Ninagyaru sariyilla

Composer : Shri Purandara dasaru

By Smt.Shubhalakshmi Rao

ಅಪಾಯ ಕೋಟಿ ಕೋಟಿಗಳಿಗೆ ಉಪಾಯ ಒಂದೇ
ಹರಿ ಭಕ್ತರಿಗೆ ತೋರಿಕೊಟ್ಟ ಉಪಾಯ ಒಂದೇ
ಪುರಂದರ ವಿಠಲನೆಂದು ಭೋವಿಟ್ಟು
ಕರೆವ ಉಪಾಯವೊಂದೇ ||

ನಿನಗ್ಯಾರು ಸರಿಯಿಲ್ಲ ಎನಗನ್ಯ ಗತಿಯಿಲ್ಲ
ನಿನಗೂ ಎನಗೂ ನ್ಯಾಯ ಹೇಳುವರಿಲ್ಲೋ |ಪ|

ಒಂದೇ ಗೂಡಿನೊಳಗಿದ್ದು ಒಂದು ಕ್ಷಣವಗಲದೆ
ಎಂದೆಂದೂ ನಿನ್ನನು ಪೊಂದಿರುವೆ
ಬಂಧ ವಿಷಯಗಳಿಗೆನ್ನನೊಪ್ಪಿಸುವುದು
ಇಂದು ನಿನಗೆ ಇದು ಉಚಿತಲ್ಲವೊ ದೇವ |೧|

ಪರಸತಿಗಳುಕಲು ಪರಮಪಾಪಿಷ್ಠನೆಂದು
ಪರಿಪರಿ ನರಕಕ್ಕೆ ಸೇರಿಸುವೆ
ಪರಸತಿಯೊಲುಮೆ ನಿನಗೆ ಒಪ್ಪಿತೊ ದೇವ
ದೊರೆತನಕಂಜಿ ನಾ ಶರಣೆಂಬೆನಲ್ಲದೆ |೨|

ನಿನ್ನ ಧ್ಯಾನವನು ನಾ ನಿನ್ನ ಪ್ರೇರಣೆಯಿಂದ
ಅನಂತಕರ್ಮವ ನಾ ಮಾಡಿದೆ
ಇನ್ನಾದರು ಎನ್ನ ದಯದಿಂದ ನೋಡಯ್ಯ
ಪನ್ನಗಶಯನನೆ ಪುರಂದರವಿಠಲ ಕೃಷ್ಣ |೩|


apAya kOTi kOTigaLige upAya oMdE
hari Baktarige tOrikoTTa upAya oMdE
puraMdara viThalaneMdu BOviTTu
kareva upAyavoMdE ||

ninagyAru sariyilla enaganya gatiyilla
ninagU enagU nyAya hELuvarillO |pa|

oMdE gUDinoLagiddu oMdu kShaNavagalade
eMdeMdU ninnanu poMdiruve
baMdha viShayagaLigennanoppisuvudu
iMdu ninage idu ucitallavo dEva |1|

parasatigaLukalu paramapApiShThaneMdu
paripari narakakke sErisuve
parasatiyolume ninage oppito dEva
doretanakaMji nA SaraNeMbenallade |2|

ninna dhyAnavanu nA ninna prEraNeyiMda
anaMtakarmava nA mADide
innAdaru enna dayadiMda nODayya
pannagaSayanane puraMdaraviThala kRuShNa |3|

Leave a Reply

Your email address will not be published. Required fields are marked *

You might also like

error: Content is protected !!