Nagu Mogada

Composer : Shri Tande Venkatesha vittala

By Smt.Shubhalakshmi Rao

ನಗುಮೊಗದಗಜೇ ನೀ ಬಾರಮ್ಮಾ |
ನಿನ್ನ ಅಗಣಿತ ಮಹಿಮೆಯ ತೋರಮ್ಮಾ || ಪ ||

ನಿಗಮ ತುರಗ ಪನ್ನಗ ಭೂಷಣ ಭುಜ-
ಯುಗಳಾಲಿಂಗನ ಮಿಗೆ ಸುಖ ಭಾಗಿನಿ || ಅ.ಪ ||

ಚರಣಾಭರಣ ಸುನಾದೆ, ವರ, ಹರಿ ನಡು ಮೇಖಲಾ ಮೋದೆ |
ಕರ ಕಿಂಕಿಣಿ ಕಿಣಿ ಸುಖದೇ ಪರಿ ಸ್ಫುರಿತ ಪೀತಾಂಬರೇ ವಿಭುದೇ |
ಕೀರವಾಣಿ ಶರ್ವಾಣಿ ವಿರಾಗಿಣಿ ಕರಣಾಮೃತ
ರಸಧುನಿ ಹರಿ ಭಗಿನೀ || ೧ ||

ದಿತಿ ಜವಿತಾನಕೃತಾಂತೆ, ಹಿಮ, ಭೃತ ಪರ್ವತಸುತೆ ಶಾಂತೆ |
ನತ ಪಾವನೆ ಜಯವಂತೆ ಸುರಪತಿವಿನಮಿತ
ಪದಪ್ರಾಂತೆ |
ಮತಿಪ್ರೇರಕೆ ಸದ್ಗತಿ ಕೊಡು ಪತಿ ಹೃದ್ಗತ
ಮೂರ್ತಿಯ ಚಿತ್ ಪಥದಲಿ ತೋರಿ || ೨ ||

ಪಂಕಜಾಕ್ಷಿ ಪಾರ್ವತಿಯೆ, ಶಿವೆ, ಶಂಕರಿ ಮೃಡಣಿ
ಭಾರ್ಗವಿಯೆ |
ಸಂಕಟ ಹರೇ ಗತಮಾಯೇ, ಶಿಖಿ, ಅಂಕಿತ ಗಣಪರ
ತಾಯೇ |
ಕಿಂಕರ ಜನ ಹೃತ್ ಪಂಕಜಾರ್ಕೆ ತಂದೆ
ವೇಂಕಟೇಶ ವಿಠಲನ ಬಿಂಕದ ಸೋದರಿ || ೩ ||


nagumogadagajE nI bArammA |
ninna agaNita mahimeya tOrammA || pa ||

nigama turaga pannaga BUShaNa Buja-
yugaLAliMgana mige suKa BAgini || a.pa ||

caraNABaraNa sunAde, vara, hari naDu mEKalA mOde |
kara kiMkiNi kiNi suKadE pari sPurita pItAMbarE viBudE |
kIravANi SarvANi virAgiNi karaNAmRuta
rasadhuni hari BaginI || 1 ||

diti javitAnakRutAMte, hima, BRuta parvatasute SAMte |
nata pAvane jayavaMte surapativinamita
padaprAMte |
matiprErake sadgati koDu pati hRudgata
mUrtiya cit pathadali tOri || 2 ||

paMkajAkShi pArvatiye, Sive, SaMkari mRuDaNi
BArgaviye |
saMkaTa harE gatamAyE, SiKi, aMkita gaNapara
tAyE |
kiMkara jana hRut paMkajArke taMde
vEMkaTESa viThalana biMkada sOdari || 3 ||

Leave a Reply

You might also like

error: Content is protected !!