Ane bantaane

Composer : Shri Prasannavenkata dasaru

By Smt.Shubhalakshmi Rao

ಆನೆ ಬಂತಾನೆ ಬಂತಾನೆ ಬಂತಮ್ಮ
ದಾನವ ಕದಳಿಯ ಕಾನನ ಮುರಿಯುತ ||ಪ||

ಗುಂಗುರುಗುರುಳ ನೀಲಾಂಗ ಚೆಲ್ವಾನೆ
ಕಂಗಳಿಗ್ ಹೊಳೆವ ವ್ಯಾಂಘ್ರಾಗುಳಿ ಆನೆ
ಭಂಗಾರದಣುಗಂಟೆ ಶೃಂಗಾರದಾನೆ
ಮಂಗಳ ತಿಲಕದ ರಂಗನೆಂಬಾನೆ ||೧||

ಕೆಳದಿ ಗೋಪಿಯರೊಳು ಗೆಳೆತನದಾನೆ
ಸುಲಭದಿಂದೊಲಿಯುವ ಎಳೆಮರಿ ಆನೆ
ಘಲಿಳು ಘಳಿಲುರವದಿ ನಲಿದಾಡೋ ಆನೆ
ಮಲೆತವರೆದೆಮ್ಯಾಲೆ ತುಳಿದಾಡೋ ಆನೆ ||೨||

ನಳಿನಜ ಭವರಿಗೆ ಸಿಲುಕದ ಆನೆ
ಒಲವಿಂದ ಭಕುತರ ಸಲಹುವ ಆನೆ
ಹಲವು ಕವಿಗಳೀಗೆ ನಿಲುಕದ ಆನೆ
ಬಲ ಪ್ರಸನ್ವೇಂಕಟ ನಿಲಯನೆಂಬಾನೆ ||೩||


Ane baMtAne baMtAne baMtamma
dAnava kadaLiya kAnana muriyuta ||pa||

guMguruguruLa nIlAMga celvAne
kaMgaLig hoLeva vyAMGrAguLi Ane
bhaMgAradaNugaMTe SRuMgAradAne
maMgaLa tilakada raMganeMbAne ||1||

keLadi gOpiyaroLu geLetanadAne
sulaBadiMdoliyuva eLemari Ane
GaliLu GaLiluravadi nalidADO Ane
maletavaredemyAle tuLidADO Ane ||2||

naLinaja Bavarige silukada Ane
olaviMda Bakutara salahuva Ane
halavu kavigaLIge nilukada Ane
bala prasanvEMkaTa nilayaneMbAne ||3||

Leave a Reply

Your email address will not be published. Required fields are marked *

You might also like

error: Content is protected !!