Bit Hyange irali – appavaru

Composer : Harapanahalli Shri Venkatadasaru [ Varada venkatavittala]

By Smt.Nandini Sripad , Blore

ಶ್ರೀ ಅಪ್ಪಾವರ ಮೇಲೆ ಹರಪನಹಳ್ಳಿ ಶ್ರೀ ವೆಂಕಟದಾಸರ ಕೃತಿ
(ವರದ ವೆಂಕಟವಿಠಲ ಅಂಕಿತರು)
ರಾಗ: ಆನಂದಭೈರವಿ ಮಿಶ್ರಛಾಪುತಾಳ

ಬಿಟ್ಹ್ಯಾಂಗೆ ಇರಲಿನಾ ಕೃಷ್ಣಾರ್ಯರನು ಇ – |
ನ್ನೆಷ್ಟು ದಿವಸಕೆ ಬಾಹೋನೇ || ಪ ||
ಇಷ್ಟು ದಿವಸವು ಮಹಿಮೆ ತಿಳಿಯಲಿಲ್ಲವೆ ನಿಂಗೆ |
ಕಟ್ಟಿ ಹಾಕಿದ ತನ್ನ ಕರುಣಪಾಶದಿ ಸಖಿಯೆ || ಅ ಪ ||

ಮಂದಗಮನೆ ಕೇಳೆ , ಬಂದು ಊರಿಗೆ ಪ್ರಭೂ |
ಒಂದೇಳು ದಿನವಾಯಿತೇ |
ಸಂದೇಹದವಳು ನಾನೆಂದು ತಿಳಿದದಕೆನ್ನ |
ಸುಂದರಗೇ ಬ್ಯಾಸರಾಯಿತೇ |
ಒಂದೂ ನುಡಿಯದೆ ದೋಷವೃಂದಗಳೆಣಿಸಿದರೆ |
ಮಂದಿಯಲಿ ಮಾನ ಹೋಯಿತೇ ||
ಒಂದೂ ತಿಳಿಯದಲೆ ನಾ ಹೊಂದಿದಾನಂದದಿರೆ |
ಒಂದಿರುಳೇ ಕಲೆತು ಆನಂದಪಡಿಸಿದ ಸಖನಾ || ೧ ||

ಮನಸಿನೊಳಗಿದ್ದದನು ನೆನೆಸಿಕೊಳ್ಳುತಿರಲು ಅದ – |
ನನುಸರಿಸಿ ತಾ ನುಡಿದನೇ |
ಮುನಿಸ್ಯಾಗಬ್ಯಾಡೆಂದು ಮುದ್ದಿಸಿ ಕರಪಿಡಿದು |
ಘನ ಸುಸೇವಕಳೆಂದನೇ |
ವನಿತೆ ಕೇಳೆಲೆ ನೀನು , ಮಾಡಿದಪರಾಧಗಳ |
ಎಣಿಸಿ ಕಳೆದಿಹೆನೆಂದನೇ ||
ಕನಸಿನಲಿ ಬಂದು ಕಾಣಿಸಿಕೊಂಬೆ ಎಂದು ದು – |
ಮ್ಮನಸನಾಗ ಬ್ಯಾಡೆಂದು ನುಡಿದಂಥ ಸುಮನಸನಾ || ೨ ||

ಧೀರಗಾಭರಣವನು ಕೇಳಲೇಕಾಂತದಲಿ |
ಚಾರುವಸ್ತ್ರವನಿತ್ತನೇ |
ಬಾರಿಬಾರಿಗೆ ಬೇಡಿಕೊಂಡು ನಮೋನಮೋ ಮಾಡೆ |
ಭೂರಿ ಹರಸುತ ನಿಂದನೇ |
ಊರಿಗ್ಹೋಗುವೆನೆಂದು ಮೋರೆ ನೋಡುತ ಎನಗೆ |
ಭಾರಿ ವಸ್ತ್ರವನಿತ್ತನೇ ||
ಮಾರಪಿತ ವರದವೆಂಕಟವಿಠ್ಠಲನ ದಾಸಾ |
ಬಾರದಿಪ್ಪೆನೆ ಎಂದು ಬಹುಭಾಷೆ ಕೊಟ್ಟವನಾ || ೩ ||


SrI appAvara mEle harapanahaLLi SrI veMkaTadAsara kRuti
(varada veMkaTaviThala aMkitaru)
rAga: AnaMdaBairavi miSraCAputALa

biT~hyAMge iralinA kRuShNAryaranu i – |
nneShTu divasake bAhOnE || pa ||
iShTu divasavu mahime tiLiyalillave niMge |
kaTTi hAkida tanna karuNapASadi saKiye || a pa ||

maMdagamane kELe , baMdu Urige praBU |
oMdELu dinavAyitE |
saMdEhadavaLu nAneMdu tiLidadakenna |
suMdaragE byAsarAyitE |
oMdU nuDiyade dOShavRuMdagaLeNisidare |
maMdiyali mAna hOyitE ||
oMdU tiLiyadale nA hoMdidAnaMdadire |
oMdiruLE kaletu AnaMdapaDisida saKanA || 1 ||

manasinoLagiddadanu nenesikoLLutiralu ada – |
nanusarisi tA nuDidanE |
munisyAgabyADeMdu muddisi karapiDidu |
Gana susEvakaLeMdanE |
vanite kELele nInu , mADidaparAdhagaLa |
eNisi kaLediheneMdanE ||
kanasinali baMdu kANisikoMbe eMdu du – |
mmanasanAga byADeMdu nuDidaMtha sumanasanA || 2 ||

dhIragABaraNavanu kELalEkAMtadali |
cAruvastravanittanE |
bAribArige bEDikoMDu namOnamO mADe |
BUri harasuta niMdanE |
Urig~hOguveneMdu mOre nODuta enage |
BAri vastravanittanE ||
mArapita varadaveMkaTaviThThalana dAsA |
bAradippene eMdu bahuBAShe koTTavanA || 3 ||

Leave a Reply

Your email address will not be published. Required fields are marked *

You might also like

error: Content is protected !!