Composer : Harapanahalli Ramacharyaru [Indiresha ankita]
ಹರಪನಹಳ್ಳಿ ಶ್ರೀ ರಾಮಾಚಾರ್ಯ ದಾಸರ ಕೃತಿ
( ಇಂದಿರೇಶ ಅಂಕಿತ )
ರಾಗ: ಭೂಪಾಳಿ ಖಂಡಛಾಪುತಾಳ
ಚಂದಿರ ಉದಯವಾಯಿತೇ ಕೃಷ್ಣಾರ್ಯರೆಂಬೋ || ಪ ||
ಚಂದಿರನುದಿಸಿದ ತನ್ನಯ
ಸುಂದರಿ ಸೂರಿಗಳ ಸುಕೃತ |
ಬಿಂದ್ಯವೆಂಬೋ ಉದಯಾಚಲದ
ಕಂದರದಿಂ ಕುಣಿದು ಬಂದು || ಅ ಪ ||
ಮಂಗಳಾಂಗ ಮನುಜರ ದುರಿ –
ತಂಗಳೊಳು ಗಾಢ ತಿಮಿರ |
ಭಂಗಗೈದು ಸುಜನರ ಬೆಳ –
ದಿಂಗಳು ಸೂರಾಡುವಂಥ || ೧ ||
ರಾಜಿಸುವನು ಕುಜನರ ಮುಖಾಂ –
ಬುಜಗಳನೆ ಬಳಲಿ ಸೋಮ |
ತೇಜ ಸುಜನರೆಂಬೋ ಕುಮುದ –
ರಾಜಿಗಳ ವಿಕಾಸಗೈವ || ೨ ||
ಇಂದಿರೇಶನೆ ಪರದೈವ –
ವೆಂದು ಜಗಕೆ ಸಾರುತಿರಲು , ಆ – |
ನಂದತೀರ್ಥರ ಮತವೆಂಬೋ
ಸಿಂಧುರಾಜ ವರ್ಧಿಸಿದನ || ೩ ||
harapanahaLLi SrI rAmAcArya dAsara kRuti
( iMdirESa aMkita )
rAga: BUpALi KaMDaCAputALa
caMdira udayavAyitE kRuShNAryareMbO || pa ||
caMdiranudisida tannaya
suMdari sUrigaLa sukRuta |
biMdyaveMbO udayAcalada
kaMdaradiM kuNidu baMdu || a pa ||
maMgaLAMga manujara duri –
taMgaLoLu gADha timira |
BaMgagaidu sujanara beLa –
diMgaLu sUrADuvaMtha || 1 ||
rAjisuvanu kujanara muKAM –
bujagaLane baLali sOma |
tEja sujanareMbO kumuda –
rAjigaLa vikAsagaiva || 2 ||
iMdirESane paradaiva –
veMdu jagake sArutiralu , A – |
naMdatIrthara mataveMbO
siMdhurAja vardhisidana || 3 ||
Leave a Reply