninna haMgyAkO , ninna
nAmada balavoMdiddare sAkO [pa]

makarige sikki moreyiDutiruvAga
Adi mUla eMba nAmave kAytO
prahlAdana pita bAdhisutiruvAga
narahariyeMba nAmave kAytO (1)

bAleya saBeyali sIreya seLevAga
kRuShNa kRuShNa eMba nAmave kAytO
yamana dUtaru baMdu ajAmiLaneLevAga
nArAyaNa eMba nAmave kAytO (2)

A mara I mara dhyAnisutiruvAga
rAma rAma eMba nAmave kAytO
hasuLe A dhruvarAya aDavige pOpAga
vAsudEvaneMba nAmave kAytO (3)

ninna nAmake sarigANenu jagadoLu
Ganna mahima siri puraMdara viThala (4)

Leave a Reply

Your email address will not be published. Required fields are marked *

You might also like

error: Content is protected !!