Composer : Shri Vijayadasaru
ಕರುಣಿಸೋ ಕೃಷ್ಣ ಕರುಣಿಸೊ |
ಕರುಣಿಸಿದರೆ ನಾ ನಿನ್ನನೆಂದಿಗು ಮರೆಯೆ [ಪ]
ಭೂತಳದೊಳು ನಾನು ಈ ತನುವು ಪೊತ್ತು |
ಪಾತಕದಲಿ ಯಮಯಾತನೆ ಪಟ್ಟೆ
ಇಂದೆನ್ನ ಹೃದಯವೆಂಬೊ ಮಂದಿರದೊಳು |
ಬಂದು ವಾಸವಾಗೊ ಇಂದಿರೆ ರಮಣ (೧)
ಹಿಂದಿನ ಅವಗುಣ ಒಂದೂ ಎಣಿಸದೆ |
ಮುಂದೆ ಆ ದೋಷಕ್ಕೆ ಮನವೆರಗಿಸದೆ
ಪಾಪ ಪುರುಷನೆಂಬೊ ಪಾಪಿಯ ಕೈಗೆ |
ಪೋಪಗೊಡದೆ ಎನ್ನ ಕಾಪಾಡೊ ರನ್ನ (೨)
ಅಂತ್ಯಕಾಲದಲಿ ಅಂತಕರು ಬಂದು |
ನಿಂತಾಗಲಿ ನಿನ್ನ ಚಿಂತನೆ ಒದಗಲಿ
ಕನಸಿನೊಳಗೆ ನಿನ್ನ ನೆನಸಿಕೊಂಬಂತೆ |
ಮನಸು ಸುಸ್ಥಿರವಾಗಿ ಅನುಗಾಲವಿರಲಿ (೬)
ಇದ್ದಾಗ ದಾಸರ ದಾಸನೆನಿಸೊ ಬೇಗ |
ಅಬ್ಧಿಶಯನ ಸಿರಿ ವಿಜಯವಿಠ್ಠಲ (೭)
karuNisO kRuShNa karuNiso |
karuNisidare nA ninnaneMdigu mareye [pa]
BUtaLadoLu nAnu I tanuvu pottu |
pAtakadali yamayAtane paTTe
iMdenna hRudayaveMbo maMdiradoLu |
baMdu vAsavAgo iMdire ramaNa (1)
hiMdina avaguNa oMdU eNisade |
muMde A dOShakke manaveragisade
pApa puruShaneMbo pApiya kaige |
pOpagoDade enna kApADo ranna (2)
aMtyakAladali aMtakaru baMdu |
niMtAgali ninna ciMtane odagali
kanasinoLage ninna nenasikoMbaMte |
manasu susthiravAgi anugAlavirali (6)
iddAga dAsara dAsaneniso bEga |
abdhishayana siri vijayaviThThala (7)
Leave a Reply