Composer : Shri Purandara dasaru
ರಾಗ: ಶುದ್ಧಧನ್ಯಾಸಿ , ಆದಿತಾಳ
ಆಡಹೋಗಲಿ ಬೇಡವೋ ರಂಗಯ್ಯ |
ಬೇಡಿಕೊಂಬೆನೊ ನಿನ್ನನು ರಂಗಯ್ಯ || ಪ ||
ಗಾಡಿಕಾಂತೇರ ಕೂಡ್ಯಾಡಿ ಕೆಡಲಿಬೇಡ |
ಕಾಡುವರೊ ನಿನ್ನನು ಕೃಷ್ಣಯ್ಯ || ಅ.ಪ ||
ನೀರೊಳು ಮುಳುಗೆಂಬೊರೊ ಬೆನ್ನಿನ ಮೇಲೆ |
ಭಾರವ ಹೊರಿಸುವರೊ ||
ಕೋರೆದಾಡಿಯ ಮುದ್ದಾಡಿ ಕೆಡಿಸುವರೋ |
ಕರುಳಹಾರನೆಂದು ಕಾಡುವರೊ ರಂಗಯ್ಯ || ೧ ||
ಪುಟ್ಟರೂಪನೆಂಬರೋ ಆ ಕೈಯಲ್ಲಿ |
ಕೊಡಲಿ ಪಿಡಿದನೆಂಬೊರೋ ||
ಕಿಡಿಗಣ್ಣ ರುದ್ರನ ವರವುಳ್ಳ ದಶಕಂಠನ |
ಕೊಂದನ ಇವನೆಂಬರೋ ಕೃಷ್ಣಯ್ಯ || ೨ ||
ಬೆಣ್ಣೆಗಳ್ಳನೆಂಬರೊ ಹೆಣ್ಣುಗಳನೆಲ್ಲ |
ಭಂಗ ಮಾಡಿದನೆಂಬೊರೋ ||
ಪುಟ್ಟ ಕುದುರೆಯನೇರಿ ಕಲ್ಕಿರೂಪನಾಗಿ |
ಪುರಂದರವಿಠಲ ಬಾ ಎಂಬೊರೋ || ೩ ||
rAga: SuddhadhanyAsi , AditALa
ADahOgali bEDavO raMgayya |
bEDikoMbeno ninnanu raMgayya || pa ||
gADikAMtEra kUDyADi keDalibEDa |
kADuvaro ninnanu kRuShNayya || a.pa ||
nIroLu muLugeMboro bennina mEle |
BArava horisuvaro ||
kOredADiya muddADi keDisuvarO |
karuLahAraneMdu kADuvaro raMgayya || 1 ||
puTTarUpaneMbarO A kaiyalli |
koDali piDidaneMborO ||
kiDigaNNa rudrana varavuLLa daSakaMThana |
koMdana ivaneMbarO kRuShNayya || 2 ||
beNNegaLLaneMbaro heNNugaLanella |
BaMga mADidaneMborO ||
puTTa kudureyanEri kalkirUpanAgi |
puraMdaraviThala bA eMborO || 3 ||
Leave a Reply