Sevakanelo Nanu

Composer : Shri Vadirajaru

By Smt.Nandini Sripad

ರಾಗ: ಮಧ್ಯಮಾವತಿ, ಖಂಡಛಾಪುತಾಳ

ಸೇವಕನೆಲೊ ನಾನು ನಿನ್ನಯ ಪಾದ
ಸೇವೆ ನೀಡೆಲೊ ನೀನು ॥ ಪ ॥
ಸೇವಕನೆಲೊ ನಾನು ಸೇವೆ ನೀಡೆಲೊ ನೀನು
ಕಾವುದೆಮ್ಮನು ಶ್ರೀರಘೂವರ ರಾವಣಾಂತಕ ರಕ್ಷಿಸೆನ್ನನು ॥
ಗೋವರ್ಧನಧರ ದೇವ ಗೋವುಗಳ ಕಾವ ಶ್ರೀಮಹಾನು –
ಭಾವ ವರಗಳನೀವ ದೇವ
ಶ್ರೀ ವಲ್ಲಭ ದಯಮಾಡು ಎನ್ನೊಳು
ಈ ವೇಳೆಗೆ ಇಂದಿರೆರಮಣ ॥ ಅ.ಪ ॥

ರಾಮ ದಶರಥನಂದನ ರಘುಕುಲಾಂಬುಧಿ
ಸೋಮ ಸುಂದರವದನ ।
ವಾಮನ ಪರಿಪೂರ್ಣಕಾಮ ಕೌಸಲ್ಯರಾಮ ।
ಸ್ವಾಮಿ ಶ್ರೀರಂಗಧಾಮ ದೈತ್ಯವಿರಾಮ ಶ್ರೀಮದನಂತನಾಮ ॥
ಭೀಮಮುನಿಜನಸ್ತೋಮ ರಮ್ಯ ಗುಣ
ಧಾಮ ರಣರಂಗಭೀಮ
ಕೋಮಲ ಶ್ಯಾಮ , ಹೇ –
ಸಾಮಜವರದನೇ ನೀನು ಅನುದಿನ
ಕಾಮಿತಫಲಗಳ ಕರುಣಿಸಿ ಕಾಯೋ ॥ 1 ॥

ಶಂಕರಾಸುರಸೇವಿತ ಶೇಷಗರುಡಾ –
ಲಂಕಾರ ಮುನಿಶೋಭಿತ ।
ಪಂಕಜನಯನ ಮೀನಾಂಕಜನಕ ಪಾದ –
ಪಂಕಜಾಸನ ವಿನುತ ತಿರುಪತಿ ವೆಂಕಟ ಬಿರುದಾಂಕ ಜಯ ಜಯ ॥
ಶಂಖಚಕ್ರಗದೆ ಪಂಕಜಧರ ಅಕ –
ಳಂಕ ಚರಿತ ಸುಟಂಕಗೊಲಿದ ನಿಶ್ಶಂಕ
ಲಂಕಾಧಿಪರಿಪು ರಘುಪತಿ ನಿನ್ನ
ಕಿಂಕರರಿಗೆ ಕಿಂಕರನು ನಾನು ॥ 2 ॥

ಮಂದರೋದ್ಧರ ಮಾಧವ ಮಧುಸೂದನ
ನಂದ ಸುಂದರವಿಗ್ರಹ ।
ಬಿಂದುಮಾಧವ ಶ್ರೀಮುಕುಂದ ಶ್ರೀಮದಾನಂದ
ವಂದಿತಾಮರವೃಂದ ವೇದವ ತಂದ ತುರಗವನೇರಿ ಬಂದ ॥
ವೃಂದಾವನದೊಳಗಿಂದ ಯಶೋದೆಯ ಕಂದ ಹರಿ ಗೋ –
ವಿಂದ ಶೇಷಗಿರಿಯಲಿ ನಿಂದ
ಮಂದಾಕಿನಿ ಪಡೆದನೇ ಧ್ರುವಗೊಲಿ –
ದಂದದಿ ಎನಗೊಲಿ ಹಯವದನ ॥ 3 ॥


SrI vAdirAjara kRuti
rAga: madhyamAvati, KaMDaCAputALa

sEvakanelo nAnu ninnaya pAda
sEve nIDelo nInu || pa ||

sEvakanelo nAnu sEve nIDelo nInu
kAvudemmanu SrIraGUvara rAvaNAMtaka rakShisennanu ||
gOvardhanadhara dEva gOvugaLa kAva SrImahAnu –
BAva varagaLanIva dEva
SrI vallaBa dayamADu ennoLu
I vELege iMdireramaNa || a.pa ||

rAma daSarathanaMdana raGukulAMbudhi
sOma suMdaravadana |
vAmana paripUrNakAma kausalyarAma |
svAmi SrIraMgadhAma daityavirAma SrImadanaMtanAma ||
BImamunijanastOma ramya guNa
dhAma raNaraMgaBIma
kOmala SyAma , hE –
sAmajavaradanE nInu anudina
kAmitaPalagaLa karuNisi kAyO || 1 ||

SaMkarAsurasEvita SEShagaruDA –
laMkAra muniSOBita |
paMkajanayana mInAMkajanaka pAda –
paMkajAsana vinuta tirupati veMkaTa birudAMka jaya jaya ||
SaMKacakragade paMkajadhara aka –
LaMka carita suTaMkagolida niSSaMka
laMkAdhiparipu raGupati ninna
kiMkararige kiMkaranu nAnu || 2 ||

maMdarOddhara mAdhava madhusUdana
naMda suMdaravigraha |
biMdumAdhava SrImukuMda SrImadAnaMda
vaMditAmaravRuMda vEdava taMda turagavanEri baMda ||
vRuMdAvanadoLagiMda yaSOdeya kaMda hari gO –
viMda SEShagiriyali niMda
maMdAkini paDedanE dhruvagoli –
daMdadi enagoli hayavadana || 3 ||

Leave a Reply

Your email address will not be published. Required fields are marked *

You might also like

error: Content is protected !!