Nenevenu Anudina

Composer : Shri Purandara dasaru

ನೆನೆವೆನು ಅನುದಿನ ನಿಮ್ಮ ಮಹಿಮೆಯನು,
ಮಧ್ವರಾಯ |

ಸನಕಾದಿವಂದ್ಯ ಸೇವಿತ ಪದಾಬ್ಜ |
ಮಧ್ವರಾಯ [ಅ.ಪ]

ಕಲಿಮಲದಿಂ ಕಲುಷಿತವಾಗಲು ಜ್ಞಾನ , ಮಧ್ವರಾಯ
ನಳಿನಾಕ್ಷನಾಜ್ಞದಿ ಇಳೆಯೊಳಗುದಿಸಿದ್ಯೋ, ಮಧ್ವರಾಯ |೧|

ಗೋವಿತ್ತ ವಿಪ್ರಗೆ ನಿರುತ ಮೋಕ್ಷವನಿತ್ಯೋ, ಮಧ್ವರಾಯ
ಸಾವಿರ ಬೀಜರೂಪದಿ ಸಾಲದ ಹಣವಿತ್ತ್ಯೋ , ಮಧ್ವರಾಯ |೨|

ದಶ ಉಪನಿಷದ್ಗೀತ ಶ್ರುತಿಭಾಷ್ಯ ಮಾಡಿದ್ಯೋ, ಮಧ್ವರಾಯ
ಸುಶಾಸ್ತ್ರ ತಾತ್ಪರ್ಯ ಪ್ರಕರಣ ರಚಿಸಿದ್ಯೋ, ಮಧ್ವರಾಯ |೩|

ಸುಜನರ ಹೃದಯದಿ ಸೇರಿದ್ದ ತಮವನ್ನು, ಮಧ್ವರಾಯ
ನಿಜ ಜ್ಞಾನ ರವಿಯಾಗಿ ಉದಿಸಿ ನೀ ಹರಿದ್ಯೆಯ, ಮಧ್ವರಾಯ |೪|

ವ್ಯಾಸದೇವರಿಗೆ ವಂದಿಸಿ ಬದರಿಲಿ, ಮಧ್ವರಾಯ
ಶ್ರೀಶ ಪುರಂದರವಿಠ್ಠಲದಾಸ ನಮ್ಮ, ಮಧ್ವರಾಯಾ |೫|


nenevenu anudina nimma mahimeyanu,
madhvarAya |

sanakAdivaMdya sEvita padAbja |
madhvarAya [a.pa]

kalimaladiM kaluShitavAgalu j~jAna , madhvarAya
naLinAkShanAj~jadi iLeyoLagudisidyO, madhvarAya |1|

gOvitta viprage niruta mOkShavanityO, madhvarAya
sAvira bIjarUpadi sAlada haNavittyO , madhvarAya |2|

dasha upaniShadgIta SrutiBAShya mADidyO, madhvarAya
suSAstra tAtparya prakaraNa racisidyO, madhvarAya |3|

sujanara hRudayadi sEridda tamavannu, madhvarAya
nija j~jAna raviyAgi udisi nI haridyeya, madhvarAya |4|

vyAsadEvarige vaMdisi badarili, madhvarAya
SrISa puraMdaraviThThaladAsa namma, madhvarAyA |5|

Leave a Reply

Your email address will not be published. Required fields are marked *

You might also like

error: Content is protected !!