Composer : Shri Gopala dasaru
ಇದು ಏನೊ ಚರಿತ ಯಂತ್ರೋದ್ಧಾರ ॥ ಪ ॥
ಇದು ಏನೊ ಚರಿತ ಶ್ರೀ ಪದುಮನಾಭನ ದೂತ
ಸದಾ ಕಾಲ ಸರ್ವರ ಹೃದಯಾಂತರ್ಗತನಾಗಿ॥ ಅ ಪ ॥
ವಾರಿಧಿ ಗೋಷ್ಪಾದ ನೀರಂತೆ ದಾಟಿದ
ಧೀರ ಯೋಗಾಸನಧಾರಿಯಾಗಿಪ್ಪುದು ॥ 1 ॥
ದುರುಳ ಕೌರವರನ್ನು ವರ ಗದೆಯಲಿ ಕೊಂದ
ಕರದಲ್ಲಿ ಜಪಮಾಲೆ ಧರಿಸಿ ಎಣಿಸುವುದು ॥ 2 ॥
ಹೀನ ಮತಗಳನ್ನು ವಾಣಿಲಿ ತರಿದಂಥ
ಜ್ಞಾನವಂತನೆ ಹೀಗೆ ಮೌನವಾಗಿಪ್ಪುದು ॥ 3 ॥
ಸರ್ವವ್ಯಾಪಕ ನೀನು ಪೂರ್ವಿಕ ದೇವನೆ
ಶರ್ವನ ಪಿತ ಬಂದು ಪರ್ವತ ಸೇರಿದ್ದು ॥ 4 ॥
ಗೋಪಾಲವಿಠಲಗೆ ನೀ ಪ್ರೀತಿ ಮಂತ್ರಿಯು
ವ್ಯಾಪಾರ ಮಾಡದೆ ಈ ಪರಿ ಕುಳಿತದ್ದು ॥ 5 ॥
idu Eno carita yaMtrOddhAra || pa ||
idu Eno carita SrI padumanABana dUta
sadA kAla sarvara hRudayAMtargatanAgi|| a pa ||
vAridhi gOShpAda nIraMte dATida
dhIra yOgAsanadhAriyAgippudu || 1 ||
duruLa kauravarannu vara gadeyali koMda
karadalli japamAle dharisi eNisuvudu || 2 ||
hIna matagaLannu vANili taridaMtha
j~jAnavaMtane hIge maunavAgippudu || 3 ||
sarvavyApaka nInu pUrvika dEvane
Sarvana pita baMdu parvata sEriddu || 4 ||
gOpAlaviThalage nI prIti maMtriyu
vyApAra mADade I pari kuLitaddu || 5 ||
Leave a Reply