Eddu ninta bage

Composer : Shri Varadagopala vittala

By Smt.Shubhalakshmi Rao

Shri Varadendra Tirtharu : 1761-1785
vaadE vijayasheelaaya varadaaya varaarthinaaM|
vadaanyajanasiMhaaya varadEMdraaya tE nama:|
ವಾದೇ ವಿಜಯಶೀಲಾಯ ವರದಾಯ ವರಾರ್ಥಿನಾಂ|
ವದಾನ್ಯಜನಸಿಂಹಾಯ ವರದೇಂದ್ರಾಯ ತೇ ನಮ:|
Ashrama Gurugalu – Vasudendra Theertharu
Ashrama Shishyaru – Sri Bhuvanendra Theertharu
Vrundavana – Poona
Aradhana – Ashada Shukla Shashti


ಎದ್ದು ನಿಂತ ಬಗೆಯೇನೊ
ಮೂಲರಾಮ ಪೇಳು |
ಬುಧ ವರದೇಂದ್ರ ಯತಿ
ಮನ ಕುಮುದ ಸೋಮ || ಪ ||

ಸೀತೆಯನ್ನು ನೆನಿಸಿ ಶೀಘ್ರದಿ ತಾಹೆನೆಂದೆದ್ದೆಯೊ |
ಪಾಥೋದಿಪಥ ಕೊಡದ ಕಾತುರದಲಿಂದೆದ್ದೆಯೊ |
ಯಾತುಧಾನರ ಬಾಲವ ಘಾತಿಸುವೆನೆಂದೆದ್ದೆಯೊ ||
ಶೀತಾಂಶು ವದನ ಶುಭ ರದನ ತಿಳಿಸು |
ಪ್ರೀತಿಯಲಿ ವರದೇಂದ್ರ ಯತಿ ಮನೋಧಾಮ || ೧ ||

ಭಕುತರಿಗೆ ಭಯ ಬಾರಗೊಡನೆಂದು ನಿಂತೆಯೊ |
ಭಕುತಿಯಲಿ ಭಜಕರಿಗೆ ಧೇನಿಸಲು ನಿಂತೆಯೊ |
ಸಕಲೇಷ್ಟಪ್ರದ ಮಹಾ ಪ್ರಭುಯೆಂದು ನಿಂತೆಯೊ ||
ಮುಕುತೇಶ ಮೂಲರಘುರಾಮ ಯತಿಯು |
ಭಕುತಿಯಲಿ ಭಜಿಸೆ ನಿಂತೆಯೊ ಪೂರ್ಣಕಾಮ || ೨ ||

ಶರಚಾಪ ಧರಿಸಿ ದಶಶಿರನ ತರಿಯಲಿ ನಿಂತೆಯೊ |
ಪರಿಪರಿಯಲಿ ಭಕುತರನ ಪಾಲಿಸಲಿ ನಿಂತೆಯೊ |
ಶರಣ ಜನರುಗಳು ಕರೆದರೆಂದೆನುತ ನಿಂತೆಯೊ ||
ವರದ ಗೋಪಾಲವಿಠ್ಠಲಾ ವರದೇಂದ್ರ |
ವರದರೀ ಪ್ರಾಕೃತ ಭಯ ಪರಿಹರಿಪ || ೩ ||


eddu niMta bageyEno
mUlarAma pELu |
budha varadEMdra yati
mana kumuda sOma || pa ||

sIteyannu nenisi SIGradi tAheneMdeddeyo |
pAthOdipatha koDada kAturadaliMdeddeyo |
yAtudhAnara bAlava GAtisuveneMdeddeyo ||
SItAMSu vadana SuBa radana tiLisu |
prItiyali varadEMdra yati manOdhAma || 1 ||

Bakutarige Baya bAragoDaneMdu niMteyo |
Bakutiyali Bajakarige dhEnisalu niMteyo |
sakalEShTaprada mahA praBuyeMdu niMteyo ||
mukutESa mUlaraGurAma yatiyu |
Bakutiyali Bajise niMteyo pUrNakAma || 2 ||

SaracApa dharisi daSaSirana tariyali niMteyo |
paripariyali Bakutarana pAlisali niMteyo |
SaraNa janarugaLu karedareMdenuta niMteyo ||
varada gOpAlaviThThalA varadEMdra |
varadarI prAkRuta Baya pariharipa || 3 ||

Leave a Reply

You might also like

error: Content is protected !!