Composer : Shri Kanakadasaru
ರಂಗನೆಂಥವನೆಂಥವನೆಲೆ ತಂಗಿ
ಅವನಂಗ ತಿಳಿಯದು ಭ್ರಹ್ಮಾದಿಗಳಿಗೆ [ಪ]
ಆಗಮವನು ತಂದಿಹನೆ ರಂಗ
ವೇಗದಿ ಗಿರಿಯ ಪೊತ್ತಿಹನೆ
ಮೂಗಿಂದ ಭೂಮಿಯ ನೆತ್ತಿಹನೆ ಕಂದ
ಕೂಗಲು ಕಂಬದಿಂ ಬಂದ ಕಾಣಕ್ಕ [೧]
ಧರೆಯನು ಈರಡಿ ಮಾಡಿದನೆ ಭೂ
ಸುರರಿಗೆ ದಾನವ ನೀಡಿದನೆ
ನೆರೆದು ಕಪಿ ಹಿಂಡು ಕೂಡಿದನೆ ಫಣಿ
ಶಿರದಲ್ಲಿ ಕುಣಿ ಕುಣಿದಾಡಿದ ಕಾಣಕ್ಕ [೨]
ಉಟ್ಟಿದ್ದು ಬಿಟ್ಟು ತಾ ನಿಂತಿಹನೆ ರಂಗ
ದಿಟ್ಟದ ತೇಜಿಯನೇರಿದನೆ
ದುಷ್ಟರನೆಲ್ಲ ಅಳುಹಿದನೆ ನಮ್ಮ
ಬಡದಾದಿ ಕೇಶವ ರಾಯ ಕಾಣಕ್ಕ [೩]
raMganeMthavaneMthavanele taMgi
avanaMga tiLiyadu BrahmaadigaLige [pa]
aagamavanu taMdihane raMga
vEgadi giriya pottihane
mUgiMda bhUmiya nettihane kaMda
kUgalu kaMbadiM baMda kANakka [1]
dhareyanu eeraDi maaDidane Boo
surarige daanava neeDidane
neredu kapi hiMDu kUDidane phaNi
shiradalli kuNi kuNidaaDida kaaNakka [2]
uTTiddu biTTu taa niMtihane raMga
diTTada tEjiyanEridane
duShTaranella aLuhidane namma
baDadaadi kEshava raaya kaaNakka [3]
Leave a Reply