Composer : Shri Tande Venkatesha vittala
ನಾಗ ನಾಯಕಾ ಪಾಲಿಸಾನೇಕ |
ಭೋಗ ಧಾರಕಾ ||ಪ||
ಆಗಮ ಘೋಷಕ ರಾಘವನನುಜರ
ತಾಘ ನಾಗ ಹರಿ ಭೋಗತ ಶೋಕ ||ಅ. ಪ||
ಚಕ್ಷುಶ್ರವ ಗಾತ್ರಾ ಪೂರ್ವ ತ್ರಿನೇತ್ರ |
ಪಕ್ಷಿ ಸಮ ಕ್ಷೇತ್ರ |
ತಕ್ಷಕ ಪಾನಿಲ ಭಕ್ಷಕ ಹರ ಭುಜ |
ರಕ್ಷಾ ಬಂಧ ಪರೀಕ್ಷಿತ ಕಾಲ ||೧||
ವಾರುಣೀವರಾ ಪಾತಾಳ ವಿಹಾರಾ |ಧಾರುಣೀಧಾರಾ |
ಪಾರುಗಾಣಿಸೋ ತವಾರಾಧನೆ |
ಇತ್ತೀರದ್ವಾರ ಹರಿ ತೋರಿಸೋ ತ್ವರದೀ ||೨||
ದೋಷ ಹಾರಕಾ ಜೀವಾಭಿದ ಹಲಿ | ಶೇಷನಾಮಕಾ |
ಪೋಷಕ ತಂದೆ ವೆಂಕಟೇಶ ವಿಠ್ಠಲನ |
ದಾಸರೊಳಿಡು ಬಯಲಾಸೆಯ ಬಿಡಿಸಿ ||೩||
nAga nAyakA pAlisAnEka |
bhOga dhArakA ||pa||
Agama ghOShaka rAghavananujara
tAgha nAga hari bhOgata shOka ||a. pa||
cakShuSrava gAtrA pUrva trinEtra |
pakShi sama kShEtra |
takShaka pAnila bhakShaka hara bhuja |
rakShA baMdha parIkShita kAla ||1||
vAruNIvarA pAtALa vihArA |dhAruNIdhArA |
pArugANisO tavArAdhane |
ittIradvAra hari tOrisO tvaradI ||2||
dOSha hArakA jIvAbhida hali | SEShanAmakA |
pOShaka taMde veMkaTESa viThThalana |
dAsaroLiDu bayalAseya biDisi ||3||
Leave a Reply