Composer : Shri Prasannavenkata dasaru
ನೀರಾಂಜನೇಯ ಧೀರ ಮಾರುತಿರಾಯ [ಪ]
ಎರಗಿದೆ ನಿನ್ನ ಚರಣಗಳಿಗಿಂದೆ
ಹರಿ ಕರುಣ ಕೊಡಿಸಿ ಪೊರೆ ಕರುಣಾನಿಧೆ [ಅ.ಪ]
ಉದಧಿಲಂಘಿಸಿ ಮುದದಿ ಮುದ್ರಿಕೆಯ ಸಲ್ಲಿಸಿ
ಒದಗಿದ ಅಸುರರ ವಧಿಸಿ, ಧರ್ಮಜನನುಜನೆನಿಸಿ |
ಬಾದರಾಯಣಸೂತ್ರ ಬುಧಜನಕೊದಗಿಸಿ,
ಮೆದಿನಿಯೊಳಗೆ ಮೆರೆದಿ ನಿಜದಾಸನೆನಿಸಿ [೧]
ನೀನೊಲಿಯೆ ಹರಿ ತಾನೊಲಿವ ಜಗದಿ
ನಿನ್ನೊಲುಮೆಯಿಂದಲೆ ಮುಕುತಿ ಜ್ಞಾನವು ನಿಜದಿ |
ನಿನ್ನ ಮಹಿಮೆಗಳಿಗೆಣೆ ಗಾಣೆ ಸುಜ್ಞಾನನಿಧಿ
ಜನುಮ ಜನುಮಕು ನೀ ಗುರುವಾಗೊ ದಯದೀ [೨]
ನೀರ ಹನುಮಾ ನೆನೆವೆ ನಿನ್ನ ನಾಮ
ಕರಿಗಡದ ಕೋಟೆಯಲಿ ನೆಲೆ ನಿಂತ ಭೀಮ
ಸಾರಿದೆ ಪರ ತತ್ವವಾದ ಮತ ಪ್ರವಾಹ್[ಭಾವಿ] ಬ್ರಹ್ಮ
ಸಿರಿ ಪ್ರಸನ್ ವೆಂಕಟಗೆ ಪೂರ್ಣ ಪ್ರೇಮ [೩]
neerAMjanEya dheera mArutirAya [pa]
eragide ninna charaNagaLigiMde
hari karuNa koDisi pore karuNAnidhe [a.pa]
udadhilaMghisi mudadi mudrikeya sallisi
odagida asurara vadhisi, dharmajananujanenisi |
bAdarAyaNasUtra budhajanakodagisi,
mediniyoLage meredi nijadAsanenisi [1]
neenoliye hari taanoliva jagadi
ninnolumeyiMdale mukuti j~jAnavu nijadi |
ninna mahimegaLigeNe gANe suj~jAnanidhi
januma janumaku nee guruvAgo dayadI [2]
neera hanumA neneve ninna nAma
karigaDada kOTeyali nele niMta bheema
sAride para tatvavAda mata pravAh[bhAvi] brahma
siri prasan veMkaTage pUrNa prEma [3]
Leave a Reply