Composer : Shri Purandara dasaru
ರಾಗ: ಹಿಂದೋಳ, ಏಕತಾಳ
ಗೋಕುಲದೊಳಗಿರಲಾರೆವಮ್ಮ | ಗೋಪ್ಯಮ್ಮ ಕೇಳೆ |
ಸಾಕು ಸಾಕು ನಮಗೇಕೀ ವ್ರಜವು | ಆ ಕೃಷ್ಣನ ಕಾಟದಿ || ಪ ||
ಪಾಲು ಮೊಸರು ಕದ್ದರೆ ಕದಿಲಿ | ಗೋಪ್ಯಮ್ಮ ಕೇಳೆ |
ಮೇಲಿಟ್ಟ ಬೆಣ್ಣೆ ಮೆದ್ದರೆ ಮೆಲಲಿ | ಗೋಪ್ಯಮ್ಮ ಕೇಳೆ |
ಈರೇಳು ಭುವನದೊಳೋಲಾಡುತ್ತಿರಲಿ ||
ಆಲಯವನು ಪೊಕ್ಕು ಭಾಳ ಸಂಭ್ರಮದಿ |
ಬಾಲೆಯರೆಲ್ಲರ ಬೆತ್ತಲೆ ಮಾಡಿಸಿ |
ಶ್ಯಾಲೆಗಳೆಲ್ಲವ ಮೇಲಕೆ ಹಾರಿಸಿ |
ಆಲಿಂಗಿಸಿಕೊಂಡು ಬರುತಾನಮ್ಮ || ೧ ||
ಮನೆಗೆ ತಾನಾಗಿ ಬಂದರೆ ಬರಲಿ | ಬಾಹೋ ವೇಳೆಯಲಿ |
ಗೆಣೆಯರ ಕೂಡಿಕೊಂಡು ಇರಲಿ | ಕರೆತಂದರೆ ತರಲಿ |
ಅನುಬಂಧನಾಗಿ ಇದ್ದರೆ ಇರಲಿ ||
ಅನುವು ನೋಡಿಕೊಂಡಾ ವೇಳೆಯಲಿ |
ಉಣಬಿಟ್ಟುಣಿಸಿ ಆಕಳ ಕರುಗಳ |
ಮನೆಯವರೆಲ್ಲರ ತಾನೇ ಎಬ್ಬಿಸಿ |
ಮನೆಯೆಲ್ಲ ಸೂರಾಡಿದನಮ್ಮ || ೨ ||
ಬಾರಿ ಬಾರಿಗೆ ಒಲಿದ ಕಳ್ಳ | ಯಶೋದೆ ಕೇಳೆ |
ಊರ ಹೆಂಗಳರ ಕೂಡಿದ ಗೊಲ್ಲ | ಗೋಪ್ಯಮ್ಮ ಕೇಳೆ |
ಯಾರ ಮುಂದ್ಹೇಳುವುದು ಈ ಸೊಲ್ಲ ||
ವಾರಿಗೆಯ ಸಂಸಾರ ಮಾಡುವನು |
ನಾರಿಯರೆಲ್ಲರ ನಂಬಿಸಿ ಕೆಡಿಪ ವಿ – |
ಕಾರ ಮಾಡದ ಹಾಗೆ ನೀ ಕರೆಸಿ |
ಪುರಂದರವಿಠಲಗೆ ಬುದ್ಧಿ ಹೇಳಮ್ಮ || ೩ ||
rAga: hiMdOLa , EkatALa
gOkuladoLagiralArevamma | gOpyamma kELe |
sAku sAku namagEkI vrajavu | A kRuShNana kATadi || pa ||
pAlu mosaru kaddare kadili | gOpyamma kELe |
mEliTTa beNNe meddare melali | gOpyamma kELe |
IrELu BuvanadoLOlADuttirali ||
Alayavanu pokku BALa saMBramadi |
bAleyarellara bettale mADisi |
SyAlegaLellava mElake hArisi |
AliMgisikoMDu barutAnamma || 1 ||
manege tAnAgi baMdare barali | bAhO vELeyali |
geNeyara kUDikoMDu irali | karetaMdare tarali |
anubaMdhanAgi iddare irali ||
anuvu nODikoMDA vELeyali |
uNabiTTuNisi AkaLa karugaLa |
maneyavarellara tAnE ebbisi |
maneyella sUrADidanamma || 2 ||
bAri bArige olida kaLLa | yaSOde kELe |
Ura heMgaLara kUDida golla | gOpyamma kELe |
yAra muMd~hELuvudu I solla ||
vArigeya saMsAra mADuvanu |
nAriyarellara naMbisi keDipa vi – |
kAra mADada hAge nI karesi |
puraMdaraviThalage buddhi hELamma || 3 ||
Leave a Reply