Chakshu Shravane Shesha

Composer : Shri Gurugovinda dasaru

By Smt.Shubhalakshmi Rao

ಚಕ್ಷು ಶ್ರವನೆ ಶೇಷಾ – ಪಾಲಯ ||ಪ||
ಕುಕ್ಷಿಯೆ ಪಾದವೆಂಬ ಲಕ್ಷಣ ನಿನದಯ್ಯ |
ಈಕ್ಷಿಸೊ ಕರುಣ ಕ | ಟಾಕ್ಷದಿ ನಾಗನೆ ||ಅ.ಪ.||

ಅಕ್ಷಾರಿಪದಪಾಂಸು ಧರನೇ |
ವಾಯು ಪುಚ್ಛಾಶ್ರಯಿಸಿ ಜಗಧಾರನೇ ||
ಪಕ್ಷಿ ವಾಹಗೆ ಶಯ್ಯ |
ಪಕ್ಷೀಯ ಸಮ ಪೂರ್ವತ್ರ್ಯಕ್ಷನೆ ಸೋಮರ್ಕ |
ಅಕ್ಷಿ ಅನಲ ಕಾಯೊ (೧)

ತಾಮಸ್ಸಾಹಂ ತತ್ವ ಮಾನಿಯೇ |
ಕಾಯೊ ಭೂಮಿ ಧರನೆ ಬಹು ಮಾನಿಯೇ ||
ಆಮಹ ಪಂಚರಾ |
ತ್ರಗಮಗಳ್ ಮಾನಿ ಕಾಮಿತ ಪಾಲಿಸೊ |
ಸ್ವಾಮಿ ನಿಮಗೆ ನಮೊ (೨)

ವಾಸವ ವಂದಿತ ವಾತಾಶನಾ |
ನಿನ್ನ ಆಸನ ಮಾಡಿಹ ರಮೇಶನಾ ||
ಹಾಸಿಗೆ ಎನಿಸುತ್ತ |
ಲೇಸು ಸೇವಿಸಿ ಹರಿ ಸಾಸಿರ ನಾಮನ |
ದಾಸನೆಂದೆನಿಸಿದೆ (೩)

ಮುಕ್ತಿಗೆ ಯೋಗ್ಯರ ಮಾರ್ಗದಾ |
ಹರಿ ಭಕ್ತಿಯ ಪಾಲಿಸೊ ದೀರ್ಘದಾ ||
ಸಕ್ತಿಯಾಗಲಿ ಮನ |
ಸೂಕ್ತಮೇಯನಲ್ಲಿ ಉಕ್ತಿ ಇದೊಂದನ |
ಇತ್ತು ಪಾಲಿಸು ಶೇಷ (೪)

ಕಾಳೀಯ ಮಡುವಿಗೆ ಹಾರ್ದನ |
ಮತ್ತೆ ಕಾಳೀಯ ನೆಡೆಯಲಿ ಕುಣಿದನಾ ||
ಕಾಳಿ ರಮಣ ಗುರು |
ಗೋವಿಂದ ವಿಠಲನ ಭಾಳ ತುತಿಪ ಮನ |
ಪಾಲಿಸೊ ಶೇಷ ಗುರು (೫)


cakShu Sravane SEShA – pAlaya ||pa||
kukShiye pAdaveMba lakShaNa ninadayya |
IkShiso karuNa ka | TAkShadi nAgane ||a.pa.||

akShAripadapAMsu dharanE |
vAyu pucCASrayisi jagadhAranE ||
pakShi vAhage Sayya |
pakShIya sama pUrvatryakShane sOmarka |
akShi anala kAyo (1)

tAmassAhaM tatva mAniyE |
kAyo BUmi dharane bahu mAniyE ||
Amaha paMcarA |
tragamagaL mAni kAmita pAliso |
svAmi nimage namo (2)

vAsava vaMdita vAtASanA |
ninna Asana mADiha ramESanA ||
hAsige enisutta |
lEsu sEvisi hari sAsira nAmana |
dAsaneMdeniside (3)

muktige yOgyara mArgadA |
hari Baktiya pAliso dIrGadA ||
saktiyAgali mana |
sUktamEyanalli ukti idoMdana |
ittu pAlisu SESha (4)

kALIya maDuvige hArdana |
matte kALIya neDeyali kuNidanA ||
kALi ramaNa guru |
gOviMda viThalana BALa tutipa mana |
pAliso SESha guru (5)

Leave a Reply

Your email address will not be published. Required fields are marked *

You might also like

error: Content is protected !!